20.1 C
Munich
Home News Shivamogga:ಶಿವಮೊಗ್ಗ:ಜೋಕಾಲಿ ಆಡುವಾಗ ಕುಣಿಕೆ ಬಿಗಿದು 9 ವರ್ಷದ ಬಾಲಕಿ ಸಾವು

Shivamogga:ಶಿವಮೊಗ್ಗ:ಜೋಕಾಲಿ ಆಡುವಾಗ ಕುಣಿಕೆ ಬಿಗಿದು 9 ವರ್ಷದ ಬಾಲಕಿ ಸಾವು

ಲಕ್ಕಿನಕೊಪ್ಪ ಗ್ರಾಮದಲ್ಲಿ ಜೋಕಾಲಿ ಆಟವಾಡುತ್ತಿದ್ದ ಬಾಲಕಿ ಸಾವಿಗೀಡಾದ ಸ್ಥಳದ ದೃಶ್ಯ
ಶಿವಮೊಗ್ಗದಲ್ಲಿ ಜೋಕಾಲಿ ಅಪಘಾತ: 9 ವರ್ಷದ ಬಾಲಕಿ ಸಾವಿನ ದುರ್ಘಟನೆ

ಶಿವಮೊಗ್ಗ ,ಏಪ್ರಿಲ್,24,2026(www.kannadapost.com):ಜಿಲ್ಲೆಯ ಲಕ್ಕಿನಕೊಪ್ಪದಲ್ಲಿ ಹೃದಯವಿದ್ರಾವಕ ಘಟನೆ ನಡೆದಿದೆ. ಜೋಕಾಲಿಯಲ್ಲಿ ಆಟವಾಡುತ್ತಿದ್ದ ವೇಳೆ ಕುಣಿಕೆ ಬಿಗಿದು 9 ವರ್ಷದ ಬಾಲಕಿ ಮೃತಪಟ್ಟಿದ್ದಾಳೆ.

ಮೃತ ಬಾಲಕಿಯನ್ನು Vidyānagar Shivamogga ನಿವಾಸಿ ಪ್ರಣಮ್ಯ ಎಂದು ಗುರುತಿಸಲಾಗಿದೆ. ಮೂರು ದಿನಗಳ ಹಿಂದೆ ನಡೆದಿದ್ದ ಈ ಘಟನೆ ಇದೀಗ ತಡವಾಗಿ ಬೆಳಕಿಗೆ ಬಂದಿದೆ.

ಬೇಸಿಗೆ ರಜೆ ಹಿನ್ನೆಲೆಯಲ್ಲಿ ಪ್ರಣಮ್ಯ ತನ್ನ ಚಿಕ್ಕಮ್ಮನ ಮನೆಗೆ, ಶಿವಮೊಗ್ಗ ತಾಲೂಕಿನ ಲಕ್ಕಿನಕೊಪ್ಪಕ್ಕೆ ಬಂದಿದ್ದಳು. ಈ ವೇಳೆ ಪಂಚೆಯಿಂದ ಜೋಕಾಲಿ ಮಾಡಿಕೊಂಡು ಆಟವಾಡುತ್ತಿದ್ದಾಗ ಅಕಸ್ಮಾತ್ ಕುಣಿಕೆ ಬಿಗಿದು ಉಸಿರುಗಟ್ಟಿ ಸಾವನ್ನಪ್ಪಿದ್ದಾಳೆ ಎಂಬ ಮಾಹಿತಿ ಲಭ್ಯವಾಗಿದೆ.

ಈ ಸಂಬಂಧ Tunganagar Police Station ನಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಮುಂದುವರೆಸಿದ್ದಾರೆ.

A 9-year-old girl died in Shivamogga after getting strangled while playing on a swing in Lakkinakoppa. Case registered at Tunganagar Police Station.


Shivamogga (April 24): In a tragic incident reported from Lakkinakoppa, a 9-year-old girl lost her life after getting strangled while playing on a makeshift swing.

The deceased has been identified as Pranamya, a resident of Vidyānagar Shivamogga. The incident occurred three days ago but came to light only recently.

She had come to her aunt’s house during summer vacation. While playing on a swing made using cloth, the loop tightened around her neck, leading to suffocation and death.

A case has been registered at Tunganagar Police Station, and further investigation is underway.

error: Content is protected !!