27.4 C
Munich
Home Uncategorized ಮೈಸೂರಿನಲ್ಲಿ ಮಹಿಳೆ ಆತ್ಮಹತ್ಯೆ: ಲೇಡಿ ಸೂಪರ್‌ವೈಸರ್ ಕಿರುಕುಳ ಆರೋಪ; ಡೆತ್‌ನೋಟ್ ಪತ್ತೆ

ಮೈಸೂರಿನಲ್ಲಿ ಮಹಿಳೆ ಆತ್ಮಹತ್ಯೆ: ಲೇಡಿ ಸೂಪರ್‌ವೈಸರ್ ಕಿರುಕುಳ ಆರೋಪ; ಡೆತ್‌ನೋಟ್ ಪತ್ತೆ

ಮೈಸೂರು, ಆ. 8 : ಲೇಡಿ ಸೂಪರ್‌ವೈಸರ್‌ ಕಿರುಕುಳ ನೀಡಿದ್ದಾರೆಂದು ಆರೋಪಿಸಿ ಮಹಿಳೆಯೊಬ್ಬರು ಕೀಟನಾಶಕ ಸೇವಿಸಿ ಆತ್ಮಹತ್ಯೆಗೆ ಶರಣಾಗಿರುವ ಘಟನೆ ನಗರದ ಹಿನಕಲ್‌ನಲ್ಲಿ ನಡೆದಿದೆ. ಮೃತರನ್ನು ನಾಗೇಶ್ವರಿ ಎಂದು ಗುರುತಿಸಲಾಗಿದೆ. ಘಟನೆ ವಿಜಯನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ ಎಂದು ವರದಿಯಾಗಿದೆ.

ನಾಗೇಶ್ವರಿ ಖಾಸಗಿ ಕಂಪನಿಯೊಂದರಲ್ಲಿ ಟಾಟಾ ಪ್ರಮೋಟರ್‌ ಆಗಿ ಕೆಲಸ ಮಾಡುತ್ತಿದ್ದರು ಎನ್ನಲಾಗಿದೆ. ಇತ್ತೀಚೆಗೆ ಕಂಪನಿಗೆ ಡಾಲಿ ಎಂಬ ಮಹಿಳೆ ಸೂಪರ್‌ವೈಸರ್ ಆಗಿ ಬಂದಿದ್ದು, ತನ್ನದಲ್ಲದ ತಪ್ಪಿಗೆ ಗುರಿಯಾಗಿಸಿ ಕಿರುಕುಳ ನೀಡಿದ್ದಾರೆ ಎಂದು ನಾಗೇಶ್ವರಿ ಡೆತ್‌ನೋಟ್‌ನಲ್ಲಿ ಆರೋಪಿಸಿದ್ದಾರೆ.

ಕಳೆದ ನಾಲ್ಕು ತಿಂಗಳಿನಿಂದ ವಾರದ ರಜೆಯನ್ನೂ ನೀಡಿಲ್ಲ, ತುರ್ತು ರಜೆ ಕೇಳಿದರೂ ಅವಕಾಶ ನೀಡಿಲ್ಲ. ಈ ಬಗ್ಗೆ ಪ್ರಶ್ನಿಸಿದ ಬಳಿಕ ಕೆಲಸದಿಂದ ತೆಗೆದುಹಾಕಲಾಗಿದೆ ಹಾಗೂ ನೋಟಿಸ್ ಪಿರಿಯಡ್ ಕೂಡ ಮಾಡಿಸಿಲ್ಲ ಎಂದು ಡೆತ್‌ನೋಟ್‌ನಲ್ಲಿ ಉಲ್ಲೇಖಿಸಿರುವುದಾಗಿ ವರದಿಯಾಗಿದೆ.

“ಕಿರುಕುಳದಿಂದ ಮನನೊಂದು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದೇನೆ. ನನ್ನ ಸಾವಿಗೆ ನ್ಯಾಯ ಕೊಡಿಸಿ” ಎಂದು ನಾಗೇಶ್ವರಿ ಡೆತ್‌ನೋಟ್‌ನಲ್ಲಿ ಬರೆದಿದ್ದಾರೆ ಎನ್ನಲಾಗಿದೆ. ಘಟನೆ ಕುರಿತು ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

error: Content is protected !!