17.8 C
Munich
Home News Hassan:ಹಾಸನ:ಮಾಡಾಳು ಗ್ರಾಮದಲ್ಲಿ 139ನೇ ಪುಣ್ಯಸಂಸ್ಮರಣೆ: ಕೋಡಿಮಠ ಜಗದ್ಗುರು ಡಾ. ಶಿವಾನಂದ ಶಿವಯೋಗಿ ಸಾನಿಧ್ಯದಲ್ಲಿ ಧಾರ್ಮಿಕ ಕಾರ್ಯಕ್ರಮ

Hassan:ಹಾಸನ:ಮಾಡಾಳು ಗ್ರಾಮದಲ್ಲಿ 139ನೇ ಪುಣ್ಯಸಂಸ್ಮರಣೆ: ಕೋಡಿಮಠ ಜಗದ್ಗುರು ಡಾ. ಶಿವಾನಂದ ಶಿವಯೋಗಿ ಸಾನಿಧ್ಯದಲ್ಲಿ ಧಾರ್ಮಿಕ ಕಾರ್ಯಕ್ರಮ

ಮಾಡಾಳು ಸ್ವರ್ಣ ಗೌರಮ್ಮ ದೇವಾಲಯದಲ್ಲಿ 139ನೇ ಪುಣ್ಯ ಮರಣಾರಾಧನೆ ಕಾರ್ಯಕ್ರಮ ದೃಶ್ಯ
ಮಾಡಾಳು ಗ್ರಾಮದಲ್ಲಿ ನಡೆಯಲಿರುವ ಕೋಡಿಮಠದ ಶಿವಲಿಂಗ ಸ್ವಾಮಿಗಳ 139ನೇ ಪುಣ್ಯಸಂಸ್ಮರಣೆ ಧಾರ್ಮಿಕ ಕಾರ್ಯಕ್ರಮ

ಹಾಸನ,ಏಪ್ರಿಲ್,24,2026(www.kannadapost.com): ಜಿಲ್ಲೆಯ ಮಾಡಾಳು ಗ್ರಾಮದ ಮೂಲಸ್ಥಾನ ಶ್ರೀ ಸ್ವರ್ಣ ಗೌರಮ್ಮ ದೇವಿ ದೇವಾಲಯ ಆವರಣದಲ್ಲಿ, ಕೋಡಿಮಠದ ಲಿಂಗೈಕ್ಯ ಶ್ರೀ ಶಿವಲಿಂಗ ಸ್ವಾಮಿಗಳವರ 139ನೇ ವರ್ಷದ ಪುಣ್ಯಸಂಸ್ಮರಣೆ  ಧಾರ್ಮಿಕ ಕಾರ್ಯಕ್ರಮ ಮೇ 1ರಿಂದ 6ರವರೆಗೆ ನಡೆಯಲಿದೆ ಎಂದು ಸೇವಾ ಸಮಿತಿ ಅಧ್ಯಕ್ಷ ಎಂ.ಎಸ್. ನಟರಾಜ್ ತಿಳಿಸಿದ್ದಾರೆ.

ಈ ಧಾರ್ಮಿಕ ಕಾರ್ಯಕ್ರಮವು ಹಾರನಹಳ್ಳಿ ಸುಕ್ಷೇತ್ರ ಕೋಡಿಮಠದ ಜಗದ್ಗುರು Dr. Shivananda Shivayogi Rajendra ಅವರ ಸಾನಿಧ್ಯದಲ್ಲಿ ಜರುಗಲಿದೆ.

ಗ್ರಾಮದ ಹೊರಭಾಗದ ಚನ್ನಬಸವೇಶ್ವರ ಚಿತ್ರಮಂದಿರದಲ್ಲಿ ನಡೆಯುವ ಈ ಕಾರ್ಯಕ್ರಮದಲ್ಲಿ, ಕೋಡಿಮಠದ ಮಹಾ ತಪಸ್ವಿ ಲಿಂಗೈಕ್ಯ ಶಿವಲಿಂಗ ಸ್ವಾಮಿಗಳವರ ಪುಣ್ಯ ಸ್ಮರಣಾರ್ಥವಾಗಿ ಪುರಾಣ ಪ್ರವಚನಗಳನ್ನು ಕರ್ನಾಟಕ ಕಲಾಶ್ರೀ ಕಲ್ಲಿನಾಥ ಶಾಸ್ತ್ರಿಗಳು ನಡೆಸಿಕೊಡಲಿದ್ದಾರೆ.

📅 ದಿನಾಂಕ: ಮೇ 1ರಿಂದ ಮೇ 6, 2026
🕖 ಸಮಯ: ಪ್ರತಿದಿನ ಸಂಜೆ 7:00 ರಿಂದ ಪ್ರವಚನ
🎶 ಸಂಜೆ 6:30ಕ್ಕೆ ರಾಂಪುರ ನಿರ್ವಾಣ ಸಿದ್ದೇಶ್ವರ ಭಜನಾ ಮಂಡಳಿ ವತಿಯಿಂದ ಭಜನೆ
🍛 ರಾತ್ರಿ 10ಕ್ಕೆ ದಾಸೋಹ ವ್ಯವಸ್ಥೆ

ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕು ಎಂದು ಆಯೋಜಕರು ಮನವಿ ಮಾಡಿದ್ದಾರೆ.

ಈ ಸಂದರ್ಭದಲ್ಲಿ ಕೋಡಿಮಠದ ಏಜೆಂಟ್ ಎಚ್.ಸಿ. ಮಹದೇವಪ್ಪ ಸೇರಿದಂತೆ ಹಲವರು ಉಪಸ್ಥಿತರಿದ್ದರು.

The 139th Punya Aradhane of Shivlinga Swamiji will be held from May 1 to 6 at Swarna Gouramma Temple in Madalu village, Hassan, under the guidance of Kodimath seer Dr. Shivananda Shivayogi Rajendra.


Hassan: The 139th Punya Aradhane of Kodimath’s Lingayikya Shivlinga Swamiji will be held at the Swarna Gouramma Temple premises in Madalu village from May 1 to May 6, said Seva Committee President M.S. Nataraj.

The religious event will be conducted in the divine presence of Dr. Shivananda Shivayogi Rajendra of Haranahalli Kodimath.

As part of the program, renowned scholar Kalashree Kallinath Shastri will deliver Puranic discourses.

🗓 Date: May 1–6, 2026
🕖 Time: 7:00 PM onwards (Daily discourse)
🎶 Bhajans at 6:30 PM
🍛 Dasoha (free meal) at 10:00 PM

Devotees are requested to participate in large numbers.

error: Content is protected !!