ಹಾಸನ: ವಿಶ್ವ ಡಯಾಬಿಟಿಷ್ ದಿನದ ಅಂಗವಾಗಿ ಆರೋಗ್ಯವೇ ಜೀವನದ ನಿಜವಾದ ಸಂಪತ್ತು ಎಂಬ ಸಂದೇಶದೊAದಿಗೆ ನ.೧೪ ರಂದು ಬೆಳಗ್ಗೆ ನಗರದಲ್ಲಿ ವಾಕಥಾನ್
ಹಮ್ಮಿಕೊಳ್ಳಲಾಗಿದೆ.
ಇಂಡಿಯಾನ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ಮತ್ತು ಹಾರ್ಟ್ ಸೆಂಟರ್ ವತಿಯಿಂದ ಅಂದು ಬೆಳಗ್ಗೆ ನಗರದ ಹೇಮಾವತಿ ಪ್ರತಿಮೆ ಬಳಿಯಿಂದ ಹೊರಟು ಇಂಡಿಯಾನ
ಆಸ್ಪತ್ರೆ ವರೆಗೆ ಸಂಚರಿಸಲಿದೆ ಎಂದು ಆಸ್ಪತ್ರೆಯ ಜನರಲ್ ಮೆಡಿಸನ್ ಡಯಾಬಿಟಾಲಜಿಸ್ಟ್ ಮತ್ತು ಕ್ಲಿನಿಕಲ್ ಕಾರ್ಡಿಯಾಲಜಿಸ್ಟ್ ಡಾ.ವಿಶ್ವಾಸ್ ಎಂ.ಕೆ. ಇಂದು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ತಾಲೂಕು ಆರೋಗ್ಯಾಧಿಕಾರಿ ಡಾ.ವಿಜಯ್ ಗೊರೂರು ಜಾಥಾಕ್ಕೆ ಚಾಲನೆ ನೀಡುವರು.
ಕಾರ್ಯಕ್ರಮದಲ್ಲಿ ಅತಿಥಿಗಳಾಗಿ ಡಾ. ಹೆಚ್.ಎಂ. ಕುಮಾರ್, ಡಾ. ಮೊಹಮ್ಮದ್ ಅನ್ವರ್, ಡಾ. ಈಶ್ವರ್ ಭಟ್, ಕಾರ್ಮಿಕ ಕಲ್ಯಾಣಾಧಿಕಾರಿ ಕೆ.ಟಿ. ರವಿ, ಜಿಲ್ಲಾ ಅಂಗವಿಕಲರ ಕಲ್ಯಾಣಾಧಿಕಾರಿ ಕೆ.ಆರ್. ಅನುಪಮ, ಸಮಾಜ ಸೇವಕ ಬೋರೇಗೌಡ, ಸಂಸ್ಕöÈತ ಸಂಘದ ಅಧ್ಯಕ್ಷ ಎಂ.ಎಸ್. ಶ್ರೀಕಂಠಯ್ಯ, ಪ್ರಾಧ್ಯಾಪಕ ಧರಣಿ ಕುಮಾರ್ ಸೇರಿ ಅನೇಕ ಗಣ್ಯರು ಪಾಲ್ಗೊಳ್ಳಲಿದ್ದಾರೆ ಎಂದು ಹೇಳಿದರು.
ಡಯಾಬಿಟಿಸ್ ಎನ್ನುವುದು ಇಂದಿನ ಜೀವನ ಶೈಲಿಯಿಂದ ಉಂಟಾಗುವ ಅತ್ಯಂತ ಸಾಮಾನ್ಯ ಆರೋಗ್ಯ ಸಮಸ್ಯೆ, ಆದರೆ ಗಂಭೀರ ಆಗಿದೆ. ಈ ರೋಗದ ಬಗ್ಗೆ ಜಾಗೃತಿ ಮೂಡಿಸಿ,
ಜನರಲ್ಲಿ ಆರೋಗ್ಯಕರ ಜೀವನ ಶೈಲಿಯತ್ತ ಒಲವು ತರಬೇಕೆಂಬ ಉದ್ದೇಶದಿಂದ ವಾಕ್‌ಥಾನ್ ಹಮ್ಮಿಕೊಳ್ಳಲಾಗಿದೆ ಎಂದರು. ಡಯಾಬಿಟಿಸ್ ಕಾಯಿಲೆ ಇಂದಿನ ತಲೆಮಾರಿಗೆ ಸವಾಲಾಗಿದ್ದು, ಅದನ್ನು ತಡೆಗಟ್ಟಲು ವೈದ್ಯರ ಸಲಹೆಯೊಂದಿಗೆ ಆಹಾರ ನಿಯಮ, ನಿತ್ಯ ವ್ಯಾಯಾಮ, ಧೂಮಪಾನ-ಮದ್ಯಪಾನ ತ್ಯಾಗ ಮತ್ತು ಮಾನಸಿಕ ಶಾಂತಿ ಅಗತ್ಯ. ಕಾಯಿಲೆಯನ್ನು ನಿರ್ಲಕ್ಷಿಸುವುದರಿಂದ ಹೃದಯ, ಮೂತ್ರಪಿಂಡ, ಕಣ್ಣು ಮತ್ತು ನರ ಸಂಬAಧಿ ಸಮಸ್ಯೆಗಳು ಉಂಟಾಗಬಹುದು ಎಂದು ಎಚ್ಚರಿಸಿದರು.
ಆಸ್ಪತ್ರೆ ವತಿಯಿಂದ ಜಾಗೃತಿ ಪಥ ಸಂಚಲನ ಜೊತೆಗೆ ಉಚಿತ ರಕ್ತದಲ್ಲಿನ ಸಕ್ಕರೆ ಪರೀಕ್ಷೆ, ಡಯಾಬಿಟಿಸ್ ತಡೆಗಟ್ಟುವ ಸಲಹೆ ಶಿಬಿರ ಹಾಗೂ ಆರೋಗ್ಯ ತಜ್ಞರೊಂದಿಗೆ ಸಂವಾದ ಕಾರ್ಯಕ್ರಮವನ್ನು ಆಸ್ಪತ್ರೆ ಆವರಣದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದರು. ಈ ದಿನದಂದು ಮಧು ಮೇಹರಹಿತ ಸಮಾಜಕ್ಕಾಗಿ ನಾವು ಎಲ್ಲರೂ ಬದ್ಧರಾಗೋಣ ಎಂಬ ಘೋಷಣೆಯೊಂದಿಗೆ ನಗರದ ಪ್ರಮುಖ ರಸ್ತೆಗಳಲ್ಲಿ ನಡಿಗೆ ನಡೆಯಲಿದ್ದು, ಆರೋಗ್ಯ ಜಾಗೃತಿ ಸಂದೇಶ ಸಾರಲಾಗುತ್ತದೆ ಎಂದು ಮಾಹಿತಿ ನೀಡಿದರು. ಆಸ್ಪತ್ರೆ ಆಡಳಿತಾಧಿಕಾರಿ ಪ್ರದೀಪ್ ಇದ್ದರು.










