ಹಾಸನ: ನಗರದ ಸಹ್ಯಾದ್ರಿ ಕ್ಲಿನಿಕ್ ಮತ್ತು ಡಯಾಬಿಟಿಸ್ ಸೆಂಟರ್, ರೋಟರಿ ಕ್ಲಬ್ ಆಫ್ ಹಾಸನ ಸಹಯೋಗದಲ್ಲಿ ನ.೧೪ ರಂದು ಉಚಿತ ಮಧುಮೇಹ ತಪಾಸಣಾ ಶಿಬಿರ ಹಮ್ಮಿಕೊಳ್ಳಲಾಗಿದೆ ಎಂದು ಡಾ.ಸಮರ್ಥ್ ಸೋಮನಾಥ್ ತಿಳಿಸಿದರು.
ಇಂದು ಸುದ್ದಿಗೋಷ್ಟಿಯಲ್ಲಿ ಈ ವಿಷಯ ತಿಳಿಸಿದ ಅವರು, ಅಂದು ಬೆಳಗ್ಗೆ ೯.೩೦ ರಿಂದ ಮಧ್ಯಾಹ್ನ ೧೨.೩೦ ರ ವರೆಗೆ ಸಾರ್ವಜನಿಕರಿಗೆ ಉಚಿತ ರಕ್ತ ಸಕ್ಕರೆ ಪರೀಕ್ಷೆ, ಆಹಾರ ಪದ್ಧತಿ, ಜೀವನಶೈಲಿ ನಿಯಂತ್ರಣ ಹಾಗೂ ಆರೋಗ್ಯ ಮಾರ್ಗದರ್ಶನ ನೀಡಲಾಗುವುದು ಎಂದು ತಿಳಿಸಿದರು.
ವಿಶ್ವ ಮಧುಮೇಹ ದಿನದ ಅಂಗವಾಗಿ ಮಧುಮೇಹ ಮತ್ತು ಯೋಗಕ್ಷೇಮ, ಮಧುಮೇಹವನ್ನು ಜೀವನಶೈಲಿ ಕ್ರಮದ ಮೂಲಕ ನಿಯಂತ್ರಿಸಬಹುದು. ಭಯಕ್ಕಿಂತ ಜಾಗೃತಿ ಮತ್ತು ನಿಯಮಿತ ಪರೀಕ್ಷೆ ಮುಖ್ಯ ಎಂದು ಹೇಳಿದರು.
ರೋಟರಿ ಅಸಿಸ್ಟೆಂಟ್ ಗವರ್ನರ್ ರೊ.ಮಂಜುನಾಥ್ ಜೆ.ಎನ್ ಮತ್ತು ಕಾರ್ಯದರ್ಶಿ ಜೀವನ್ ಮಾತನಾಡಿ, ಸಮಾಜದ ಆರೋಗ್ಯ ಜಾಗೃತಿಗೆ ಇಂತಹ ಕಾರ್ಯಕ್ರಮಗಳು ಅತ್ಯಂತ ಅಗತ್ಯ ಎಂದರು. ನಗರದ ಪಾರ್ಕ್ ರಸ್ತೆಯ ಸಹ್ಯಾದ್ರಿ ಕ್ಲಿನಿಕ್ ಮತ್ತು ಡಯಾಬಿಟಿಸ್ ಸೆಂಟರ್‌ನಲ್ಲಿ ಶಿಬಿರ ನಡೆಯಲಿದ್ದು, ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಇದರ ಲಾಭ ಪಡೆಯಬೇಕು ಎಂದು ಮನವಿ ಮಾಡಿದ ಅವರು, ಹೆಚ್ಚಿನ ಮಾಹಿತಿಗೆ ೮೭೪೭೯೭೯೨೨೯ ನಂಬರನ್ನು ಸಂಪರ್ಕಿಸಬಹುದು ಎಂದರು.










