5.8 C
Munich
Home News ಬೇಲೂರು: ಮಲಸಾವರ ಗ್ರಾಮದಲ್ಲಿ ಮೂರು ಕಾಡಾನೆಗಳ ಅಟ್ಟಹಾಸ – ಬೆಳೆ ನಾಶ, ಗ್ರಾಮಸ್ಥರಲ್ಲಿ ಭೀತಿ

ಬೇಲೂರು: ಮಲಸಾವರ ಗ್ರಾಮದಲ್ಲಿ ಮೂರು ಕಾಡಾನೆಗಳ ಅಟ್ಟಹಾಸ – ಬೆಳೆ ನಾಶ, ಗ್ರಾಮಸ್ಥರಲ್ಲಿ ಭೀತಿ

ಹಾಸನ: ಬೇಲೂರು ತಾಲ್ಲೂಕಿನ ಮಲಸಾವರ ಗ್ರಾಮದಲ್ಲಿ ಮುಂಜಾನೆ ಮೂರು ಕಾಡಾನೆಗಳ ಅಟ್ಟಹಾಸ.
ಗ್ರಾಮದೊಳಗೆ ಆಹಾರ ಅರಸಿ ಓಡಾಡಿದ ಸಲಗಗಳು ರೈತರ ಜಮೀನುಗಳಿಗೆ ನುಗ್ಗಿ ಭತ್ತ, ಕಾಫಿ, ಬಾಳೆ, ಅಡಿಕೆ ಬೆಳೆ ನಾಶಮಾಡಿದವು.

ಕಾಫಿ ತೋಟದಲ್ಲಿ ಬೀಡುಬಿಟ್ಟಿರುವ ಸಲಗಗಳಿಂದ ಗ್ರಾಮಸ್ಥರು ಭಯಭೀತರಾಗಿದ್ದು, ಮನೆಗಳಿಂದ ಹೊರ ಬರಲು ಹೆದರಿಕೆ ವ್ಯಕ್ತಪಡಿಸಿದ್ದಾರೆ.

ಕಾಡಾನೆಗಳನ್ನು ತಕ್ಷಣ ಅರಣ್ಯಕ್ಕೆ ಓಡಿಸಲು ಗ್ರಾಮಸ್ಥರು ಆಗ್ರಹ ವ್ಯಕ್ತಪಡಿಸಿದ್ದು, ಸ್ಥಳಕ್ಕೆ ಅರಣ್ಯ ಇಲಾಖೆ ಹಾಗೂ ಇಟಿಎಫ್ ಸಿಬ್ಬಂದಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

error: Content is protected !!