16.2 C
Munich
Home ಕ್ರೈಮ್‌ Hassan:📰ವಿಡಿಯೋ ವೈರಲ್: ಕುಡಿದ ಅಮಲಿನಲ್ಲಿ ಅಮಾನವೀಯ ಕೃತ್ಯ: ಶ್ವಾನವನ್ನು ಬೈಕ್‌ಗೆ ಕಟ್ಟಿ ಎಳೆದೊಯ್ದ ದುರುಳ

Hassan:📰ವಿಡಿಯೋ ವೈರಲ್: ಕುಡಿದ ಅಮಲಿನಲ್ಲಿ ಅಮಾನವೀಯ ಕೃತ್ಯ: ಶ್ವಾನವನ್ನು ಬೈಕ್‌ಗೆ ಕಟ್ಟಿ ಎಳೆದೊಯ್ದ ದುರುಳ

ಹಾಸನದ ಆಲೂರು ಬಳಿ ಪಾನಮತ್ತ ವ್ಯಕ್ತಿ ಶ್ವಾನವನ್ನು ಬೈಕ್‌ಗೆ ಕಟ್ಟಿ ಎಳೆದ ಘಟನೆ ವೈರಲ್ ಆಗಿದ್ದು, ಸಾರ್ವಜನಿಕರಿಂದ ಆಕ್ರೋಶ ವ್ಯಕ್ತವಾಗಿದೆ.

Hassan|ಹಾಸನ | ಕನ್ನಡಪೋಸ್ಟ್ ವರದಿ

ಹಾಸನ: ಆಲೂರು ಸಮೀಪ ಪಾನಮತ್ತ ವ್ಯಕ್ತಿಯೊಬ್ಬನು ಶ್ವಾನವನ್ನು ಬೈಕ್‌ಗೆ ಕಟ್ಟಿ ಎಳೆದೊಯ್ದಿರುವ ಅಮಾನುಷ ಘಟನೆ ಬೆಳಕಿಗೆ ಬಂದಿದೆ. ಈ ಕೃತ್ಯಕ್ಕೆ ಸಾರ್ವಜನಿಕರಿಂದ ತೀವ್ರ ಆಕ್ರೋಶ ವ್ಯಕ್ತವಾಗಿದೆ.


ಬೈಕ್‌ಗೆ ಕಟ್ಟಿ ಎಳೆದೊಯ್ದು ಅಮಾನವೀಯತೆ

ಆಲೂರು ತಾಲೂಕಿನ ರಸ್ತೆಯೊಂದರಲ್ಲಿ ನಡೆದಿರುವ ಈ ಘಟನೆ ಎರಡು ದಿನಗಳ ಹಿಂದಿನದು ಎನ್ನಲಾಗಿದೆ. ವ್ಯಕ್ತಿಯೊಬ್ಬನು ಶ್ವಾನವನ್ನು ಚೈನ್‌ನಿಂದ ಬೈಕ್ ಹಿಂಭಾಗಕ್ಕೆ ಕಟ್ಟಿ, ಅದನ್ನು ರಸ್ತೆಯಲ್ಲಿ ಎಳೆಯುತ್ತ ಸಾಗಿರುವುದು ಕಂಡುಬಂದಿದೆ. ಬೈಕ್ ವೇಗಕ್ಕೆ ತಕ್ಕಂತೆ ಓಡಲಾಗದೆ ನಾಯಿಯ ಕಾಲುಗಳು ರಸ್ತೆಗೆ ಉಜ್ಜಿ ರಕ್ತಸ್ರಾವವಾಗಿದೆ. ಸಾರ್ವಜನಿಕರು ನಾಯಿಯನ್ನು ರಕ್ಷಿಸಿದ ನಂತರ ಅದು ಹತ್ತಾರು ನಿಮಿಷ ಏದುಸಿರು ಬಿಡುತ್ತಾ ರಸ್ತೆಯಲ್ಲೇ ಬಿದ್ದಿತ್ತು.


ಸ್ಥಳೀಯರಿಂದ ರಕ್ಷಣೆ

ಘಟನೆಯನ್ನು ಗಮನಿಸಿದ ಸ್ಥಳೀಯರು ತಕ್ಷಣ ಬೈಕ್ ತಡೆದು ಶ್ವಾನವನ್ನು ರಕ್ಷಿಸಿದ್ದು, ಪಾನಮತ್ತ ವ್ಯಕ್ತಿಗೆ ತರಾಟೆ ತೆಗೆದುಕೊಂಡಿದ್ದಾರೆ.


ವೀಡಿಯೋ ವೈರಲ್

ಈ ಅಮಾನುಷ ಕೃತ್ಯದ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಜನರಲ್ಲಿ ಆಕ್ರೋಶ ಹೆಚ್ಚಾಗಿದೆ.


ಮೂಕಪ್ರಾಣಿಗೆ ಹಿಂಸೆ: ಸಾರ್ವಜನಿಕರ ಕಿಡಿ

ಮೂಕಪ್ರಾಣಿಗೆ ಈ ರೀತಿಯ ಹಿಂಸೆ ನೀಡಿರುವುದನ್ನು ಖಂಡಿಸಿ, ತಪ್ಪಿತಸ್ಥನ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.


error: Content is protected !!