ಹಾಸನ (kannadapost.com): ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ನಿಯಮಿತ (ಕವಿಪ್ರನಿನಿ) ವತಿಯಿಂದ ತ್ರೈಮಾಸಿಕ ಹಾಗೂ ತುರ್ತು ನಿರ್ವಹಣಾ ಕಾಮಗಾರಿ ಕೈಗೊಳ್ಳುತ್ತಿರುವ ಹಿನ್ನೆಲೆಯಲ್ಲಿ ಸೆಪ್ಟೆಂಬರ್ 23ರಂದು ಹಾಸನ ಜಿಲ್ಲೆಯ ವಿವಿಧ ಪ್ರದೇಶಗಳಲ್ಲಿ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಲಿದೆ. ಅಂದು ಬೆಳಗ್ಗೆ 9 ಗಂಟೆಯಿಂದ ಸಂಜೆ 6 ಗಂಟೆಯವರೆಗೆ ಈ ಕೆಳಕಂಡ ಪ್ರದೇಶಗಳಲ್ಲಿ ವಿದ್ಯುತ್ ಸರಬರಾಜು ಇರುವುದಿಲ್ಲ.
ವಿದ್ಯುತ್ ವ್ಯತ್ಯಯವಾಗುವ ಪ್ರದೇಶಗಳ ವಿವರ:
ಹಾಸನ ವಿದ್ಯುತ್ ವಿತರಣಾ ಕೇಂದ್ರ: ಸಂತೆಪೇಟೆ ಸರ್ಕಲ್, ಸಿದ್ದಯ್ಯನಗರ, ಗಾಂಧಿಬಜಾರ್, ತಣ್ಣೀರುಹಳ್ಳ, ವಿಜಯನಗರ, ಕೆಎಚ್ಬಿ, ಶ್ರೀನಗರ, ಎನ್.ಆರ್. ವೃತ್ತ, ಹಾಸನಾಂಬ ದೇವಾಲಯ ಸುತ್ತಮುತ್ತ, ಹುಣಸಿನಕೆರೆ, ಮೈಕ್ರೋವೇವ್, ಬಿಟ್ಟಿಗೋಡನಹಳ್ಳಿ, ಮೆಡಿಕಲ್ ಕಾಲೇಜು, ಜಿಲ್ಲಾಧಿಕಾರಿ ಕಚೇರಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಚೇರಿ, ಆಜಾದ್ ರಸ್ತೆ, ವಲ್ಲಭಭಾಯಿ ರಸ್ತೆ, ನಗರಸಭೆ ಕಚೇರಿ, ಕಟ್ಟಿನಕೆರೆ ಮಾರುಕಟ್ಟೆ, ದೇವೇಗೌಡನಗರ, ಹನುಮಂತಪುರ, ಅಗಿಲೆ, ಎರೆಬೋರೆಕಾವಲು, ತಟ್ಟೆಕೆರೆ, ಮಾರಿಗುಡಿಕೊಪ್ಪಲು, ಚನ್ನಪಟ್ಟಣ, ಹೊಸಕೊಪ್ಪಲು, ದೇವಮ್ಮ ಬಡಾವಣೆ, ಮಾರ್ಗನಹಳ್ಳಿ, ಬೈಲಹಳ್ಳಿ, ಬಸವೇಶ್ವರನಗರ, ಹೊಯ್ಸಳ ರೆಸಾರ್ಟ್ ಹಾಗೂ ಸುತ್ತಮುತ್ತಲಿನ ಸರ್ಕಾರಿ ಕಚೇರಿಗಳು ಮತ್ತು ಶಾಲಾ-ಕಾಲೇಜುಗಳು.
- ಮಗ್ಗೆ ವಿ.ವಿ. ಕೇಂದ್ರ: ಕಾರಗೋಡು, ಮಗ್ಗೆ, ಚನ್ನಾಪುರ, ಗಂಗಾರ ಹಾಗೂ ಪಾಳ್ಯ.
- ಕಂದಲಿ ವಿ.ವಿ. ಕೇಂದ್ರ: ಆಲೂರು ಪಟ್ಟಣ, ಗುಡ್ಡನಹಳ್ಳಿ, ಹುಣಸೆವಳ್ಳಿ, ಪಾಳ್ಯ, ಬೈರಾಪುರ, ಕಂದಲಿ, ಶೆಟ್ಟಿಹಳ್ಳಿ, ಶಂಕರನಹಳ್ಳಿ, ಅಗಲಹಳ್ಳಿ ಹಾಗೂ ಕಣತೂರು.
- ಸಕಲೇಶಪುರ ವಿ.ವಿ. ಕೇಂದ್ರ: ಹಾರ್ಲೆ, ಶುಕ್ರವಾರಸಂತೆ, ಮಳಲಿ, ಸಕಲೇಶಪುರ, ಉದಯವಾರ, ಆನೆಮಹಲ್ ಹಾಗೂ ಬೆಳಗೋಡು.
- ಅರೇಹಳ್ಳಿ ವಿ.ವಿ. ಕೇಂದ್ರ: ಮಲಸಾವರ, ಅರೇಹಳ್ಳಿ, ಲಕ್ಕುಂದ, ಕೆಸಗೋಡು, ಮಾಲೆಗೆರೆ, ಅನುಘಟ್ಟ ಹಾಗೂ ಬಾವಿಕಟ್ಟೆ.
- ಹಾನುಬಾಳು ವಿ.ವಿ. ಕೇಂದ್ರ: ದೇವಲದಕೆರೆ, ಹುರುಡಿ, ವೆಂಕಟಹಳ್ಳಿ ಹಾಗೂ ಕಾಡುಮನೆ.
ಹಾಸನ, ಮಗ್ಗೆ, ಕಂದಲಿ, ಬಾಳುಪೇಟೆ, ಸಕಲೇಶಪುರ, ಹಾನುಬಾಳು ಹಾಗೂ ಅರೇಹಳ್ಳಿ ವಿದ್ಯುತ್ ವಿತರಣಾ ಕೇಂದ್ರಗಳು ಮತ್ತು 66 ಕೆ.ವಿ. ಮಾರ್ಗಗಳಲ್ಲಿ ಈ ನಿರ್ವಹಣಾ ಕಾಮಗಾರಿ ನಡೆಯುತ್ತಿರುವುದರಿಂದ ಸಾರ್ವಜನಿಕರು ಹಾಗೂ ಗ್ರಾಹಕರು ಸಹಕರಿಸಬೇಕು ಎಂದು ಕವಿಪ್ರನಿನಿ ಹಾಸನ ಕಾರ್ಯಾಚರಣೆ ವಿಭಾಗದ ಕಾರ್ಯನಿರ್ವಾಹಕ ಇಂಜಿನಿಯರ್ ಪ್ರಕಟಣೆಯಲ್ಲಿ ಕೋರಿದ್ದಾರೆ.












