10.4 C
Munich
Home News ಚನ್ನರಾಯಪಟ್ಟಣ:ಭಾರತವು ಸ್ವಾತಂತ್ರ್ಯದಿಂದ ನೆಮ್ಮದಿಯ ನೆಲೆಬೀಡು

ಚನ್ನರಾಯಪಟ್ಟಣ:ಭಾರತವು ಸ್ವಾತಂತ್ರ್ಯದಿಂದ ನೆಮ್ಮದಿಯ ನೆಲೆಬೀಡು

ಚನ್ನರಾಯಪಟ್ಟಣ: ಭಾರತ ದೇಶವು ಸ್ವಾತಂತ್ರ್ಯ ಪಡೆದು ನೆಮ್ಮದಿಯ ನೆಲೆಬೀಡಾಗಲು ಅನೇಕ ಮಹನೀಯರ ರಕ್ತ ಬಲಿದಾನವೇ ನಡೆದು ಹೋಗಿದೆ ಎಂದು ದಿಡಗ ಕೃಷಿ ಪತ್ತಿನ ಸಹಕಾರ ಸಂಘದ ನಿರ್ದೇಶಕ ಹೆಚ್.ಕೆ.ಯೋಗೇಶ್ ಹೇಳಿದರು.

ತಾಲ್ಲೂಕಿನ ಉಳ್ಳಾವಳ್ಳಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಪಾಠಶಾಲೆಯಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಸ್ವಾತಂತ್ರ್ಯ ದಿನಾಚರಣೆಯಲ್ಲಿ ಮಾತನಾಡಿ, ಅವರು ಕಲ್ಪಿಸಿಕೊಟ್ಟ ಸ್ವಾತಂತ್ರ್ಯದಿಂದ ನಾವೆಲ್ಲರೂ ನೆಮ್ಮದಿಯೊಂದಿಗೆ ನಡೆದು ಸಾಗುತಿದ್ದೇವೆ ಎಂದರು.

ಕೇವಲ ಮಸಾಲ ಪದಾರ್ಥಗಳ ಸಲುವಾಗಿ ನಮ್ಮ ದೇಶಕ್ಕೆ ತಕ್ಕಡಿ ಹಿಡಿದು ವ್ಯಾಪಾರಕ್ಕೆ ಬಂದ ಬ್ರಿಟೀಷರು ನಮ್ಮ ಪೂರ್ವಿಕರ ಒಳ್ಳೆತನ ಹಾಗೂ ಮುಗ್ಧತೆಯನ್ನು ದುರುಪಯೋಗ ಪಡಿಸಿಕೊಂಡು ಇಲ್ಲಿಯೇ ಟಿಕಾಣಿಯೂಡಿ ಅಧಿಕಾರದ ಚುಕ್ಕಾಣಿ ಹಿಡಿದು ನಮ್ಮನ್ನೇ ಆಳಿದ್ದು ದುರಂತದ ಸಂಗತಿ ಎಂದು ಕಳವಳ ವ್ಯಕ್ತಪಡಿಸಿದರು.ನಂತರದಲ್ಲಿ ಮಹಾತ್ಮ ಗಾಂಧೀಜಿ, ಸುಭಾಶ್ ಚಂದ್ರ ಭೋಸ್ ಸೇರಿದಂತೆ ಬಹುತೇಕ ಮಹನೀಯರ ಮುಂದಾಳತ್ವದಲ್ಲಿ ದೇಶದ ಸ್ವಾತಂತ್ರ್ಯಕ್ಕಾಗಿ ಹೋರಾಟ ನಡೆದಿದ್ದು ಸಾಕಷ್ಟು ಮಂದಿ ಹೋರಾಟಗಾರರು ತಮ್ಮ ನೆತ್ತರವನ್ನೇ ಹರಿಸಬೇಕಾಯಿತು. ಅದರ ಫಲವಾಗಿ ನಮಗೆ ಸ್ವಾತಂತ್ರ್ಯ ದೊರೆತಿದ್ದು ಇಂದಿಗೂ ಸುರಕ್ಷಿತವಾಗಿದ್ದೇವೆ ಎಂದು ತಿಳಿಸಿದರು.

ಎಸ್‌ಡಿಎಂಸಿ ಅಧ್ಯಕ್ಷ ಆರ್.ಶ್ರೀನಿವಾಸ್ ಧ್ವಜಾರೋಹಣ ನೆರವೇರಿಸಿದರು. ವಿದ್ಯಾರ್ಥಿಗಳು ದೇಶಭಕ್ತಿ ಗೀತೆಗಳಿಗೆ ನೃತ್ಯ ಮಾಡಿದರು ಸ್ವಾತಂತ್ರ್ಯ ದಿನಾಚರಣೆ ಹಿನ್ನೆಲೆ ಕಳೆದ ವಾರ ಹಮ್ಮಿಕೊಂಡಿದ್ದ ಕ್ರಿಡಾಕೂಟದಲ್ಲಿ ವಿವಿಧ ಸ್ವರ್ಧೆಗಳಲ್ಲಿ ಗೆಲುವ ಸಾಧಿಸಿದ್ದ ವಿದ್ಯಾರ್ಥಿಗಳಿಗೆ ಬಹುಮಾನ ನೀಡಿ ಅಭಿನಂಧಿಸಲಾಯಿತು.
ಮುಖ್ಯಶಿಕ್ಷಕ ಕುಮಾರ್, ಸಹಶಿಕ್ಷಕಿ ಶ್ರೀದೇವಿ, ಅತಿಥಿ ಶಿಕ್ಷಕಿ ಅನುಷ, ಗ್ರಾಮಸ್ಥರಾದ ನಾಗರಾಜ್, ಶಿವರಾಜ್, ಪುಟ್ಟಸ್ವಾಮಿಗೌಡ, ಶಿವಣ್ಣ, ಸುರೇಶ್, ಕುಮಾರ್ ಹಾಗೂ ಇತರರು ಇದ್ದರು.

error: Content is protected !!