12.7 C
Munich
Home News ಹಾಸನ: ಬೇಲೂರಿನ ಲಿಂಗಾಪುರದಲ್ಲಿ ಕಾರಿಗೆ ಅಡ್ಡ ಬಂದ ಕಾಡಾನೆಗಳ ಹಿಂಡು, ಏಕ್, ದೋ, ತೀನ್… ಎಂದು...

ಹಾಸನ: ಬೇಲೂರಿನ ಲಿಂಗಾಪುರದಲ್ಲಿ ಕಾರಿಗೆ ಅಡ್ಡ ಬಂದ ಕಾಡಾನೆಗಳ ಹಿಂಡು, ಏಕ್, ದೋ, ತೀನ್… ಎಂದು ಆನೆಗಳ ಸಂಖ್ಯೆ ಲೆಕ್ಕ ಹಾಕಿದ ಕಾರು ಚಾಲಕರು

ಹಾಸನ:  ಬೇಲೂರು ತಾಲೂಕಿನ ಲಿಂಗಾಪುರ ಗ್ರಾಮದ ಬಳಿ ರಸ್ತೆಯಲ್ಲಿ ಚಲಿಸುತ್ತಿದ್ದ ಕಾರಿಗೆ ಕಾಡಾನೆಗಳ ಹಿಂಡು ಅಡ್ಡ ಬಂದು ಚಾಲಕನನ್ನು ಅವಾಕ್ಕಿಸಿವೆ.

ಒಂದು ಕಾಫಿ ತೋಟದಿಂದ ಮತ್ತೊಂದು ಕಾಫಿ ತೋಟಕ್ಕೆ ರಸ್ತೆ ದಾಟುತ್ತಿದ್ದ ಸುಮಾರು ಇಪ್ಪತ್ತಕ್ಕೂ ಹೆಚ್ಚು ಕಾಡಾನೆಗಳ ಹಿಂಡು, ಮರಿಗಳನ್ನೂ ಒಳಗೊಂಡಿತ್ತು.

ಘಟನೆಯ ಸಂದರ್ಭದಲ್ಲಿ, ರಸ್ತೆಯಲ್ಲಿ ವಾಹನಗಳನ್ನು ನಿಲ್ಲಿಸಿಕೊಂಡ ಸವಾರರು ಕಾಡಾನೆಗಳು ರಸ್ತೆ ದಾಟಿ ಕಾಫಿ ತೋಟದೊಳಗೆ ಹೋಗುವವರೆಗೆ ಕಾಯ್ದಿದ್ದಾರೆ. ಒಬ್ಬ ಕಾರು ಚಾಲಕ ತನ್ನ ವಾಹನವನ್ನು ರಸ್ತೆಯಲ್ಲೇ ನಿಲ್ಲಿಸಿಕೊಂಡು ಕಾಡಾನೆಗಳ ಸಂಖ್ಯೆಯನ್ನು ಲೆಕ್ಕ ಹಾಕಿರುವ ವಿಡಿಯೋ ವೈರಲ್ ಆಗಿದೆ.

ಲಿಂಗಾಪುರ ಗ್ರಾಮದ ಸಮೀಪದಲ್ಲಿ ಕಾಡಾನೆಗಳು ಬೀಡುಬಿಟ್ಟಿರುವುದು ಸ್ಥಳೀಯರಲ್ಲಿ ಆತಂಕವನ್ನುಂಟು ಮಾಡಿದೆ. ಈ ಘಟನೆಯಿಂದಾಗಿ ರಸ್ತೆ ಸಂಚಾರ ಕೆಲಕಾಲ ಸ್ಥಗಿತಗೊಂಡಿತು.

ಕಾಡಾನೆಗಳ ಉಪಟಳದಿಂದಾಗಿ ಈ ಭಾಗದಲ್ಲಿ ಆಗಾಗ್ಗೆ ಇಂತಹ ಘಟನೆಗಳು ವರದಿಯಾಗುತ್ತಿವೆ. ಸ್ಥಳೀಯರು ಮತ್ತು ಕಾಫಿ ತೋಟದ ಮಾಲೀಕರು ಈ ಬಗ್ಗೆ ಅರಣ್ಯ ಇಲಾಖೆಯ ಗಮನಕ್ಕೆ ತಂದಿದ್ದು, ಕಾಡಾನೆಗಳನ್ನು ನಿಯಂತ್ರಿಸಲು ಕ್ರಮಕ್ಕೆ ಒತ್ತಾಯಿಸಿದ್ದಾರೆ.

error: Content is protected !!