ಹಾಸನ: ಜಿಲ್ಲಾಧಿಕಾರಿ ಕೆ.ಎಸ್.ಲತಾಕುಮಾರಿ ಅವರು ಇಂದು ನಗರ ಪ್ರದಕ್ಷಿಣೆ ಸಂದರ್ಭದಲ್ಲಿ ಕಲಾ ಕಾಲೇಜು ಮೈದಾನಕ್ಕೆ ಭೇಟಿ ನೀಡಿ ಪರಿಶೀಲಿಸಿದರು. ಕ್ರೀಡಾಂಗಣದ ಬಹು ಕಡೆಯಲ್ಲಿ ಹಸಿರು ಹುಲ್ಲು ಬೆಳೆದುಕೊಂಡಿರುವುದನ್ನು ಗಮನಿಸಿದರು.
ಈ ಸಂದರ್ಭದಲ್ಲಿ ಡ್ಯಾಡ್ ಅಂಡ್ ತಂಡದ ಆಟಗಾರರಾದ ರವಿಕುಮಾರ್, ಸುಧೀರ್, ಪತ್ರಕರ್ತರಾದ ಕಿರಣ್ ವೆಂಕಟೇಶ್, ಅಭಿಜಿತ್, ಸಂಸದರ ಮಾಧ್ಯಮ ಸಂಯೋಜಕ ಸ್ವರೂಪ್ ಮೊದಲಾದವರು ನಿತ್ಯ ಆಟೋಟಗಳಿಗೆ ಹಸಿರು ಹುಲ್ಲು ಸಮಸ್ಯೆಯಾಗಲಿದೆ ಎಂಬ ವಿಷಯವನ್ನು ಡಿಸಿ ಅವರ ಗಮನಕ್ಕೆ ತಂದರು.
ಈ ವೇಳೆ ಮುಂದಿನ ಒಂದು ವಾರದೊಳಗೆ ಕ್ರೀಡಾಂಗಣವನ್ನು ಸ್ವಚ್ಛ ಮಾಡಿಸುವಂತೆ ಮಹಾ ನಗರ ಪಾಲಿಕೆ ಆಯುಕ್ತ ಕೃಷ್ಣಮೂರ್ತಿ ಅವರಿಗೆ ಡಿಸಿ ಅವರು ಸೂಚಿಸಿದರು.










