14.2 C
Munich
Home News Politics ಚನ್ನರಾಯಪಟ್ಟಣ: ಟಿಎಪಿಸಿಎಂಎಸ್ ಅಧ್ಯಕ್ಷರಾಗಿ ವೆಂಕಟೇಶ್ ಅವಿರೋಧ ಆಯ್ಕೆ

ಚನ್ನರಾಯಪಟ್ಟಣ: ಟಿಎಪಿಸಿಎಂಎಸ್ ಅಧ್ಯಕ್ಷರಾಗಿ ವೆಂಕಟೇಶ್ ಅವಿರೋಧ ಆಯ್ಕೆ

ಚನ್ನರಾಯಪಟ್ಟಣ: ತಾಲ್ಲೂಕು ವ್ಯವಸಾಯೋತ್ಪನ್ನ ಮಾರಾಟ ಸಹಕಾರ ಸಂಘದ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ಶುಕ್ರವಾರ ನಡೆದ ಚುನಾವಣೆಯಲ್ಲಿ ಅಧ್ಯಕ್ಷ ಸ್ಥಾನಕ್ಕೆ ಹೆಚ್.ಆರ್.ವೆಂಕಟೇಶ ಮೂರ್ತಿ ಮತ್ತು ಉಪಾಧ್ಯಕ್ಷ ಸ್ಥಾನಕ್ಕೆ ತಾರಾಮಣಿ ಆನಂದ್‌  ಅವಿರೋಧವಾಗಿ ಆಯ್ಕೆಯಾದರು.

ತಾಲ್ಲೂಕು ವ್ಯವಸಾಯೋತ್ಪನ್ನ ಮಾರಾಟ ಸಹಕಾರ ಸಂಘದ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನಕ್ಕೆ ಚುನಾವಣೆ ನಿಗದಿಯಾಗಿದ್ದ ಹಿನ್ನಲೆಯಲ್ಲಿ ಅಧ್ಯಕ್ಷ ಸ್ಥಾನಕ್ಕೆ ಎ-ತರಗತಿಯಡಿ ನಿರ್ದೇಶಕರಾಗಿ ಆಯ್ಕೆಯಾಗಿರುವ ಹೆಚ್.ಆರ್.ವೆಂಕಟೇಶ ಮೂರ್ತಿ ಮತ್ತು ಉಪಾಧ್ಯಕ್ಷ ಸ್ಥಾನಕ್ಕೆ ಮಹಿಳಾ ಮೀಸಲು ಕ್ಷೇತ್ರದಿಂದ ಸ್ಪರ್ಧಿಸಿ ನಿರ್ದೇಶಕಾಗಿರುವ ಡಿ.ಚಿಕ್ಕೇನಹಳ್ಳಿ ಗ್ರಾಮದ ತಾರಾಮಣಿ ಆನಂದ್‌ ನಾಮಪತ್ರ ಸಲ್ಲಿಸಿದ್ದರು.

ಈ ಇಬ್ಬರು ಹೊರತುಪಡಿಸಿ ಮತ್ಯಾರು ನಾಮಪತ್ರ ಸಲ್ಲಿಸದ ಕಾರಣ ಚುನಾವಣಾಧಿಕಾರಿ ತಹಶೀಲ್ದಾರ್ ಶಂಕರಪ್ಪ ಅವರು ಅಧ್ಯಕ್ಷ ಮತ್ತು ಉಪಾಧ್ಯಕ್ಷರ ಆಯ್ಕೆಯನ್ನು ಘೋಷಿಸಿದರು.

ನೂತನ ಅಧ್ಯಕ್ಷರು, ಉಪಾಧಕ್ಷರನ್ನು ಶಾಸಕ ಸಿ.ಎನ್.ಬಾಲಕೃಷ್ಣ, ರಾಜ್ಯ ಮಾರಾಟ ಮಹಾಮಂಡಳದ ನಿರ್ದೇಶಕ ಸಿ.ಎನ್.ಪುಟ್ಟಸ್ವಾಮೀಗೌಡ, ಜೆಡಿಎಸ್ ತಾಲ್ಲೂಕು ಅಧ್ಯಕ್ಷ ಪರಮ ಕೃಷ್ಣೇಗೌಡ ಸೇರಿ, ತಾಲ್ಲೂಕಿನ ಜೆಡಿಎಸ್ ಮುಖಂಡರು, ಎಲ್ಲ ನಿರ್ದೇಶಕರುಗಳು ಹಾರ ಹಾಕಿ, ಸಿಹಿ ತಿನ್ನಿಸಿ ಸಂಭ್ರಮಿಸಿದರು.

ಶಾಸಕ ಸಿ.ಎನ್.ಬಾಲಕೃಷ್ಣ ಮಾತನಾಡಿ, ಟಿಎಪಿಸಿಎಂಎಸ್ ಇಂದು ಲಾಭದ ಹಾದಿಯಲ್ಲಿ ಸಾಗಲು ಎರಡು ದಶಕಗಳ ಕಾಲ ಜೆಡಿಎಸ್ ಅಧಿಕಾರ ನಡೆಸಿರುವುದು ಕಾರಣವಾಗಿದೆ. ಈ ಹಿಂದಿನ ಅವಧಿಯಲ್ಲಿ ಅಧ್ಯಕ್ಷರಾಗಿದ್ದ ಎಲ್ಲ ಮುಖಂಡರ ಶ್ರಮದಿಂದ ಜಪ್ತಿ ಮಾಡುವ ಹಂತದಲ್ಲಿದ್ದ ಟಿಎಪಿಸಿಎಂಎಸ್ ಇದೀಗ ೬೦ ಲಕ್ಷ ರೂ. ಠೇವಣಿ, ೧.೫ಕೋಟಿ ರೂ.ಗಳ ದುಡಿಯುವ ಬಂಡವಾಳ ಹೊಂದಿ, ೨.೫ಕೋಟಿ ನಿವ್ವಳ ಅಸ್ತಿಯನ್ನು ಹೊಂದುವ ಮೂಲಕ ಗುರುತ್ತರ ಸಾಧನೆ ಮಾಡಿದೆ ಎಂದರು.

ಇದರ ಫಲವಾಗಿಯೇ ಕಳೆದ ತಿಂಗಳು ನಡೆದ ನಿರ್ದೇಶಕರ ಆಯ್ಕೆ ಚುನಾವಣೆಯಲ್ಲಿ ಎಲ್ಲ ೧೪ ಸ್ಥಾನಗಳು ಜೆಡಿಎಸ್ ಪಕ್ಷದ ಪಾಲಾಗಿವೆ. ಎಲ್ಲ ಷೇರುದಾರ ರೈತರಿಗೆ ಈ ಸಂದರ್ಭ ಕೃತಜ್ಙತೆ ಸಲ್ಲಿಸುತ್ತೇನೆ. ಸಿ.ಎನ್.ಪುಟ್ಟಸ್ವಾಮಿಗೌಡ ರಾಜ್ಯ ಮಾರಾಟ ಮಹಾ ಮಂಡಳದ ನಿರ್ದೆಶಕರಾದ ಮೇಲೆ ತಾಲ್ಲೂಕಿಗೆ ೧ ಕೋಟಿ ರೂ.ಗಳ ಅನುದಾನವನ್ನು ಮಾರಾಟ ಮಂಡಳದಿಂದ ಕೊಡಿಸಿದ್ದು, ಟಿಎಪಿಸಿಎಂಎಸ್‌ನ ಕಟ್ಟಡ ನಿರ್ಮಾಣಕ್ಕಾಗಿ ೩೫ ಲಕ್ಷ ರೂ.ಗಳ ಅನುದಾನ ಒದಗಿಸಿದ್ದಾರೆ ಎಂದು ತಿಳಿಸಿದರು.

ನೂತನ ಅಧ್ಯಕ್ಷ ಹೆಚ್.ಆರ್.ವೆಂಕಟೇಶ ಮೂರ್ತಿ ಮಾತನಾಡಿ, ನನ್ನ ಆಯ್ಕೆಗೆ ಸಹಕರಿಸಿದ ಸಹಕಾರಿ ರತ್ನ ಶಾಸಕರಾದ ಸಿ.ಎನ್.ಬಾಲಕೃಷ್ಣರವರಿಗೆ ವಿಶೇಷವಾದ ಕೃತಜ್ಞತೆಯೊಂದಿಗೆ ಎಲ್ಲ ನಿರ್ದೇಶಕರುಗಳಿಗೆ ಮತ್ತು ಮಾಜಿ ಅಧ್ಯಕ್ಷರು, ನಿರ್ದೇಶಕರಿಗೆ ಕೃತಜ್ಞತೆ ಸಲ್ಲಿಸುವುದಾಗಿ ಹೇಳಿ, ಈ ಹಿಂದೆ ಅಧ್ಯಕ್ಷರಾಗಿದ್ದವರು ಸಂಘವನ್ನು ಅರ್ಥಿಕವಗಿ ಬಲಪಡಿಸಿದ್ದು, ತಾವು ಶಾಸಕರ, ನಿರ್ದೇಶಕರ ಸಹಕಾರದಿಂದ ಮತ್ತಷ್ಟು ಎತ್ತರಕ್ಕೆ ಕೊಂಡಯ್ಯೂವುದಾಗಿ ತಿಳಿಸಿದರು.

ಉಪಾಧ್ಯಕ್ಷೆ ತಾರಾಮಣಿ ಆನಂದ್‌ರವರು ತಮ್ಮ ಆಯ್ಕೆಗೆ ಸಹಕರಿಸಿದ ಪಕ್ಷದ ಎಲ್ಲ ಮುಖಂಡರು, ಶಾಸಕರಿಗೆ ಅಭಿನಂದನೆ ಸಲ್ಲಿಸಿದರು.

ರಾಜ್ಯ ಮಾರಾಟ ಮಹಾಮಂಡಳದ ನಿರ್ದೇಶಕ ಸಿ.ಎನ್.ಪುಟ್ಟಸ್ವಾಮೀಗೌಡ, ನಿಕಟಪೂರ್ವ ಅಧ್ಯಕ್ಷ, ಹಾಲಿ ನಿರ್ದೇಶಕ ಎಂ.ಆರ್.ಅನಿಲ್‌ ಕುಮಾರ್, ಸೇರಿ ನೂತನ ನಿರ್ದೇಶಕರಾದ ಪರಮ ಕೃಷ್ಣೇಗೌಡ, ಎಂ.ಎನ್.ಬೋರೇಗೌಡ, ಕೆ.ಎನ್.ನಾಗರಾಜು ತೋಟಿ, ನೆಟ್ಟೆಕೆರೆ ನಾಗರಾಜು, ತರಬೇನಹಳ್ಳಿ ನಂಜುಂಡೇಗೌಡ, ಮಮತ ಜಯಣ್ಣ, ರಮೇಶ್ ಕುಂಬಾರಹಳ್ಳಿ, ಸಿ.ಜಿ.ಜಗದೀಶ್, ರವಿಕುಮಾರ್ ಕುಂಬಾರಹಳ್ಳಿ, ಪಿ.ಉಮೇಶ್, ಸೇರಿ ವಿವಿಧ ರಾಜಕೀಯ ಪಕ್ಷದ ಮುಖಂಡರು, ಪಟ್ಟಣದ ಗಣ್ಯರು, ಸಂಘ ಸಂಸ್ಥೆಗಳ ಮುಖಂಡರು, ಪದಾಧಿಕಾರಿಗಳು, ವಿವಿಧ ಕ್ಷೇತ್ರದ ಗಣ್ಯರು ಸೇರಿದಂತೆ ಟಿಎಪಿಸಿಎಂಎಸ್ ಕಾರ್ಯದರ್ಶಿ ಸಂಧ್ಯಾ ಸಿಬ್ಬಂದಿಗಳಾದ ಜಯಪಾಲ್, ಬಿ.ಪಿ.ಸತೀಶ್, ಎಸ್.ಎನ್.ಹರೀಶ್, ಜಯಸೂರ್ಯ, ತ್ರಿವೇಣಿ ಹಾಗೂ ಇತರರು ಇದ್ದರು.

error: Content is protected !!