ಹಾಸನ: ಪತ್ರಕರ್ತ ಅರಕಲಗೂಡು ಜಯಕುಮಾರ್ ಗೆ ಮಾತೃ ವಿಯೋಗ

ಹಾಸನ(kannadapost.com): ಹಿರಿಯ ಪತ್ರಕರ್ತ, ಚಲನಚಿತ್ರ ನಿರ್ದೇಶಕ ಅರಕಲಗೂಡು ಜಯಕುಮಾರ್ ಅವರಿಗೆ ಮಾತೃ ವಿಯೋಗವಾಗಿದೆ.

ಶಾಂತಲಕ್ಷ್ಮೀ (77) ಸೋಮವಾರ ಬೆಂಗಳೂರಿನಲ್ಲಿ ಅನಾರೋಗ್ಯದಿಂದ ಮೃತಪಟ್ಟರು. ಅವರಿಗೆ ಅರಕಲಗೂಡು ಜಯಕುಮಾರ್ ಸೇರಿ ನಾಲ್ವರು ಪುತ್ರರಿದ್ದಾರೆ.

ಮಂಗಳವಾರ ಅರಕಲಗೂಡಿನಲ್ಲಿ ಅಂತ್ಯಕ್ರಿಯೆ ನಡೆಯಲಿದೆ.