27.2 C
Munich
Home News ರೋಡ್‌ ರೇಜ್‌ ಕಿರುಚಿತ್ರ ಬಿಡುಗಡೆ: ಪೊಲೀಸ್‌ ಕಮಿಷನರ್‌ ಸೀಮಂತ್‌ ಕುಮಾರ್‌ ಸಿಂಗ್‌ರಿಂದ ಮೆಚ್ಚುಗೆ

ರೋಡ್‌ ರೇಜ್‌ ಕಿರುಚಿತ್ರ ಬಿಡುಗಡೆ: ಪೊಲೀಸ್‌ ಕಮಿಷನರ್‌ ಸೀಮಂತ್‌ ಕುಮಾರ್‌ ಸಿಂಗ್‌ರಿಂದ ಮೆಚ್ಚುಗೆ

ಶ್ರೀ ಸಾಯಿ ಗಗನ್‌ ಡಿಸ್ಟ್ರಿಬ್ಯೂಟರ್‌ ಬ್ಯಾನರ್‌ ಅಡಿಯಲ್ಲಿ ರಾಜಶೇಖರ್‌ ಸೋಮಶೇಖರ್‌ ನಿರ್ಮಿಸಿರುವ ಈ ಕಿರುಚಿತ್ರವನ್ನು ಬೆಂಗಳೂರು ಪೊಲೀಸ್‌ ಕಮಿಷನರ್‌ ಸೀಮಂತ್‌ ಕುಮಾರ್‌ ಸಿಂಗ್‌ ಬಿಡುಗಡೆ ಮಾಡಿದರು.

ಕಿರುಚಿತ್ರವನ್ನು ವೀಕ್ಷಿಸಿ ಮೆಚ್ಚುಗೆ ವ್ಯಕ್ತಪಡಿಸಿರುವ ಪೊಲೀಸ್‌ ಕಮಿಷನರ್‌, ಇಂತಹ ಸಾಮಾಜಿಕ ಜಾಗೃತಿ ಮೂಡಿಸುವ ಚಿತ್ರಗಳು ಹೆಚ್ಚಿನ ಸಂಖ್ಯೆಯಲ್ಲಿ ಬರಬೇಕು ಎಂದು ಚಿತ್ರತಂಡಕ್ಕೆ ಶುಭ ಹಾರೈಸಿದರು. ಮುಂದಿನ ದಿನಗಳಲ್ಲಿ ಮಾದಕ ವಸ್ತುಗಳ ದುಷ್ಪರಿಣಾಮಗಳ ಕುರಿತು ಕೂಡ ಜಾಗೃತಿ ಮೂಡಿಸುವ ಚಿತ್ರಗಳು ನಿರ್ಮಾಣವಾಗಲಿ ಎಂದು ಆಶಿಸಿದರು.

ಕಾರ್ಯಕ್ರಮದಲ್ಲಿ ಡೈಲಾಗ್‌ ರೈಟರ್‌ ಮಾಸ್ತಿ, ನಟ ಸುಚೇಂದ್ರ ಪ್ರಸಾದ್‌ ಹಾಗೂ ಲಹರಿ ವೇಲು ಸೇರಿದಂತೆ ಚಿತ್ರರಂಗದ ಗಣ್ಯರು ಭಾಗವಹಿಸಿದ್ದರು.

“ಈ ರೀತಿಯ ಚಿತ್ರಗಳಿಗೆ ಬರೆಯುವುದು ಆತ್ಮಸಾಕ್ಷಿಗೆ ಖುಷಿ ಕೊಡುತ್ತದೆ”

ಡೈಲಾಗ್‌ ರೈಟರ್‌ ಮಾಸ್ತಿ ಮಾತನಾಡಿ, ಸಾಮಾಜಿಕ ಕಾಳಜಿಯುಳ್ಳ ಇಂತಹ ಚಿತ್ರಗಳಿಗೆ ಬರೆಯುವುದು ಆತ್ಮಸಾಕ್ಷಿಗೆ ಖುಷಿ ನೀಡುತ್ತದೆ. “ಈಗೋ ಬಿಟ್ಟರೆ ಲೈಫ್‌ ಇಸ್‌ ಬ್ಯೂಟಿಫುಲ್‌” ಎಂಬ ಸಂದೇಶವನ್ನು ನೀಡಿದರು.

ಯಾರು ಯಾರು ಚಿತ್ರದಲ್ಲಿ?

‘ರೋಡ್‌ ರೇಜ್‌’ ಕಿರುಚಿತ್ರವನ್ನು ಸೂರ್ಯ ನಿರ್ದೇಶಿಸಿದ್ದು, ಗಗನ್‌ ಶೇಖರ್‌, ಆದಿ, ಸಮೀರ್‌ ಆಚಾರ್ಯ, ಆದ್ಯ, ಯೋಷಿತಾ ಹಾಗೂ ಮನು ಅಭಿನಯಿಸಿದ್ದಾರೆ.

ಪವನ್‌ ರಾವ್‌ ಸಂಗೀತ ಸಂಯೋಜನೆ ಮಾಡಿದ್ದು, ಪ್ರಮೋದ್‌ ಕೋಟ್ಯಾನ್‌ ಛಾಯಾಗ್ರಹಣ ನಿರ್ವಹಿಸಿದ್ದಾರೆ.

ಕಿರುಚಿತ್ರವು ಸಾಯಿ ಗಗನ್‌ ಯೂಟ್ಯೂಬ್‌ ಚಾನೆಲ್‌ನಲ್ಲಿ ಬಿಡುಗಡೆಯಾಗಿದೆ.

error: Content is protected !!