Rajasthan:ರಾಜಸ್ಥಾನ ರೈತನ ಕಣ್ಣೀರಿನ ಕಥೆ: ಮಗಳ ವೈದ್ಯಕೀಯ ಕನಸಿಗಾಗಿ ಜಮೀನು ಮಾರಿದ ತಂದೆ, ಕೊನೆಗೆ ಮೃತದೇಹದೊಂದಿಗೆ ಊರಿಗೆ ವಾಪಸ್!

  • ಮಗಳ ವೈದ್ಯಕೀಯ ಶಿಕ್ಷಣಕ್ಕಾಗಿ ಜಮೀನು ಮಾರಿದ (Rajasthan) ರಾಜಸ್ಥಾನ ರೈತ. MBBS ಪೂರ್ಣಗೊಳಿಸಿದ್ದ 24 ವರ್ಷದ ಯುವತಿ ದೆಹಲಿಯ ಕಟ್ಟಡ ಕುಸಿತ ದುರಂತದಲ್ಲಿ ಸಾವನ್ನಪ್ಪಿದ್ದು, ತಂದೆ ಮೃತದೇಹದೊಂದಿಗೆ ಊರಿಗೆ ವಾಪಸ್ ಬಂದ ಹೃದಯವಿದ್ರಾವಕ ಘಟನೆ.

Rajasthan: ನವದೆಹಲಿ ದಕ್ಷಿಣ ಭಾಗದ ಸಾಕೇತ್ ಸಮೀಪದ ಸೈದುಲಾಜಾಬ್ ಪ್ರದೇಶದಲ್ಲಿ ಕುಸಿದ ನಾಲ್ಕು ಅಂತಸ್ತಿನ ಕಟ್ಟಡ ದುರಂತದಲ್ಲಿ ಮೃತಪಟ್ಟ ಆರು ಮಂದಿಯಲ್ಲಿ ರಾಜಸ್ಥಾನದ ಅಲ್ವಾರ್ ಜಿಲ್ಲೆಯ 24 ವರ್ಷದ ವೈದ್ಯಕೀಯ ಪದವೀಧರೆ ಏಕ್ತಾ ಕೂಡ ಸೇರಿದ್ದರು. ತನ್ನ ಮಗಳು ವೈದ್ಯೆಯಾಗಬೇಕು ಎಂಬ ಕನಸಿಗಾಗಿ ರೈತನಾದ ತಂದೆ ರಮೇಶ್ ಚಂದ್ ತಮ್ಮ ಜಮೀನಿನ ಒಂದು ಭಾಗವನ್ನು ಮಾರಾಟ ಮಾಡಿ ವಿದೇಶದಲ್ಲಿ MBBS ಓದಲು ನೆರವಾಗಿದ್ದರು. ಆದರೆ ಆ ಕನಸು ದುರಂತ ಅಂತ್ಯ ಕಂಡಿದೆ.

ಕಿರ್ಗಿಸ್ಥಾನದಲ್ಲಿ MBBS ಪೂರ್ಣಗೊಳಿಸಿದ್ದ ಏಕ್ತಾ, ಭಾರತದಲ್ಲಿ ವೈದ್ಯಕೀಯ ವೃತ್ತಿ ನಡೆಸಲು ಅಗತ್ಯವಾದ ಪರೀಕ್ಷೆಗೆ ತಯಾರಿ ನಡೆಸಲು ದೆಹಲಿಗೆ ಮರಳಿದ್ದರು. ಆದರೆ ಶನಿವಾರ ರಾತ್ರಿ ಸಂಭವಿಸಿದ ಕಟ್ಟಡ ಕುಸಿತದಲ್ಲಿ ಅವರು ಸಾವನ್ನಪ್ಪಿದ್ದಾರೆ. ಮಗಳ ಜನ್ಮದಿನಕ್ಕೆ ಕೆಲವೇ ದಿನಗಳು ಬಾಕಿ ಇದ್ದಾಗ ಈ ದುರ್ಘಟನೆ ಸಂಭವಿಸಿದೆ ಎಂದು ವರದಿಗಳು ತಿಳಿಸಿವೆ.

ರಕ್ಷಣೆ ಕಾರ್ಯಾಚರಣೆ ಸುಮಾರು 19 ಗಂಟೆಗಳ ಕಾಲ ನಡೆದಿದ್ದು, ಕೊನೆಗೆ ಮಗಳ ಮೃತದೇಹ ಹೊರತೆಗೆದಾಗ ತಂದೆ ರಮೇಶ್ ಚಂದ್ ಕಣ್ಣೀರಿನಲ್ಲಿ ಮುಳುಗಿದರು. ಮಗಳ ವೈದ್ಯಕೀಯ ಕನಸಿಗಾಗಿ ಎಲ್ಲವನ್ನೂ ತ್ಯಾಗ ಮಾಡಿದ ಕುಟುಂಬಕ್ಕೆ ಇದು ಭಾರೀ ಆಘಾತವಾಗಿದೆ.

ಈ ದುರಂತಕ್ಕೆ ದೇಶದಾದ್ಯಂತ ಭಾರೀ ಭಾವುಕ ಪ್ರತಿಕ್ರಿಯೆ ಮೂಡಿಸಿದ್ದು, ಶಿಕ್ಷಣಕ್ಕಾಗಿ ಕುಟುಂಬಗಳು ಮಾಡುವ ತ್ಯಾಗ ಮತ್ತು ಸುರಕ್ಷತಾ ನಿರ್ಲಕ್ಷ್ಯದ ಪರಿಣಾಮಗಳ ಬಗ್ಗೆ ಚರ್ಚೆ ಆರಂಭವಾಗಿದೆ.