ಜಾವಗಲ್ | ಹಾಸನ ಜಿಲ್ಲೆ: ಮಾರ್ಚ್ 5,2026(www.kannadapost.com): ವಿಷಕಾರಿ ಮೇವು ತಿಂದು ಸುಮಾರು 70ಕ್ಕೂ ಹೆಚ್ಚು ಕುರಿಗಳು ಸಾವನ್ನಪ್ಪಿರುವ ದಾರುಣ ಘಟನೆ ಹಾಸನ ಜಿಲ್ಲೆಯ ಜಾವಗಲ್ ಸಮೀಪದ ದೊಡ್ಡಘಟ್ಟ ಗ್ರಾಮದಲ್ಲಿ ನಡೆದಿದೆ. ಈ ಘಟನೆ ಕುರಿಗಾಹಿಗಳು ಮತ್ತು ಕುರಿ ಮಾಲೀಕರಲ್ಲಿ ಆತಂಕ ಮೂಡಿಸಿದೆ.
ತುಮಕೂರು ಜಿಲ್ಲೆಯ ಶಿರಾ ತಾಲೂಕಿನಿಂದ ಕುರಿ ಮಂದೆಯನ್ನು ಮೇಯಿಸಲು ಕುರಿಗಾಹಿಗಳು ಹಾಸನ ಜಿಲ್ಲೆಗೆ ಆಗಮಿಸಿದ್ದರು. ದೊಡ್ಡಘಟ್ಟ ಗ್ರಾಮದ ಬಳಿ ಹೊಲದಲ್ಲಿ ಮೇಯುತ್ತಿದ್ದ ಕುರಿಗಳು ಮೆಕ್ಕೆಜೋಳದ ಚಿಗುರು ತಿಂದು ವಿಷಕಾರಿ ಪರಿಣಾಮಕ್ಕೆ ಒಳಗಾಗಿವೆ ಎಂದು ಶಂಕಿಸಲಾಗಿದೆ.
ಮೆಕ್ಕೆಜೋಳದ ಚಿಗುರು ಸೊಕ್ಕಿ ವಿಷಕಾರಿ ಆಗಿರುವ ಸಾಧ್ಯತೆಯಿಂದ ಈ ದುರ್ಘಟನೆ ಸಂಭವಿಸಿದೆ ಎಂದು ಸ್ಥಳೀಯರು ತಿಳಿಸಿದ್ದಾರೆ.
ಹೊಟ್ಟೆ ತುಂಬಿಸಿಕೊಳ್ಳಲು ಹೊಲದಲ್ಲಿ ಮೇಯುತ್ತಿದ್ದ ಕುರಿಗಳು ಕೆಲವೇ ಸಮಯದಲ್ಲಿ ಹೊಲದ ವಿವಿಧ ಕಡೆಗಳಲ್ಲಿ ಸತ್ತು ಬಿದ್ದ ದೃಶ್ಯಗಳು ಕರುಣಾಜನಕವಾಗಿದ್ದವು. ಈಗಾಗಲೇ ಸುಮಾರು 70ಕ್ಕೂ ಹೆಚ್ಚು ಕುರಿಗಳು ಸಾವನ್ನಪ್ಪಿದ್ದು, ಇನ್ನೂ ಕೆಲವು ಕುರಿಗಳ ಸ್ಥಿತಿ ಗಂಭೀರವಾಗಿದೆ.
ಸುದ್ದಿ ತಿಳಿದ ತಕ್ಷಣ ಹಾಸನದಿಂದ ಮೂರು ಮಂದಿ ಪಶುವೈದ್ಯರ ತಂಡ ಸ್ಥಳಕ್ಕೆ ಭೇಟಿ ನೀಡಿ ಚಿಕಿತ್ಸೆ ನೀಡುತ್ತಿದೆ.
ಈ ಕುರಿ ಮಂದೆಯಲ್ಲಿ ಒಟ್ಟು ಸುಮಾರು 800 ಕುರಿಗಳು ಇದ್ದು, ಅವು ತುಮಕೂರು ಜಿಲ್ಲೆಯ ಶಿರಾ ಮೂಲದ ರಾಜಣ್ಣ ಅವರಿಗೆ ಸೇರಿವೆ ಎಂದು ತಿಳಿದು ಬಂದಿದೆ.
ಕುರಿಗಳನ್ನು ಕಳೆದುಕೊಂಡು ಮಾಲೀಕರು ಹಾಗೂ ಕುರಿಗಾಹಿಗಳು ಕಂಗಾಲಾಗಿದ್ದಾರೆ. ಶಿರಾದಿಂದ ಕುರಿಗಳನ್ನು ಮೇಯಿಸಲು ಬಂದಿದ್ದ ರಾಮಣ್ಣ, ಭಾಗ್ಯಮ್ಮ ಮತ್ತು ರಂಗನಾಥ್ ಸೇರಿದಂತೆ ಕುರಿಗಾಹಿಗಳಲ್ಲಿ ಮುಂದಿನ ಪರಿಸ್ಥಿತಿ ಬಗ್ಗೆ ಆತಂಕ ಮನೆ ಮಾಡಿದೆ.
ಕುರಿ ಮಾಲೀಕರು ಮತ್ತು ಕುರಿಗಾಹಿಗಳು ಸರ್ಕಾರದಿಂದ ಸೂಕ್ತ ಪರಿಹಾರ ನೀಡುವಂತೆ ಮನವಿ ಮಾಡಿದ್ದಾರೆ.
Over 70 Sheep Die After Consuming Toxic Fodder in Hassan District
Javagal | Hassan District: In a tragic incident, more than 70 sheep died after reportedly consuming toxic fodder near Doddaghatta village in Javagal taluk of Hassan district.
Shepherds had brought a flock of sheep from Sira in Tumakuru district for grazing. The sheep were grazing in a field where young maize plants were grown, which are suspected to have caused poisoning.
According to local sources, the maize sprouts may have turned toxic, leading to the sudden deaths of the animals.
The sight of sheep lying dead across the farmland has left the shepherds and owners devastated.
So far over 70 sheep have died, and several others are reported to be in critical condition.
After receiving information, a team of three veterinary doctors from Hassan rushed to the spot and began treatment for the surviving animals.
The flock consisted of around 800 sheep belonging to Rajanna, a resident of Sira in Tumakuru district.
Shepherds Ramanna, Bhagyamma and Ranganath, who had migrated with the flock for grazing, are worried about further losses.
The sheep owners and shepherds have appealed to the government to provide adequate compensation for the losses.










