6.9 C
Munich
Home News ಹಾಸನ: ಜೀವ ಬೆದರಿಕೆ ಆರೋಪ: ನಂಗೆ ಏನಾದ್ರೊ ಆದ್ರೆ ಗ್ರಾಮದ ಕೆಲವರೆ ಕಾರಣ, ನ್ಯಾಯಕ್ಕಾಗಿ ಅರ್ಚಕ...

ಹಾಸನ: ಜೀವ ಬೆದರಿಕೆ ಆರೋಪ: ನಂಗೆ ಏನಾದ್ರೊ ಆದ್ರೆ ಗ್ರಾಮದ ಕೆಲವರೆ ಕಾರಣ, ನ್ಯಾಯಕ್ಕಾಗಿ ಅರ್ಚಕ ಡಿ. ನಿಖಿಲ್ ಜಿಲ್ಲಾಡಳಿತಕ್ಕೆ ಮನವಿ

ಹಾಸನ: ಅರಸೀಕೆರೆ ತಾಲ್ಲೂಕಿನ ಬಾಣವಾರ ಹೋಬಳಿಯ ಬೇವಿನಹಳ್ಳಿ ಗ್ರಾಮದಲ್ಲಿ ಕಳೆದ ಎಂಟು ತಿಂಗಳಿನಿಂದ ಅರ್ಚಕನಾಗಿ ಪೂಜಾ ಕಾರ್ಯ ನಿರ್ವಹಿಸುತ್ತಿರುವ ಡಿ. ನಿಖಿಲ್ ಅವರು, ತಮ್ಮ ಜೀವನ ಹಾಗೂ ಭದ್ರತೆ ಕುರಿತು ಗಂಭೀರ ಆತಂಕ ವ್ಯಕ್ತಪಡಿಸಿ ನ್ಯಾಯ ಕೊಡಿಸುವಂತೆ ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಿದ್ದಾರೆ.

ಇದೆ ವೇಳೆ ಮಾಧ್ಯಮದೊಂದಿಗೆ ಮಾತನಾಡಿದ ಅರ್ಚಕ ನಿಖಿಲ್, ಮುದ್ರಾ ಇಲಾಖೆಯಿಂದ ಬರಬೇಕಾದ ಗೌರವ ಧನ ಸಿಗದೆ ಜೀವನ ನಡೆಸುವುದು ಕಷ್ಟವಾಗಿರುವ ಮಧ್ಯೆ, ಕೆಲ ವ್ಯಕ್ತಿಗಳು ಜೀವ ಬೆದರಿಕೆ ಹಾಕುತ್ತಿದ್ದಾರೆ. ಅವರ ಪ್ರಕಾರ, ಬಸವರಾಜ, ಮಂಜುಳಾ, ಇಂದ್ರಜಿತ್ , ಬಸವರಾಜ್, ರವಿ ಸೇರಿದಂತೆ ಕೆಲವರು ನೀನು ಜೀವನ ಹೇಗೆ ಮಾಡುತ್ತೀಯೋ ನೋಡುತ್ತೇವೆ ಎಂದು ನೇರವಾಗಿ ಬೆದರಿಕೆ ಹಾಕಿದ್ದಾರೆ.

ಅಲ್ಲದೆ ಪಕ್ಕದ ದೊಡ್ಡನಹಳ್ಳಿ ಗ್ರಾಮದ ಮಧು, ರಾಜಣ್ಣ, ಬಸವರಾಜ್, ಆನಂದಪ್ಪ, ಪ್ರಕಾಶ್, ಈಶ್ವರಪ್ಪ ಸೇರಿದಂತೆ ಇತರರು ಈ ಬೆದರಿಕೆಗೆ ಬೆಂಬಲ ನೀಡುತ್ತಿದ್ದಾರೆ ಎಂದು  ದೂರಿದ್ದಾರೆ.

ಜಮೀನು ವಿಚಾರದಲ್ಲಿ ಸುಳ್ಳು ಅಪವಾದಗಳನ್ನು ಸೃಷ್ಟಿಸಿ, ಊರಿನಿಂದ ಆಚೆಗೆ ತಳ್ಳಿ ಹೊರಹಾಕಲು ಪ್ರಯತ್ನಿಸಲಾಗಿದೆ. ದೇವಾಲಯದಲ್ಲಿ ಪೂಜೆ ಮಾಡಿಸಿದ್ದರೂ, ಮಾಡಿದ ಕೆಲಸಕ್ಕೆ ಸಂಬಳ ನೀಡಲು ನಿರಾಕರಿಸಿತ್ತಿದ್ದಾರೆ. ಈ ಬಗ್ಗೆ ಪೊಲೀಸ್ ಠಾಣೆ ಹಾಗೂ ತಹಸೀಲ್ದಾರ್ ಕಚೇರಿಗೆ ದೂರು ನೀಡಿದ್ದರೂ, ಇದುವರೆಗೂ ಯಾವುದೇ ಕ್ರಮ ಕೈಗೊಳ್ಳದಿರುವುದು ಆಡಳಿತ ವ್ಯವಸ್ಥೆಯ ನಿರ್ಲಕ್ಷ÷್ಯವನ್ನು ತೋರಿಸುತ್ತದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ನನಗೆ ಏನಾದರೂ ಅನಾಹುತ ಸಂಭವಿಸಿದರೆ, ಅಥವಾ ನಾನು ಆತ್ಮಹತ್ಯೆಗೆ ಮುಂದಾದರೂ ಈ ಎಲ್ಲಾ ವ್ಯಕ್ತಿಗಳೇ ಕಾರಣ ಎಂದು ಡಿ. ನಿಖಿಲ್ ಅವರು ಸ್ಪಷ್ಟವಾಗಿ ಹೇಳಿಕೊಂಡರು. ಅರ್ಚಕನಾಗಿ ದೇವಾಲಯದ ಸೇವೆಯಲ್ಲಿ  ತೊಡಗಿರುವ ನನಗೆ ನ್ಯಾಯ ಸಿಗದೆ, ಜೀವ ಬೆದರಿಕೆ ಎದುರಿಸುವ ಸ್ಥಿತಿ ನಿರ್ಮಾಣವಾಗಿದೆ.

ಈಗಾಗಲೇ ನನ್ನ ಮೇಲೆ ಹಲ್ಲೆ ಮಾಡಲಾಗಿದೆ ಎಂದು ಸಾಕ್ಷಿಗಳ ಪ್ರದರ್ಶಿಸಿದರು. ಕೂಡಲೇ ಜಿಲ್ಲಾಧಿಕಾರಿಗಳು,  ತಹಸೀಲ್ದಾರ್ ಹಾಗೂ ಸಂಬಂಧ ಪಟ್ಟ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ಬಂದು ಪರಿಶೀಲಿಸಿ ನನಗೆ ನ್ಯಾಯ ಕೊಡಿಸಬೇಕೆಂದು ಇದೆ ವೇಳೆ ಮನವಿ ಮಾಡಿದರು.

ಈ ಪ್ರಕರಣವನ್ನು ಗಂಭೀರವಾಗಿ  ಪರಿಗಣಿಸಿ, ತಕ್ಷಣ ಸೂಕ್ತ ರಕ್ಷಣೆ ನೀಡುವ ಜೊತೆಗೆ  ಆರೋಪಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂಬುದು ಅರ್ಚಕನ ಒತ್ತಾಯವಾಗಿದೆ.

error: Content is protected !!