ಹಾಸನ: ಹಾಸನಾಂಬ ದೇವಸ್ಥಾನದಲ್ಲಿ ಫೆ.6ರಂದು 108 ಸಿದ್ಧಿಗಳಿಂದ ಶ್ರೀದೇವಿ ಪುರಾಣ ಪಠಣ ಹಾಗೂ ಧಾರ್ಮಿಕ ಮಹಾಸಮ್ಮೇಳನ

A Sridevi Purana chanting program was organized by Sridevi devotees on Friday, February 6th, for the welfare of the people at Sri Hassanamba Temple, with more than 108 Siddhis for rain, crop prosperity, and happiness and peace.

ಹಾಸನ : ಸಿಂಹಾಸನಪುರಿ ಹಾಸನದ ಶ್ರೀ ಹಾಸನಾಂಬ ದೇವಸ್ಥಾನದಲ್ಲಿ ಲೋಕಕಲ್ಯಾಣಾರ್ಥವಾಗಿ ಮಳೆ ಬೆಳೆ ಸಮೃದ್ಧಿಗಾಗಿ, ಸುಖ ಶಾಂತಿ ನೆಮ್ಮದಿಗಾಗಿ 108ಕ್ಕೂ ಹೆಚ್ಚು ಸಿದ್ದಿಗಳಿಂದ ಶ್ರೀದೇವಿ ಉಪಾಸಕರಿಂದ ಶ್ರೀದೇವಿ ಪುರಾಣ ಪಠಣ, ಹೋಮ ಮತ್ತು ಧರ್ಮಸಭೆ ಕಾರ್ಯಕ್ರಮವನ್ನು ದಿನಾಂಕ ಫೆಬ್ರವರಿ 6 ರ ಶುಕ್ರವಾರದಂದು ಅಖಿಲ ಭಾರತ ವೀರಶೈವ ಮಹಾಸಭಾ ಹಾಸನ ಸಯುಕ್ತ ಆಶ್ರಯದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಶರಣರ ವಿಚಾರ ಮಂಥನ ಮಾಸಪತ್ರಿಕೆ ಸಂಪಾದಕರಾದ ವೇದಮೂರ್ತಿ ಕಿಡಿಗಣ್ಣಯ್ಯ ಸ್ವಾಮಿ ಹಿರೇಮಠ ಉಮಳಿ ಹೊಸೂರು ಮಾನ್ವಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ದೇವಿ ಪುರಾಣ ಪಠಣದ ನಂತರ ಧಾರ್ಮಿಕ ಮಹಾಸಮ್ಮೇಳನ ಜರಗುವುದು. ಈ ಸಮ್ಮೇಳನದ ದಿವ್ಯ ಸಾನಿಧ್ಯವನ್ನು ಶ್ರೀ ಕಾಲಜ್ಞಾನ ಬ್ರಹ್ಮ ಸದ್ಗುರು ವಿಶ್ವ ಕಾಲಜ್ಞಾನ ಶಿವಯೋಗಿ ಡಾ. ಶ್ರೀ ಶರಣಬಸವ ಮಹಾಸ್ವಾಮಿಗಳು, ಶ್ರೀದೇವಿ ಉಪಾಸಕರು ತಳ್ಳಿ ಹಳ್ಳ ಸಂಸ್ಥಾನ ಕೋಡಿಮಠ ಗಜೇಂದ್ರಗಡ, ಶ್ರೀ ಸೋಮನಾಥ ಶಿವಾಚಾರ್ಯ ಮಹಾಸ್ವಾಮಿಗಳು ರಂಭಾಪುರಿ ಶಾಖಾಮಠ ಸಿಂಧನೂರು ಕನ್ನೂರು, ಶ್ರೀ ನಂದೀಶ್ವರ ಶಿವಾಚಾರ್ಯ ಮಹಾಸ್ವಾಮಿಗಳು ಮಲ್ಲೇಶ್ವರ ಸ್ವಾಮಿ ದೇವಸ್ಥಾನ ಸೀಗೆ ಗುಡ್ಡ, ಹಾಸನ, ಶ್ರೀ ಸಂಗಮೇಶ್ವರ ಸ್ವಾಮೀಜಿ ಜಗನಹಳ್ಳಿ ಮಠ ಹಾಸನ, ಶ್ರೀ ಕುಮಾರಸ್ವಾಮಿಗಳು ಶ್ರೀ ಶನೇಶ್ವರ ಕ್ಷೇತ್ರ ಹೊನ್ನ ಮಾರನಹಳ್ಳಿ ಚನ್ನರಾಯಪಟ್ಟಣ, ವಿನಾಯಕ ಮಹಾಸ್ವಾಮಿಗಳು ಶ್ರೀ ಚಾಮುಂಡೇಶ್ವರಿ ಶಕ್ತಿಪೀಠ ಚಿತ್ರಾಲಿ, ಡಾ. ತೋತಾಪುರಿ ಸೋಮಶೇಖರ ಗುರೂಜಿ ಶ್ರೀ ಕ್ಷೇತ್ರ ಬಸಾಪುರ ತಡಕಲ್ಲೂರು, ತುಮಕೂರು ಜಿಲ್ಲೆ ವಹಿಸುವರು.
ಕಾರ್ಯಕ್ರಮದ ಉದ್ಘಾಟನೆಯನ್ನು ಸಣ್ಣ ನೀರಾವರಿ ಮತ್ತು ವಿಜ್ಞಾನ ತಂತ್ರಜ್ಞಾನ ಸಚಿವರು ಕರ್ನಾಟಕ ಸರ್ಕಾರ ಬೆಂಗಳೂರು ಎನ್. ಎಸ್. ಬೋಸರಾಜು ನೆರವೇರಿಸುವರು. ಲೋಕಸಭಾ ಸದಸ್ಯ ಶ್ರೇಯಸ್ ಪಟೇಲ್ ಜ್ಯೋತಿ ಬೆಳಗಿಸುವರು, ಹಾಸನದ ಶಾಸಕ ಸ್ವರೂಪ್ ಪ್ರಕಾಶ್ ಅಧ್ಯಕ್ಷತೆ ವಹಿಸುವರು. ಮುಖ್ಯ ಅತಿಥಿಗಳಾಗಿ ಬಾ.ನಂ ಲೊಕೇಶ, ಅಧ್ಯಕ್ಷರು ಜಿಲ್ಲಾ ಚುಟುಕು ಸಾಹಿತ್ಯ ಪರಿಷತ್ ಹಾಸನ ಜಿಲ್ಲೆ, ಕಟ್ಟಾಯ ಶಿವಕುಮಾರ ಅಧ್ಯಕ್ಷರು ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ, ಹಾಸನ, ಕಾಂತರಾಜು ಕೆಂಚಮಾರನಹಳ್ಳಿ ಬಿಜೆಪಿ ಮುಖಂಡರು ಹಾಸನ, ಪುನೀತ್ ಗೌಡ ಬಿಜೆಪಿ ಮುಖಂಡರು ಹಾಸನ, ಮುಖ್ಯ ಅತಿಥಿಗಳಾಗಿ ಉಪಸ್ಥಿತರಿರುವರು ಎಂದು ಕಾರ್ಯಕ್ರಮ ಸಂಯೋಜಕ ಶರಣರ ವಿಚಾರಮಂತನ ಮಾಸಪತ್ರಿಕೆ ಸಂಪಾದಕರಾದ ವೇದಮೂರ್ತಿ ಕಿಡಿಕಣ್ಣಯ್ಯ ಸ್ವಾಮಿ ಹಿರೇಮಠ ಉಮಳಿ ಹೊಸೂರು ಮಾನ್ವಿ ತಿಳಿಸಿದ್ದಾರೆ.

A Sridevi Purana chanting program was organized by Sridevi devotees on Friday, February 6th, for the welfare of the people at Sri Hassanamba Temple, with more than 108 Siddhis for rain, crop prosperity, and happiness and peace.