14.2 C
Munich
Home ಕ್ರೈಮ್‌ ಹಾಸನ:ದನ ಮೇಯಿಸಲು ತೆರಳಿದ್ದ ಸಹೋದರರಿಬ್ಬರು ಕೆರೆಗೆ ಬಿದ್ದು ದಾರುಣ ಸಾವು

ಹಾಸನ:ದನ ಮೇಯಿಸಲು ತೆರಳಿದ್ದ ಸಹೋದರರಿಬ್ಬರು ಕೆರೆಗೆ ಬಿದ್ದು ದಾರುಣ ಸಾವು

ಹಾಸನ: ದನ ಮೇಯಿಸಲು ತೆರಳಿದ ಸಹೋದರರಿಬ್ಬರು ಆಕಸ್ಮಿಕವಾಗಿ ಕೆರೆಗೆ ಬಿದ್ದು ಸಾವನ್ನಪ್ಪಿದ ದುರ್ಘಟನೆ ಹಾಸನ ತಾಲ್ಲೂಕಿನ ದುದ್ದ ಹೋಬಳಿ ವಳಗೇರಹಳ್ಳಿ ಗ್ರಾಮದಲ್ಲಿ ನಡೆದಿದೆ.

ಮೃತರನ್ನು ದರ್ಶನ್ (17) ಮತ್ತು ಲಕ್ಷ್ಮೀಕಾಂತ (5) ಎಂದು ಗುರುತಿಸಲಾಗಿದೆ. ಇವರು ಗ್ರಾಮದ ಅರ್ಚಕ ರಾಮಚಂದ್ರ ಮತ್ತು ರತ್ನ ದಂಪತಿಯ ಪುತ್ರರು.

ನಿನ್ನೆ ಬೆಳಿಗ್ಗೆ ದನ ಮೇಯಿಸಲು ತೆರಳಿದ ಸಹೋದರರು ವಾಪಾಸಾಗದ ಹಿನ್ನೆಲೆ, ಪೋಷಕರು ರಾತ್ರಿ ದುದ್ದ ಪೊಲೀಸ್ ಠಾಣೆಯಲ್ಲಿ ನಾಪತ್ತೆ ದೂರು ನೀಡಿದ್ದರು.

ಇಂದು ಬೆಳಿಗ್ಗೆಯಿಂದಲೇ ಪೊಲೀಸರು ಹಾಗೂ ಗ್ರಾಮಸ್ಥರು ಹುಡುಕಾಟ ನಡೆಸಿದ್ದು, ಅಗ್ನಿಶಾಮಕದಳದ ಸಿಬ್ಬಂದಿ ಗ್ರಾಮದಲ್ಲಿನ ಕೆರೆಯಲ್ಲಿ ಶೋಧ ಕಾರ್ಯ ಕೈಗೊಂಡ ವೇಳೆ ಇಬ್ಬರು ಸಹೋದರರ ಮೃತದೇಹಗಳು ಪತ್ತೆಯಾಗಿವೆ.

ಮೃತದೇಹಗಳನ್ನು ಕೆರೆಯಿಂದ ಹೊರತೆಗೆದ ಬಳಿಕ ಪೋಲೀಸರು ಪರಿಶೀಲನೆ ನಡೆಸಿದ್ದು, ಪ್ರಕರಣ ದುದ್ದ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ.

ಇಬ್ಬರು ಬಾಲಕರ ಅಕಾಲಿಕ ಸಾವು ಗ್ರಾಮದಲ್ಲಿ ದುಃಖದ ಛಾಯೆ ಮೂಡಿಸಿದೆ

error: Content is protected !!