12.9 C
Munich
Home ಕ್ರೈಮ್‌ ಚಿಕ್ಕಮಗಳೂರು: ಕುಸಿದ ರಕ್ತದೊತ್ತಡದಿಂದ ಹೃದಯಾಘಾತ- ನಾಳೆ ಹಸೆಮಣೆ ಏರಬೇಕಿದ್ದ ವಧು ಸಾವು!

ಚಿಕ್ಕಮಗಳೂರು: ಕುಸಿದ ರಕ್ತದೊತ್ತಡದಿಂದ ಹೃದಯಾಘಾತ- ನಾಳೆ ಹಸೆಮಣೆ ಏರಬೇಕಿದ್ದ ವಧು ಸಾವು!

ಚಿಕ್ಕಮಗಳೂರು: ನಾಳೆ ಹಸೆಮಣೆ ಏರಬೇಕಾಗಿದ್ದ ಯುವತಿ ಇಂದು ಹೃದಯಾಘಾತಕ್ಕೆ ಬಲಿಯಾದ ಘಟನೆ ಅಜ್ಜಂಪುರ ತಾಲೂಕಿನ ಸೊಲ್ಲಾಪುರ ಗ್ರಾಮದಲ್ಲಿ ನಡೆದಿದೆ.ಶ್

ಶ್ರುತಿ (24) ಮೃತ ದುರ್ದೈವಿ. ಅವರು ನಾಳೆ ತರೀಕೆರೆ ತಾಲೂಕಿನ ಹುರುಳಿಕಟ್ಟಿಯ ದಿಲೀಪ್ ಎನ್ನುವ ಯುವಕನನ್ನು ವರಿಸುವವರಿದ್ದರು.

ಕುಟುಂಬ ಮದುವೆ ಸಂಭ್ರಮದಲ್ಲಿದ್ದಾಗ ಶ್ರುತಿ ಅವರು ಲೋ ಬಿಪಿಯಿಂದ ಕುಸಿದು ಬಿದ್ದಿದ್ದು ಹೃದಯಾಘಾತ ಉಂಟಾಗಿ ಅಕಸ್ಮಿಕವಾಗಿ ಮೃತಪಟ್ಟಿದ್ದಾರೆಂದು ಕುಟುಂಬದವರು ತಿಳಿಸಿದ್ದಾರೆ.

ಇಂದು ಹಾಗೂ ನಾಳೆ ಮದುವೆ ಕಾರ್ಯಕ್ರಮ ನಡೆಯಬೇಕಿತ್ತು. ಈ ದುರ್ಘಟನೆಯಿಂದ ಗ್ರಾಮದಲ್ಲಿ ಶೋಕದ ಛಾಯೆ ಆವರಿಸಿದೆ. ಘಟನೆ ಅಜ್ಜಂಪುರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.

error: Content is protected !!