ಅರಕಲಗೂಡು: ತಾಲ್ಲೂಕಿನ ಬಸವಾಪಟ್ಟಣ ಸಮೀಪ ಸ್ವಿಫ್ಟ್ ಕಾರು ರಸ್ತೆ ವಿಭಜಕಕ್ಕೆ ಡಿಕ್ಕಿಯಾಗಿ ಇಬ್ಬರು ಮೃತಪಟ್ಟಿರುವ ಘಟನೆ ಶನಿವಾರ ರಾತ್ರಿ ನಡೆದಿದೆ.
ಕೊಣನೂರಿನ ದರ್ಶನ್ (೨೫), ಕಬ್ಬಳಿಗೆರೆಯ ರಂಗನಾಥ ಪ್ರಸಾದ್ (೨೨) ಮೃತರು. ರಜನಿಕಾಂತ್ ನಟನೆಯ ಕೂಲಿ ಸಿನಿಮಾ ವೀಕ್ಷಣೆಗೆಂದು ಮೈಸೂರಿಗೆ ತೆರಳುತ್ತಿದ್ದರು. ರಾತ್ರಿ ೧೦ ಗಂಟೆಗೆ ಸಿನಿಮಾ ಆರಂಭವಾಗುತ್ತಿದ್ದರಿAದ ಬೇಗ ತಲುಪಲೆಂದು ೮ ಗಂಟೆಗೆ ಕೊಣನೂರಿನಿಂದ ತೆರಳುತ್ತಿದ್ದರು. ಚಾಲಕ ರಂಗನಾಥ್ ಪ್ರಸಾದ್ ವಾಹನವನ್ನು ಜೋರಾಗಿ ಓಡಿಸಿದ್ದರಿಂದ ರಾಜ್ಯ ಹೆದ್ದಾರಿ ವಿಭಜಕಕ್ಕೆ ಡಿಕ್ಕಿಯಾಗಿದೆ ಎನ್ನಲಾಗಿದೆ.
ಅಪಘಾತದ ರಭಸಕ್ಕೆ ವಾಹನ ಸಂಪೂರ್ಣ ಜಖಂಗೊAಡಿದೆ. ಕೊಣನೂರು ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಸಲಾಯಿತು. ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿತ್ತು










