ಹಾಸನ: ಛತ್ತೀಸ್ ಘಡ್ ರಾಜನನ್ದಗನ್ ಎಂಬಲ್ಲಿ ಜ.10ರಿಂದ ಆರಂಭವಾಗಲಿರುವ 17ರ ವಯೋಮಿತಿಯೊಳಗಿನ ಬಾಲಕಿಯರ ರಾಷ್ಟ್ರ ಮಟ್ಟದ ಬಾಸ್ಕೆಟ್ ಬಾಲ್ ಪಂದ್ಯಾಳಿಗೆ ರಾಜ್ಯ ತಂಡವನ್ನು ಜಿಲ್ಲೆಯಿಂದ ಮೂವರು ಕ್ರೀಡಾಪಟುಗಳು ಪ್ರತಿನಿಧಿಸಲಿದ್ದಾರೆ.
ನಗರದ ಕ್ರೀಡಾ ವಸತಿ ಶಾಲೆಯಲ್ಲಿ ವಾಸ್ತವ್ಯ ಪಡೆದಿರುವ ಶ್ರೀ ನಗರದ ಆದಿಚುಂಚನಗಿರಿ ಆಂಗ್ಲ ಮಾಧ್ಯಮ ಶಾಲೆಯ ಹತ್ತನೇ ತರಗತಿ ವಿದ್ಯಾರ್ಥಿಗಳಾದ ನೇಹಾ ಕೆ, ರೇವತಿ ಪಿ.ಎಲ್, ಸಂತ ಫಿಲೋಮಿನಾ ಶಾಲೆಯ ವಿದ್ಯಾರ್ಥಿನಿ ಶ್ರೇಷ್ಠ ಎಚ್.ಎಸ್ ರಾಜ್ಯ ತಂಡವನ್ನು ಪ್ರತಿನಿಧಿಸುತ್ತಿದ್ದಾರೆ.
ಈ ಮೂವರು ವಿದ್ಯಾರ್ಥಿನಿಯರು ಹ್ಯಾಂಡ್ ಬಾಲ್ ನಲ್ಲೂ ಕೂಡ ರಾಜ್ಯ ತಂಡಕ್ಕೆ ಅರ್ಹತೆ ಪಡೆದಿದ್ದು, ಜ.19ರಿಂದ ಗುಜರಾತಿನ ಸೋಮನಾಥ್ ಎಂಬಲ್ಲಿ ರಾಷ್ಟ ಮಟ್ಟದ ಹ್ಯಾಂಡ್ ಬಾಲ್ ಪಂದ್ಯಾವಳಿ ಜರುಗಲಿದೆ.
ಕ್ರೀಡಾ ವಸತಿ ಶಾಲೆಯ ನಿವೃತ್ತ ತರಬೇತುದಾರ ಸುಬ್ರಮಣ್ಯ ಅವರು ಮೂವರು ವಿದ್ಯಾರ್ಥಿನಿಯರಿಗೆ ಬಾಸ್ಕೆಟ್ ಬಾಲ್ ತರಬೇತಿ ನೀಡಿದ್ದು, ಅವರ ಸಾಧನೆಗೆ ಶ್ರೀ ಆದಿಚುಂಚನಗಿರಿ ಆಂಗ್ಲ ಮಾಧ್ಯಮ ಶಾಲೆ ಹಾಗೂ ಸಂತ ಫಿಲೊಮಿನಾ ಶಾಲೆಯ ಅಡಳಿತ ಮಂಡಳಿ ಸಂತಸ ವ್ಯಕ್ತಪಡಿಸಿ ಶುಭ ಕೋರಿದೆ.
Three athletes from the district will represent the state team in the national-level basketball tournament for girls under the age of 17, which will begin on January 10 in Rajnandgan, Chhattisgarh.










