ಹಾಸನ: ಬೂವನಹಳ್ಳಿ ಕೃಷಿ ಪತ್ತಿನ ಸಹಕಾರ ಸಂಘದಲ್ಲಿ ನಾಗರೀಕರಿಂದ ಕ್ಯಾಲೆಂಡರ್ ಬಿಡುಗಡೆ

The calendar, brought out by the Primary Agricultural Cooperative Society in Buvanahalli near Hassan, was amicably released by the villagers.

ಹಾಸನ: ಸಮೀಪದ ಬೂವನಹಳ್ಳಿಯ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದಿಂದ ಹೊರ ತಂದಿರುವ ಕ್ಯಾಲೆಂಡರ್ ಗ್ರಾಮದ ನಾಗರೀಕರು ಸೌಹಾರ್ದಯುತವಾಗಿ ಬಿಡುಗಡೆಗೊಳಿಸಿದರು.

ಸಮಾಜಕ್ಕೆ ಮಾರ್ಗದರ್ಶನ ನೀಡುವ ಹಿರಿಯರ ಸಾನ್ನಿಧ್ಯದಲ್ಲಿ ಕ್ಯಾಲೆಂಡರ್ ಬಿಡುಗಡೆಗೊಂಡುದು ಕಾರ್ಯಕ್ರಮಕ್ಕೆ ವಿಶೇಷ ಗೌರವ ತಂದಿತು.

ಈ ಸಂದರ್ಭ ಮಾತನಾಡಿದ ನಾಗರೀಕರು, “ಕ್ಯಾಲೆಂಡರ್ ಕೇವಲ ದಿನಾಂಕಗಳ ಸಂಗ್ರಹವಲ್ಲ, ಅದು ಸಂಸ್ಕೃತಿ, ಮೌಲ್ಯಗಳು ಮತ್ತು ಸಮಾಜದ ಸ್ಮರಣೆಯ ಪ್ರತಿಬಿಂಬವಾಗಿದೆ. ಯುವಜನತೆ ಸಮಯದ ಮೌಲ್ಯ ಅರಿತು ಬದುಕು ಕಟ್ಟಿಕೊಳ್ಳಬೇಕು” ಎಂದು ಸಂದೇಶ ನೀಡಿದರು.

ಕ್ಯಾಲೆಂಡರ್‌ನಲ್ಲಿ ರಾಷ್ಟ್ರೀಯ ಹಬ್ಬಗಳು, ಮಹನೀಯರ ಜಯಂತಿಗಳು, ಸಾಮಾಜಿಕ ಸಂದೇಶಗಳು ಹಾಗೂ ಉಪಯುಕ್ತ ಮಾಹಿತಿಯನ್ನು ಒಳಗೊಂಡಿದೆ.

ಕಾರ್ಯಕ್ರಮದ ಅಂತ್ಯದಲ್ಲಿ ನಾಗರೀಕರನ್ನು ಗೌರವಿಸಿ, ಎಲ್ಲರಿಗೂ ಶುಭಾಶಯಗಳನ್ನು ವಿನಿಮಯ ಮಾಡಿಕೊಳ್ಳಲಾಯಿತು.

The calendar, brought out by the Primary Agricultural Cooperative Society in Buvanahalli near Hassan, was amicably released by the villagers.