ಹಾಸನ:ಜತೆಯಾಗಿ ಬೆಳೆದು, ಬದುಕಿದ್ದ ಜೀವದ ಗೆಳೆತಿಯರು ಸಾವಿನಲ್ಲೂ ಒಂದಾದರು: ಚಿತ್ರದುರ್ಗ ಬಸ್ ದುರಂತದಲ್ಲಿ ಮೃತಪಟ್ಟ ನವ್ಯ-ಮಾನಸ ಅವರದ್ದು ಕುಚಿಕು ಫ್ರೆಂಡ್ ಶಿಪ್

They were lifelong friends, having studied together, grown up together, worked in the same office, even wore the same clothes and jewelry. Now, they have completed their journey to this world together.

ಹಾಸನ: ಅವರಿಬ್ಬರೂ ಜೀವದ ಗೆಳತಿಯರು, ಒಟ್ಟಾಗಿ ಓದಿ, ಒಟ್ಟಾಗಿ ಬೆಳೆದು, ಒಂದೇ ಕಚೇರಿಯಲ್ಲಿ ಕೆಲಸ ಮಾಡುತ್ತಿದ್ದರು, ಇಬ್ಬರು ತೊಡುತ್ತಿದ್ದ ಉಡುಗೆ, ಆಭರಣಗಳೂ ಒಂದೇ ರೀತಿ ಇರುತ್ತಿದ್ದವು. ಈಗ ಇಬ್ಬರೂ ಒಟ್ಟಾಗಿಯೇ ಇಹಲೋಹದ ಪ್ರಯಾಣ ಮುಗಿಸಿದ್ದಾರೆ.

ಇದು ಚಿತ್ರದುರ್ಗ ಸಮೀಪ ಸಂಭವಿಸಿದ ಖಾಸಗಿ ಬಸ್ ಘೋರ ದುರಂತದಲ್ಲಿ ಮೃತರಾದ ಚನ್ನರಾಯಪಟ್ಟಣದ ಯುವತಿಯರಾದ ನವ್ಯ ಹಾಗೂ ಮಾನಸ ಅವರ ದುರಂತ ಕತೆ.

ಈಗ ಮಕ್ಕಳ ಶವಗಳನ್ನು ಗುರುತು ಹಿಡಿಯಲಾರದ ಸ್ಥಿತಿಯಲ್ಲಿ ಕಂಡ ಹೆತ್ತವರು ರೋಧಿಸುತ್ತಿದ್ದಾರೆ. ಗೆಳತಿರಾದ ಮಾನಸ, ನವ್ಯ, ಮಿಲನ ಮೂವರೂ ಬೆಂಗಳೂರಿನಿಂದ ಗೋಕರ್ಣ ಪ್ರವಾಸಕ್ಕೆ ಹೊರಟಿದ್ದರು.

ನಮ್ಮ ಮಗಳು ಹಾಗೂ ಮಾನಸ ಸಂಪೂರ್ಣ ಸುಟ್ಟು ಹೋಗಿದ್ದಾರೆ. ಮೃತದೇಹ ಕಂಡು ಹಿಡಿಯಲು ಆಗದ ರೀತಿ ಆಗಿತ್ತು. ಮಾನಸ ಹಾಗೂ ನವ್ಯ ಒಂದೇ ರೀತಿಯ ಬಟ್ಟೆ ತೆಗೆದುಕೊಳ್ಳತ್ತಿದ್ದರು. ಒಂದೇ‌ ರೀತಿಯ ಜ್ಯುವೆಲರಿ ಧರಿಸುತ್ತಿದ್ದರು. ಅವರು ಓದಿದ್ದು ಒಂದೇ ಕಾಲೇಜು ಒಟ್ಟಿಗೇ ಇದ್ದರು, ಒಂದೇ ಕಡೆ ಕೆಲಸ ಮಾಡುತ್ತಿದ್ದರು. ಎಲ್ಲಿಗೇ ಹೋಗಲಿ ಊರಿಗೆ ಬರಲಿ ಒಟ್ಟಿಗೆ ಓಡಾಡೋರು. ಏಪ್ರಿಲ್ 28-29 ಕ್ಕೆ ಮದುವೆ ನಿಶ್ಚಯ ಮಾಡಿದ್ದೆವು. ಜನವರಿ 25 ಕ್ಕೆ ಬೆಂಗಳೂರಿನಲ್ಲಿ ಎಂಗೇಜ್ಮೆಂಟ್ ಕೂಡ ಮಾಡಬೇಕಿತ್ತು ಎಂದು ನವ್ಯ ಹಾಗೂ ಮಾನಸ ಗೆಳೆತನ ನೆನೆದು ನವ್ಯ ಅವರ ತಂದೆ ಮಂಜಪ್ಪ ಕಣ್ಣೀರಿಟ್ಟರು.

ಇನ್ನೇನು ಬ್ಯಾಚುಲರ್ ಲೈಫ್ ಮುಗಿಸಲು ಸಿದ್ಧವಾಗಿದ್ದ ನವ್ಯ, ಗೆಳತಿಯರೊಂದಿಗೆ ಸಂತೋಷಕರವಾದ ರಜೆಯನ್ನು ಅನುಭವಿಸಲು ಹೊರಟಿದ್ದಾಗ ಕ್ರೂರ ವಿಧಿ ಅವರನ್ನು ಬಲಿಪಡೆದಿದೆ. ಜೀವದ ಗೆಳತಿಯರಿಬ್ಬರು ಮಣ್ಣು ಸೇರಿದ್ದಾರೆ. ಈಗ ಪವಾಡ ಸದೃಶವಾಗಿ ಬದುಕಿರುವ ಮಾನಸ ಗೆಳತಿಯರ ಸಾವು ಕಂಡು ಕಣ್ಣೀರಿಡುವಂತಾಗಿದೆ.

-ಕನ್ನಡಪೋಸ್ಟ್ ನ್ಯೂಸ್ ನೆಟ್ವರ್ಕ್, ಹಾಸನ.

They were lifelong friends, having studied together, grown up together, worked in the same office, even wore the same clothes and jewelry. Now, they have completed their journey to this world together.