12.9 C
Munich
Home News ಚನ್ನರಾಯಪಟ್ಟಣ : ಪಟ್ಟಣಕ್ಕೆ ನುಗ್ಗಿದ ಕಾಡುಕೋಣ ದಾಂಧಲೆ – ಇಬ್ಬರಿಗೆ ಸಣ್ಣ ಗಾಯ

ಚನ್ನರಾಯಪಟ್ಟಣ : ಪಟ್ಟಣಕ್ಕೆ ನುಗ್ಗಿದ ಕಾಡುಕೋಣ ದಾಂಧಲೆ – ಇಬ್ಬರಿಗೆ ಸಣ್ಣ ಗಾಯ

The wild buffalo, which was previously only seen in the Malnad region, has now appeared in the plains as well.

ಚನ್ನರಾಯಪಟ್ಟಣ: ಈವರೆಗೂ ಮಲೆನಾಡು ಭಾಗದಲ್ಲಿ ಮಾತ್ರ ಕಾಣಿಸಿಕೊಳ್ಳುತ್ತಿದ್ದ ಕಾಡುಕೋಣ ಇದೀಗ ಬಯಲು ಸೀಮೆಯಲ್ಲೂ ಕಾಣಿಸಿಕೊಂಡಿದೆ. ಇದಕ್ಕೆ ಪುಷ್ಟಿ ಎಂಬಂತೆ ಚನ್ನರಾಯಪಟ್ಟಣದಲ್ಲಿ ಕಾಡಿನಿಂದ ನಾಡಿಗೆ ಬಂದ ಕಾಡುಕೋಣ ದಾಂಧಲೆ ನಡೆಸಿದೆ. ಪಟ್ಟಣದೊಳಗೆಲ್ಲಾ ಓಡಾಡಿ ಆತಂಕ ಸೃಷ್ಟಿಸಿದೆ ಪಟ್ಟಣದ ಕುವೆಂಪುನಗರದಲ್ಲಿ ಈ ಘಟನೆ ನಡೆದಿದ್ದು, ಇಂದು ಮುಂಜಾನೆ ಪಟ್ಟಣದೊಳಗೆ ನುಗ್ಗಿ ಎಲ್ಲೆಂದರಲ್ಲಿ ಓಡಾಡಿದೆ.

ಗಾಬರಿಯಿಂದ ಎಲ್ಲೆಂದರಲ್ಲಿ ಓಡಾಡಿ ಆತಂಕ ಸೃಷ್ಟಿಸಿದೆ. ಒಂದು ಕಾರು ಜಖಂಗೊಂಡಿದ್ದು, ಮಹಿಳೆ ಸೇರಿ ಇಬ್ಬರಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಗೂರನಹಳ್ಳಿ ಮಂಟಿ ಅರಣ್ಯದ ಕಡೆಯಿಂದ ಕಾಡುಕೋಣ ಪಟ್ಟಣದ ಒಳಕ್ಕೆ ಬಂದಿದೆ ಎಂದು ಶಂಕಿಸಲಾಗಿದೆ.

ಕುವೆಂಪುನಗರದ ಜನತಾ ಹೌಸ್‌ನಲ್ಲಿ ಬೀಡುಬಿಟ್ಟಿದ್ದ ಕಾಡುಕೋಣಕ್ಕೆ ಅರವಳಿಕೆ ಚುಚ್ಚುಮದ್ದು ನೀಡಿ ಸೆರೆ ಹಿಡಿಯಲು ಅರಣ್ಯ ಇಲಾಖೆ ಪ್ರಯತ್ನ ನಡೆಸುತ್ತಿದೆ.

error: Content is protected !!