10.4 C
Munich
Home News ಹಾಸನ: ತಣ್ಣೀರುಹಳ್ಳ ಮಠದಲ್ಲಿ ಕಾರ್ತಿಕ ಮಾಸದ ದೀಪೋತ್ಸವ – ಭಕ್ತರ ಸಂಭ್ರಮ

ಹಾಸನ: ತಣ್ಣೀರುಹಳ್ಳ ಮಠದಲ್ಲಿ ಕಾರ್ತಿಕ ಮಾಸದ ದೀಪೋತ್ಸವ – ಭಕ್ತರ ಸಂಭ್ರಮ

The Thanneeruhalla Math celebrated the Deepotsava with devotion by performing special pujas and lighting lamps for the month of Karthika. Hundreds of devotees participated in the lamp lighting ceremony in the Math premises in the evening

ಹಾಸನ: ತಣ್ಣೀರುಹಳ್ಳ ಮಠದ ವತಿಯಿಂದ ಕಾರ್ತಿಕ ಮಾಸದ ವಿಶೇಷ ಪೂಜೆ ಹಾಗೂ ದೀಪ ಹಚ್ಚುವ ಮೂಲಕ ದೀಪೋತ್ಸವ ಭಕ್ತಿಭಾವದಿಂದ ಜರುಗಿತು. ಮಠದ ಆವರಣದಲ್ಲಿ ಸಂಜೆ ವೇಳೆ ದೀಪಾಲಂಕಾರದಲ್ಲಿ ನೂರಾರು ಜನ ಭಕ್ತರು ಶ್ರದ್ಧೆಯಿಂದ ಪಾಲ್ಗೊಂಡರು.

ಕಾರ್ಯಕ್ರಮದಲ್ಲಿ ಹಾಸನ ತಣ್ಣೀರುಹಳ್ಳ ಮಠದ ಮಠಾಧೀಶರಾದ ಶ್ರೀ ವಿಜಯಕುಮಾರ ಸ್ವಾಮೀಜಿ, ಸಂಕ್ಲಾಪುರ ಮಠದ ಮಠಾಧೀಶರಾದ ಶಾಂತವೀರ ಮಲ್ಲೀಕಾರ್ಜುನ ಸ್ವಾಮೀಜಿ, ಅಂಬಲಿ ಮಠದ ಶ್ರೀ ಜಯಕುಮಾರ್ ಸ್ವಾಮೀಜಿ ಭಾಗವಹಿಸಿ ಭಕ್ತರಿಗೆ ಆಶೀರ್ವಚನ ನೀಡಿದರು.

ಮಠದ ವಿದ್ಯಾ ಸಂಸ್ಥೆಯ ಕಾರ್ಯದರ್ಶಿ ಸೋಮಣ್ಣ, ಹಾಸನ ತಾಲ್ಲೂಕು ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾದ ಅಧ್ಯಕ್ಷ ಕಟ್ಟಾಯ ಶಿವಕುಮಾರ್, ಪುರೋಹಿತರಾದ ಜಗದೀಶ್, ಡಿ.ಪಿ. ಪ್ರಕಾಶ್, ಕಾಂತರಾಜ್, ತಣ್ಣೀರುಹಳ್ಳ ಮಠದ ಮ್ಯಾನೇಜರ್ ಶಂಕರ್, ವಿಜಯ್ ಕುಮಾರ್ ಸೇರಿದಂತೆ ಮಠದ ಭಕ್ತರು, ಅಭಿಮಾನಿಗಳು ಮತ್ತು ಹಿತೈಷಿಗಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು.

error: Content is protected !!