ಆಲೂರು: ರಸ್ತೆ ಅಪಘಾತದಲ್ಲಿ ಮೃತಪಟ್ಟ ಯುವಕನ ಅಂಗಾಂಗಗಳನ್ನು ದಾನ ಮಾಡಿ, ಪೋಷಕರು ಮಾನವೀಯತೆ ಮೆರೆದಿದ್ದಾರೆ.
ಕಿತ್ತಗಳಲೆ ಗ್ರಾಮದ ನಾಗರಾಜ್ (33) ಬೈಕ್‌ನಲ್ಲಿ ತೆರಳುವಾಗ ಕೆಲವು ದಿನಗಳ ಹಿಂದೆ ನಡೆದ ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡಿದ್ದರು.
ಹಾಸನದಲ್ಲಿ ಪ್ರಾಥಮಿಕ ಚಿಕಿತ್ಸೆ ಪಡೆದು ನಂತರ ಅವರನ್ನು ಬೆಂಗಳೂರಿನ ಖಾಸಗಿ ಆಸ್ಪತ್ರೆಗೆ ಕರೆದೊಯ್ಯಲಾಯಿತು.
ವೈದ್ಯರ ಪ್ರಯತ್ನಗಳಿದ್ದರೂ, ಮಿದುಳು ಸಂಪೂರ್ಣ ನಿಷ್ಕ್ರಿಯಗೊಂಡಿರುವುದು ದೃಢಪಟ್ಟ ಹಿನ್ನೆಲೆಯಲ್ಲಿ, ನಾಗರಾಜ್ ಪೋಷಕರಾದ ದೊಡ್ಡಯ್ಯ ಹಾಗೂ ನಿಂಗಮ್ಮ ಅವರು ಮಾನವೀಯತೆ ಮೆರೆದಿದ್ದಾರೆ.
ಮಗನ ಸಾವಿನಲ್ಲೂ ಸಾರ್ಥಕತೆ ಕಾಣುವ ಉದ್ದೇಶದಿಂದ ಅವರ ಅಂಗಾಂಗಗಳನ್ನು ದಾನ ಮಾಡಲು ಒಪ್ಪಿಕೊಂಡರು.
ಅಂಗಾಂಗ ದಾನ ಪ್ರಕ್ರಿಯೆ ಯಶಸ್ವಿಯಾಗಿ ಪೂರ್ಣಗೊಂಡಿದ್ದು, ಹಲವು ಜೀವಗಳು ಈಗ ನಾಗರಾಜ್ ಅವರ ಅಂಗಾಗಳ ಮೂಲಕ ಹೊಸ ಬದುಕು ಪಡೆಯಲಿವೆ.
ನಿನ್ನೆ ರಾತ್ರಿ ಕಿತ್ತಗಳಲೆ ಗ್ರಾಮದಲ್ಲಿ ನಾಗರಾಜ್ ಅವರ ಅಂತ್ಯಕ್ರಿಯೆ ನೆರವೇರಿತು.
ಗ್ರಾಮಸ್ಥರು, ಬಂಧು–ಬಳಗ, ಹಾಗೂ ಸ್ಥಳೀಯರ ಪಾಲ್ಗೊಂಡು ಕುಟುಂಬಕ್ಕೆ ಸಾಂತ್ವನ ಸೂಚಿಸಿದರು.
ಪೋಷಕರ ಈ ಮಾನವೀಯ ನಡೆಯನ್ನು ಸ್ಥಳೀಯರು ಹಾಗೂ ಆರೋಗ್ಯ ಇಲಾಖೆಯವರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.










