ಹಾಸನ: ಸ್ಕಾಲರ್ಸ್ ಶಾಲೆಯಲ್ಲಿ ಹೊಸ ವರ್ಷದ ಸಂಭ್ರಮಾಚರಣೆ

The New Year was welcomed with enthusiasm at Scholars International School in Hassan on Thursday.

ಹಾಸನ: ನಗರದ ಸ್ಕಾಲರ್ಸ್‌ ಇಂಟರ್‌ನ್ಯಾಷನಲ್‌‍ ಶಾಲೆಯಲ್ಲಿ ಗುರುವಾರ ಹೊಸ ವರ್ಷವನ್ನು ಉತ್ಸಾಹದಿಂದ ಸ್ವಾಗತಿಸಲಾಯಿತು.

ಶಾಲೆಯ ಆಡಳಿತಾಧಿಕಾರಿ ಡಾ.ಹೆಚ್‌.ಎನ್‌.ಚಂದ್ರಶೇಖರ್‌ ಅವರು ಮಾತನಾಡಿ, ಹೊಸ ವರ್ಷವು ವಿದ್ಯಾರ್ಥಿಗಳಿಗೆ ಆರೋಗ್ಯ, ಯಶಸ್ಸು ಮತ್ತು ಶ್ರೇಷ್ಠತೆಯನ್ನು ಕಲ್ಪಿಸಲಿ. ಸಕಾರಾತ್ಮಕ ಗುರಿಗಳನ್ನು ಹೊಂದಿ ಶಿಸ್ತು ಮತ್ತು ಆತವಿಶ್ವಾಸದೊಂದಿಗೆ ವಿದ್ಯಾರ್ಥಿಗಳು ಯಶಸ್ಸು ಸಾಧಿಸಬೇಕೆಂದು ಶುಭ ಕೋರಿದರು.

ಕಾರ್ಯದರ್ಶಿ ಮಮತಾ ಚಂದ್ರಶೇಖರ್‌ ಅವರು ವಿದ್ಯಾರ್ಥಿಗಳಿಗೆ ಶುಭ ಕೋರಿದರು. ಕೇಕ್‌ ಕತ್ತರಿಸುವ ಮೂಲಕ ಬೋಧಕರು ಹಾಗೂ ವಿದ್ಯಾರ್ಥಿಗಳು, ಬೋಧಕೇತರ ಸಿಬ್ಬಂದಿ ಸಂಭ್ರಮದಲ್ಲಿ ಭಾಗಿಯಾದರು. ಸ್ಕಾಲರ್ಸ್‌ ವರ್ಲ್ಡ್ ಸ್ಕೂಲ್‌ನಲ್ಲೂ ಹೊಸ ವರ್ಷ ಆಚರಿಸಲಾಯಿತು.

The New Year was welcomed with enthusiasm at Scholars International School in Hassan on Thursday.