ಹಾಸನ : ಹಾಸನ ಜಿಲ್ಲೆಯ ಅರಕಲಗೂಡು ತಾಲ್ಲೂಕು ಅರೇಮಾದನಹಳ್ಳಿ ವಿಶ್ವಕರ್ಮ ಜಗದ್ಗುರು ಪೀಠದಲ್ಲಿ ಜ. 28 ರಂದು ಪರಮಪೂಜ್ಯ ಅನಂತಶ್ರೀ ವಿಭೂಷಿತ ಶ್ರೀಮತ್ ಆದಿ ಜಗದ್ಗುರು ಸುಜ್ಞಾನ ಪ್ರಭುಮಹಾಸ್ವಾಮಿ ಭಗವದ್ಪಾದಂಗಳವರ ಜಯಂತಿ ಮಹೋತ್ಸವ ಮತ್ತು ಸಾಮೂಹಿಕ ಉಪನಯನ ಮಹೋತ್ಸವ ಸಮಾರಂಭ ಜರುಗಲಿದೆ.
ಬೆಳಗ್ಗೆ 11 ಕ್ಕೆ ನಡೆಯುವ ಧಾರ್ಮಿಕ ಮಹಾಸಭೆಯ ದಿವ್ಯ ಸಾನಿಧ್ಯವನ್ನು ಯತಿಗಳಾದ ಪರಮಪೂಜ್ಯ ಅನಂತಶ್ರೀ ವಿಭೂಷಿತ ಶಿವಸುಜ್ಞಾನತೀರ್ಥ ಮಹಾಸ್ವಾಮಿಗಳು ವಹಿಸಲಿದ್ದಾರೆ.
ಚನ್ನಗಿರಿ ತಾಲ್ಲೂಕು ಸಾವಿತ್ರಿಪೀಠ, ವಡ್ನಾಳು ಜಗದ್ಗುರುಗಳಾದ ಶ್ರೀ ಶಂಕರಾತ್ಮಾನಂದಸರಸ್ವತಿ ಮಹಾಸ್ವಾಮಿಗಳು, ಹುಬ್ಬಳ್ಳಿ ಜಗದ್ಗುರು ಶಂಕರಾಚಾರ್ಯ ಭಗವದ್ಪಾದ ಅದ್ವೈತ ಪೀಠಂ ಮಠಾಧೀಶರಾದ ಶ್ರೀ ಶಿವಾನಂದ ಭಾರತಿ ಮಹಾಸ್ವಾಮಿಗಳು, ತಮಿಳುನಾಡು ತಿರುನಲ್ವೇಲಿ ರಾಜರಾಜೇಶ್ವರಿ ಪೀಠ ಶ್ರೀಮದ್ ಸರಸಮಯ್ಯ, ಕೋವಾರೀನಾಥರ್ ಅಧೀನಂ ಮಠಾಧೀಶರಾದ ಶ್ರೀ ಸ್ವಾಮಿಬುದ್ಧಾತ್ಮಾನಂದ ಸರಸ್ವತಿಯವರು, ಕೆಸವತ್ತೂರು ವಿರಕ್ತ ಮಠಾಧೀಶರಾದ ಶ್ರಿ ಬಸವರಾಜೇಂದ್ರಸ್ವಾಮಿಗಳು ಮತ್ತು ಬೆಂಗಳೂರು ಶ್ರಿ ಶಂಕರಾನಂದಾಶ್ರಮ ಗೀತಮ್ಮ ರವರು ಸಾನಿದ್ಯ ವಹಿಸಲಿದ್ದಾರೆ.
ಸಂಸದ ಶ್ರೇಯಸ್ ಪಟೇಲ್ ರವರ ನೇತೃತ್ವದಲ್ಲಿ, ಮಾಜಿ ಸಚಿವ ಹಾಗೂ ಶಾಸಕ ಹೆಚ್. ಡಿ. ರೇವಣ್ಣರವರು ಶ್ರಿ ಗುರುಗಳ ಭಾವಚಿತ್ರ ಅನಾವರಣ ಮಾಡಲಿದ್ದಾರೆ. ಶಾಸಕ ಎ. ಮಂಜುರವರು ಸಭೆ ಅಧ್ಯಕ್ಷತೆ ವಹಿಸಲಿದ್ದಾರೆ.
ಮುಖ್ಯ ಅತಿಥಿಗಳಾಗಿ ಮಾಜಿ ಶಾಸಕ ಡಾ. ಎ. ಟಿ. ರಾಮಸ್ವಾಮಿ, ಕರ್ನಾಟಕ ವಿಶ್ವಕರ್ಮ ಸಮುದಾಯಗಳ ಅಭಿವೃದ್ಧಿ ನಿಗಮದ ಅಧ್ಯಕ್ಷ ಪಿ. ಸುಜ್ಞಾನಮೂರ್ತಿಯವರು, ರಾಜ್ಯ ವಿಶ್ವಕರ್ಮ ಮಹಾ ಒಕ್ಕೂಟದ ಗೌರವಾಧ್ಯಕ್ಷ ಕೆ. ಎಸ್. ಪ್ರಭಾಕರ್, ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ಮಾಜಿ ಮಹಾಪೌರರಾದ ರಾಮಕೃಷ್ಣ ಬಡಿಗೇರ್, ದಕ್ಷಿಣ ಕನ್ನಡ ಎಸ್.ಕೆ.ಎಫ್. ಸಮೂಹ ಉದ್ಯಮದ ರಾಮಕೃಷ್ಣ ಆಚಾರ್ಯರವರು ಭಾಗವಹಿಸಲಿದ್ದಾರೆ.
ಉಪನಯನಕ್ಕೆ ಬರುವ ವಟುಗಳು ಜ. 27 ರಂದು ಸಂಜೆ ಶ್ರೀಮಠಕ್ಕೆ ನಿತ್ಯೋಪಯೊಗಿ ವಸ್ತುಗಳನ್ನು ತರಬೇಕು ಎಂದು ಹಾಸನ ಜಿಲ್ಲಾ ವಿಶ್ವಕರ್ಮ ಸಮಾಜದ ಅಧ್ಯಕ್ಷ ಹೆಚ್. ವಿ. ಹರೀಶ್ ರವರು ಪತ್ರಿಕಾ ಪ್ರಕಟಣೆ ಮೂಲಕ ಮನವಿ ಮಾಡಿದ್ದಾರೆ.
ಹೆಚ್ಚಿನ ವಿವರಗಳಿಗೆ ದೂರವಾಣಿ ಸಂಖ್ಯೆ 8105368256 / 9686310884 ಸಂಪರ್ಕಿಸಲು ಕೋರಲಾಗಿದೆ.
The Jayanti Mahotsav and Mass Upanayana Mahotsav of His Holiness Anantashree Vibhushit Srimat Adi Jagadguru Sugnan Prabhu Mahaswami Bhagavadpadam will be held on January 28 at Vishwakarma Jagadguru Peetha in Aremadanahalli, Arakalgud taluk, Hassan district.










