ಹಾಸನ: 77ನೇ ಗಣರಾಜ್ಯೋತ್ಸವದ ಅಂಗವಾಗಿ ನಗರದ ಬೂವನಹಳ್ಳಿ ಬಳಿ ಇರುವ ಶ್ರೀ ರಂಗನಾಥಸ್ವಾಮಿ ವಿದ್ಯಾಸಂಸ್ಥೆಯಲ್ಲಿ ಇಂದು ಗಣರಾಜ್ಯೋತ್ಸವ ದ್ವಜಾರೋಹಣ ಹಾಗೂ ವಿದ್ಯಾರ್ಥಿಗಳಿಂದ ವಿಜ್ಞಾನ ವಸ್ತು ಪ್ರದರ್ಶನ ನಡೆಯಿತು.
ಕಾರ್ಯಕ್ರಮದಲ್ಲಿ ಸ್ವತಃ ಮಕ್ಕಳೇ ನಿರ್ಮಿಸಿ ಪ್ರದರ್ಶನಕ್ಕೆ ಇಟ್ಟಿದ್ದ ವಿವಿಧ ಮಾದರಿಯ ವಿಜ್ಞಾನ ವಸ್ತು ಪ್ರದರ್ಶನಗಳು ಗಮನ ಸೆಳೆದವು. ಜೊತೆಗೆ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು.
ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಹಾಸನ ವೈದ್ಯಕೀಯ ಮಹಾವಿದ್ಯಾಲಯದ ಮನೋರೋಗ ತಜ್ಞೆ ಡಾ. ಸುನೀತಾ ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿ, ಶಾಂತಿಯುತ ಹಾಗೂ ಸದೃಢ ಸಮಾಜ ನಿರ್ಮಾಣದ ಗುರಿ ಮಕ್ಕಳಲ್ಲಿ ಬಾಲ್ಯದಿಂದಲೇ ಆರಂಭವಾಗಬೇಕು, ಮನಸ್ಸಿನ ಮೇಲೆ ವ್ಯತಿರಿಕ್ತ ಪರಿಣಾಮ ಬೀರಬಹುದಾದ ಮನಸ್ಥಿತಿಯನ್ನು ಹತೋಟಿಯಲ್ಲಿಟ್ಟುಕೊಂಡಾಗ ಶಾಂತಿಯುತ ಕುಟುಂಬ, ರಾಜ್ಯ, ದೇಶ ಕಟ್ಟಲು ಸಾಧ್ಯ, ಈ ನಿಟ್ಟಿನಲ್ಲಿ ಬಾಲ್ಯದಿಂದಲೇ ಮಕ್ಕಳಿಗೆ ಒಳ್ಳೆಯ ನಡವಳಿಕೆ ಗುಣಮಟ್ಟದ ಆಹಾರ ಪದ್ಧತಿ ಬಗ್ಗೆ ಪೋಷಕರು ಜಾಗೃತಿ ಮೂಡಿಸುವ ಜೊತೆಗೆ ಉತ್ತಮ ಆರೋಗ್ಯ ಸಲಹೆಗಳನ್ನು ನೀಡಬೇಕು ಎಂದು ಕರೆ ನೀಡಿದರು.
ಕುಟುಂಬದಲ್ಲಿ ಪೋಷಕರು ಏನು ಮಾಡುತ್ತಾರೋ ಮಕ್ಕಳು ಅದನ್ನು ಅಳವಡಿಸಿಕೊಳ್ಳುತ್ತಾರೆ ಎಂಬುದರ ಬಗ್ಗೆ ಎಲ್ಲರಿಗೂ ಅರಿವಿರಬೇಕು, ಮೊಬೈಲ್ ಬಳಕೆ ಹಾಗೂ ಅವರ ನಡವಳಿಕೆ ಬಗ್ಗೆ ನಿಗಾ ವಹಿಸಿದ್ದೇ ಆದಲ್ಲಿ ಆರೋಗ್ಯಕರ ವ್ಯಕ್ತಿತ್ವ ಬೆಳೆಸಲು ಸಾದ್ಯ, ಶುಚಿತ್ವದಿಂದ ಆರೋಗ್ಯ, ಆರೋಗ್ಯದಿಂದ ಸುಂದರ ಸಮಾಜ ಕಟ್ಟಲು ಎಲ್ಲರೂ ಕೈ ಜೋಡಿಸಬೇಕು ಎಂದು ಕರೆ ನೀಡಿದರು.
ಪ್ರತಿಮಾ ಸಾಮಾಜಿಕ, ಸಾಂಸ್ಕೃತಿಕ ಟ್ರಸ್ಟ್ ನ ಸಂಸ್ಥಾಪಕಿ ಹಾಗೂ ಸಾಹಿತಿ ಪ್ರತಿಮಾ ಮಾತನಾಡಿ, ಇತ್ತೀಚಿನ ದಿನಗಳಲ್ಲಿ ಮಕ್ಕಳಿಗೆ ಶಾಲೆಗಳಲ್ಲಿ ತಪ್ಪು ಮಾಡಿದಾಗ ದಂಡಿಸಿದರೆ ಪೊಲೀಸ್ ಠಾಣೆಯ ಮೆಟ್ಟಿಲೇರಿದ ಹಲವು ಉದಾಹರಣೆಗಳಿವೆ ಇಂತಹ ಪ್ರಕರಣಗಳಿಗೆ ಕಡಿವಾಣ ಹಾಕಬೇಕು ಮಕ್ಕಳಿಗೆ ಶಿಕ್ಷೆಯ ಜೊತೆ ಶಿಕ್ಷಣದ ಅಗತ್ಯವಿದೆ ಎಂದರು.
ಮಕ್ಕಳ ಜವಾಬ್ದಾರಿ ತೆಗೆದುಕೊಳ್ಳುವವರ ಪೈಕಿ ಕುಟುಂಬದಲ್ಲಿ ಪೋಷಕರಾದರೆ ಶಾಲೆಯಲ್ಲಿ ಶಿಕ್ಷಕರು, ದಂಡಿಸುವುದು ಮಕ್ಕಳ ಭವಿಷ್ಯ ಉತ್ತಮವಾಗಿರಲಿ ಎಂಬ ಉದ್ದೇಶದಿಂದ ಎಂಬುದನ್ನು ಪೋಷಕರು ಅರಿತುಕೊಂಡಾಗ ಮಕ್ಕಳನ್ನು ಉತ್ತಮ ನಾಗರಿಕರನ್ನಾಗಿ ರೂಪಿಸಲು ಸಾಧ್ಯ. ಪ್ರಜಾಪ್ರಭುತ್ವದ ಅಡಿಪಾಯವಾದ ಈ ಗವರಾಜ್ಯೋತ್ಸವದ ಈ ದಿನ ಅಂಬೇಡ್ಕರ್ ಅವರು ನೀಡಿದ ಸಂವಿಧಾನದ ಹಕ್ಕುಗಳ ರಕ್ಷಣೆಗೆ ಎಲ್ಲರೂ ಮುಂದಾಗಿ, ಮಕ್ಕಳಲ್ಲಿಯೂ ಈ ಬಗ್ಗೆ ಅರಿವು ಮೂಡಿಸೋಣ ಎಂದರು.
ಕಾರ್ಯಕ್ರಮದಲ್ಲಿ ಸಂಸ್ಥೆಯ ಕಾರ್ಯದರ್ಶಿ ಹಾಗೂ ವಕೀಲ ಬಿ.ವಿ ಶ್ರೀನಿವಾಸ್, ಪ್ರಾಂಶುಪಾಲರಾದ ಬಿ.ವಿ ಸುಂದ್ರಮ್ಮ. ನಯನಾ ಮುಖ್ಯ ಶಿಕ್ಷಕ ಪರಮೇಶ್ ಶಿಕ್ಷಕರು, ಸಿಬ್ಬಂದಿಗಳು ಹಾಗೂ ಪೋಷಕರು, ಮಕ್ಕಳು ಇದ್ದರು.
As part of the 77th Republic Day, a Republic Day flag hoisting ceremony and a science exhibition by students were held today at Sri Ranganathaswamy Educational Institution near Buvanahalli in the city.










