ಹಾಸನ: ವಿಧಾನ ಪರಿಷತ್ ಸದಸ್ಯ ಡಾಕ್ಟರ್ ಸೂರಜ್ ರೇವಣ್ಣ ಅವರ ಚಿತ್ರವನ್ನು ಅವರ ಅಭಿಮಾನಿ, ಉದಯಪುರ ಬಾಯ್ಸ್ ತಂಡದ ಶಂಕರ್ ಮುದೇಪುರ ತಮ್ಮ ರಕ್ತದ ಬಳಸಿ ರಚಿಸಿ ಗಮನ ಸೆಳೆದಿದ್ದಾರೆ. ಅಭಿಮಾನಿಗಳ ಈ ಅತಿರೇಕದ ಪ್ರೀತಿ ಮತ್ತು ತ್ಯಾಗವನ್ನು ಕಂಡ ಡಾ. ಸೂರಜ್ ರೇವಣ್ಣ ಅವರು ಮೂಕವಿಸ್ಮಿತರಾಗಿದ್ದು, ಈ ಕುರಿತು ಸಾಮಾಜಿಕ ಜಾಲತಾಣದಲ್ಲಿ ಭಾವನಾತ್ಮಕ ಪೋಸ್ಟ್ವೊಂದನ್ನು ಹಂಚಿಕೊಂಡಿದ್ದಾರೆ.
“ರಕ್ತದಲ್ಲಿ ನನ್ನ ಚಿತ್ರ ಬಿಡಿಸಿ ನೀವು ತೋರಿರುವ ಈ ಅಭಿಮಾನ ಕಂಡು ನಾನು ಸ್ತಬ್ದನಾಗಿದ್ದೇನೆ. ನಿಮ್ಮ ಈ ತ್ಯಾಗ ಮತ್ತು ಪ್ರೀತಿ ಬೆಲೆಕಟ್ಟಲಾಗದ್ದು. ಆದರೆ ನನ್ನ ಮೇಲೆ ನಿಮಗಿರುವ ಪ್ರೀತಿ ನಿಮ್ಮ ರಕ್ತದ ಪ್ರತಿಹನಿಯಷ್ಟೇ ಪವಿತ್ರವಾದದ್ದು. ನಿಮ್ಮ ಆರೋಗ್ಯ ಮತ್ತು ಸುರಕ್ಷತೆ ನನಗೆ ಎಲ್ಲಕ್ಕಿಂತ ಮುಖ್ಯ. ನಿಮ್ಮ ಈ ಅಪ್ರತಿಮ ಅಭಿಮಾನಕ್ಕೆ ನಾನು ಸದಾ ಋಣಿ,” ಎಂದು ಡಾ. ಸೂರಜ್ ರೇವಣ್ಣ ತಮ್ಮ ಪೋಸ್ಟ್ನಲ್ಲಿ ತಿಳಿಸಿದ್ದಾರೆ.
ಅಭಿಮಾನ ವ್ಯಕ್ತಪಡಿಸುವಾಗ ಆರೋಗ್ಯ ಮತ್ತು ಸುರಕ್ಷತೆಗೆ ಹೆಚ್ಚಿನ ಆದ್ಯತೆ ನೀಡಬೇಕೆಂಬ ಸಂದೇಶವನ್ನೂ ಅವರು ಇದೇ ವೇಳೆ ನೀಡಿದ್ದಾರೆ.










