10.4 C
Munich
Home News ಅರಸೀಕೆರೆಯಲ್ಲಿ ಸಾರ್ವಜನಿಕರ ಸಂಚಾರಕ್ಕೆ ಸಂಚಕಾರ ತರುತ್ತಿರುವ ಬಿಡಾಡಿ ದನಗಳು

ಅರಸೀಕೆರೆಯಲ್ಲಿ ಸಾರ್ವಜನಿಕರ ಸಂಚಾರಕ್ಕೆ ಸಂಚಕಾರ ತರುತ್ತಿರುವ ಬಿಡಾಡಿ ದನಗಳು

ಅರಸೀಕೆರೆ : ರಸ್ತೆಯಲ್ಲಿ ಸಂಚರಿಸುವ ವಾಹನ ಸವಾರರಿಗೆ ಕಿರಿಕಿರಿ ನೀಡುವ ಬೀಡಾಡಿ ದನಗಳು ತಮ್ಮ ಪ್ರಾಣಕ್ಕೂ ಸಹ ಸಂಚಕಾರ ತಂದುಕೊಳ್ಳುತ್ತಿರುವ ಸರದಿ ನಗರದಲ್ಲಿ ಮುಂದುವರಿಯುತ್ತಿದ್ದು ಇದಕ್ಕೆ ಪರಿಹಾರ ಏನು ಎಂಬ ಪ್ರಶ್ನೆ ಸಾರ್ವಜನಿಕರಿಗೆ ಕಾಡಿದರೆ ಇತ್ತ ನಗರಸಭೆ ಆಡಳಿತಕ್ಕೂ ತಲೆನೋವಿನ ಸಂಗತಿಯಾಗಿದೆ.

 

ನಗರದ ಮೂಲಕ ಹಾದು ಹೋಗಿರುವ ರಾಷ್ಟ್ರೀಯ ಹೆದ್ದಾರಿ ೨೦೬ ಟಿಎಚ್ ರಸ್ತೆ ಪಿ ಪಿ ವೃತ್ತದ ಸಮೀಪ ಮಂಗಳವಾರ ಬೆಳಗ್ಗೆ ಹೆದ್ದಾರಿಯಲ್ಲಿ ವಿಶ್ರಾಂತಿ ಪಡೆಯುತ್ತಿದ್ದ ಬಿಡಾಡಿ ದನ ರಸ್ತೆಯಲ್ಲಿ ಸಾಗುವ ವಾಹನಕ್ಕೆ ಸಿಕ್ಕಿಹಾಕಿಕೊಂಡ ಪರಿಣಾಮ ತನ್ನ ಕಾಲು ಕಳೆದುಕೊಂಡು ನರಲಾಡುತ್ತಿದ್ದ ದೃಶ್ಯ ಕಂಡವರು ಪಶ್ಚಾತಾಪದಿಂದ ಮರುಗಿದರು.

 

ಬಿಡಾಡಿ ದನ ಹಾಗೂ ವಾಹನ ಸವಾರ ನಡುವೆ ನಿತ್ಯ ನಡೆಯುತ್ತಿರುವ ಕಾದಾಟಕ್ಕೆ ಪರಿಹಾರ ಕಂಡುಕೊಳ್ಳಲು ನಗರಸಭೆ ಕ್ರಮ ಕೈಗೊಳ್ಳದೇ ಇರುವುದು ಸಹಜವಾಗಿಯೇ ಜನತೆಯ ಅಸಮಾಧಾನಕ್ಕೆ ಕಾರಣವಾಗಿರುವುದಲ್ಲದೆ ಅಡ್ಡ ದಿಡ್ಡಿ ರಸ್ತೆಯಲ್ಲಿ ಕಾಣಿಸಿಕೊಳ್ಳುವ ಬೀಡಾಡಿ ದನಗಳು ಅಪಘಾತಕ್ಕೆ ಕಾರಣವಾಗುತ್ತಿದ್ದು ವಾಹನ ಸವಾರರು ಅಷ್ಟೇ ಅಲ್ಲ ತಮ್ಮ ಸಾವು ನೋವಿಗೂ ಮೂಕ ಪ್ರಾಣಿಗಳು. ತುತ್ತಾಗುತ್ತಿರುವುದು ವಿಷಾದ ಸಂಗತಿಯಾಗಿದೆ.

 

 

ನಗರದಲ್ಲಿ ನೂರಾರು ದನಗಳು ಮನಸೋ ಇಚ್ಛೆ ಓಡಾಡಿಕೊಂಡಿವೆ ಇವು ಬಿಡಾಡಿ ದನಗಳಲ್ಲ ಬಹುತೇಕ ಧನಗಳಿಗೆ ಮಾಲೀಕರಿದ್ದಾರೆ ಸಣ್ಣ ಕರುಗಳನ್ನು ತಂದು ರಸ್ತೆಯಲ್ಲಿ ಬಿಟ್ಟು ಬೆಳೆಸಿ ಅವು ದೊಡ್ಡದಾಗಿ ಬೆಳೆದ ಬಳಿಕ ವ್ಯವಸ್ಥಿತವಾಗಿ ಕಸಾಯಿಕಾನೆ ಪಾಲಾಗುತ್ತಿವೆ ಇದನ್ನು ಕಂಡು ಕಾಣದಂತೆ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ನಡೆದುಕೊಳ್ಳುತ್ತಿರುವುದರಿಂದ ಈ ರೀತಿ ಬಿಡಾಡಿ ದನಗಳು ಹೆಚ್ಚಾಗಲು ಕಾರಣವಾಗಿದೆಯಲ್ಲದೆ ರಸ್ತೆಯಲ್ಲಿ ಅಪಘಾತಗಳು ಸಂಭವಿಸಿ ಮನುಷ್ಯ ಹಾಗೂ ಮೂಕ ಪ್ರಾಣಿಗಳ ಸಾವು ನೋವಿಗೆ ಕಾರಣವಾಗುತ್ತಿರುವುದು ನೋವಿನ ಸಂಗತಿ ಎನ್ನುತ್ತಾರೆ ಹಿರಿಯ ವಕೀಲ ಹಿರಣ್ಣಯ್ಯ.

 

ನಗರ ವ್ಯಾಪ್ತಿಯಲ್ಲಿ ಹಾದು ಹೋಗಿರುವ ರಾಜ್ಯ ಹಾಗೂ ರಾಷ್ಟ್ರೀಯ ಹೆದ್ದಾರಿಯಲ್ಲಿ ಬೀಡಾಡಿ ದನಗಳು ಹಾಗೂ ಬೀದಿ ನಾಯಿಗಳು ಅಡ್ಡ ದಿಂಡಿಯಾಗಿ ಓಡಾಡುವುದನ್ನು ತಡೆಯಲು ಒಂದು ಕೋಟಿಗೂ ಅಧಿಕ ವೆಚ್ಚದಲ್ಲಿ ರಸ್ತೆ ವಿಭಜಕದ ಮಧ್ಯೆ ಬ್ಯಾರಿಕೆಟ್ ಗಳನ್ನು ನಗರಸಭೆ ಅಳವಡಿಸಲು ಮುಂದಾಗಿದ್ದು ಈಗಾಗಲೇ ಕಾಮಗಾರಿ ಪ್ರಗತಿಯಲ್ಲಿದೆ ಅಂದುಕೊಂಡಂತೆ ಎಲ್ಲವೂ ಆದರೆ ಬೀದಿ ದನಗಳು ಹಾಗೂ ಬೀದಿ ನಾಯಿಗಳಿಂದ ರಸ್ತೆಯಲ್ಲಿ ಆಗುತ್ತಿರುವ ಅಪಘಾತಗಳನ್ನು ತಪ್ಪಿಸಲು ಸಾಧ್ಯವಾಗಬಹುದೆಂಬ ವಿಶ್ವಾಸ ಇದೆ

error: Content is protected !!