5.8 C
Munich
Home ಕ್ರೈಮ್‌ ಅರಸೀಕೆರೆ: ಪೊಲೀಸರ ಮಿಂಚಿನ ಕಾರ್ಯಾಚರಣೆ, ಚಿನ್ನಾಭರಣಕ್ಕಾಗಿ ಗುತ್ತಿಗೆದಾರನ ಕೊಲೆ ಮಾಡಿದ್ದ ಆರೋಪಿಗಳು 10 ಗಂಟೆಗಳಲ್ಲೇ ಅಂದರ್

ಅರಸೀಕೆರೆ: ಪೊಲೀಸರ ಮಿಂಚಿನ ಕಾರ್ಯಾಚರಣೆ, ಚಿನ್ನಾಭರಣಕ್ಕಾಗಿ ಗುತ್ತಿಗೆದಾರನ ಕೊಲೆ ಮಾಡಿದ್ದ ಆರೋಪಿಗಳು 10 ಗಂಟೆಗಳಲ್ಲೇ ಅಂದರ್

ಹಾಸನ, ಜೂನ್ 01: ಚಿನ್ನಾಭರಣ ದೋಚುವ ಉದ್ದೇಶದಿಂದ ಗುತ್ತಿಗೆದಾರ ವಿಜಯ್‌ಕುಮಾರ್‌ನನ್ನು ಕೊಲೆಗೈದ ಪ್ರಕರಣದಲ್ಲಿ ಅರಸೀಕೆರೆ ನಗರ ಠಾಣೆ ಪೊಲೀಸರು ಕೇವಲ ಹತ್ತು ಗಂಟೆಗಳಲ್ಲಿ ಆರೋಪಿಗಳಾದ ಬಿಕ್ರಂಕುಮಾರ್ (25) ಮತ್ತು ಕಾನೂನು ಸಂಘರ್ಷಕ್ಕೊಳಗಾದ 15 ವರ್ಷದ ಅಪ್ರಾಪ್ತನನ್ನು  ಬೆಂಗಳೂರು ರೈಲ್ವೆ ನಿಲ್ದಾಣದಲ್ಲಿ ಬಂಧಿಸಿದ್ದಾರೆ.

ಬಿಹಾರ ರಾಜ್ಯದ ಪೂರ್ನಿಯಾ ಜಿಲ್ಲೆಯ ರಾಂಪುರ ಗ್ರಾಮದ ಬಿಕ್ರಂಕುಮಾರ್ ಮತ್ತು ರೂಪೋಲಿ ಗ್ರಾಮದ ಬಾಲಕ, ಎರಡು ತಿಂಗಳ ಹಿಂದೆ ಕುಟುಂಬ ಸಮೇತ ಕೆಲಸಕ್ಕಾಗಿ ಅರಸೀಕೆರೆಗೆ ಬಂದಿದ್ದರು.

ಬಿಕ್ರಂಕುಮಾರ್ ಒಂದೂವರೆ ತಿಂಗಳ ಕಾಲ ವಿಜಯ್‌ಕುಮಾರ್‌ನೊಂದಿಗೆ ಕೆಲಸ ಮಾಡಿದ್ದ. ಆದರೆ, ಹಬ್ಬದ ನೆವದಲ್ಲಿ ಗ್ರಾಮಕ್ಕೆ ತೆರಳಿ, ಪತ್ನಿ ಮತ್ತು ಮಗುವನ್ನು ಬಿಟ್ಟು ಬಾಲಕನನ್ನು ಕರೆದುಕೊಂಡು ಬಂದಿದ್ದ. ಹಂಚಿಕೆಯಂತೆ ಚಿನ್ನಾಭರಣ ದೋಚಲು ಗುತ್ತಿಗೆದಾರ ವಿಜಯ್‌ಕುಮಾರ್‌ರನ್ನೇ ಕೊಲೆಗೈದಿದ್ದಾನೆ.

ಪೊಲೀಸರು ಬಂಧಿತರಿಂದ ಒಂದು ಚಿನ್ನದ ಸರ, ಚಿನ್ನದ ಉಂಗುರಗಳು ಮತ್ತು ಒಂದು ಮೋಟಾರ್ ಬೈಕ್ ವಶಪಡಿಸಿಕೊಂಡಿದ್ದಾರೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಹಮದ್ ಸುಜೀತಾ  ತಿಳಿಸಿದ್ದಾರೆ.

ಅರಸೀಕೆರೆ ಪೊಲೀಸರ ಚುರುಕಿನ ಕಾರ್ಯಾಚರಣೆಗೆ ಸಾರ್ವಜನಿಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

error: Content is protected !!