ಅರಕಲಗೂಡು: ಹದಿನಾಲ್ಕು ವರ್ಷಗಳ ಹಿಂದೆ ನಡೆದಿದ್ದ ದರೋಡೆ ಪ್ರಕರಣದ ಆರೋಪಿಗಳಿಗೆ ಇಲ್ಲಿನ 1ನೇ ಹೆಚ್ಚುವರಿ ನ್ಯಾಯಾಲಯ ಕಠಿಣ ಸಜೆ ಮತ್ತು ದಂಡ ವಿಧಿಸಿದೆ.
ಆರೋಪಿಗಳಾದ ಮಂಡ್ಯದ ತಿಮ್ಮಯ್ಯ, ರಾಮನಗರ ಜಿಲ್ಲೆ ಮಾಗಡಿ ತಾಲೂಕು ಅಕ್ಕೂರು ಗ್ರಾಮದ ರಾಮಯ್ಯ, ತಾಲ್ಲುಕಿನ ದೊಡ್ಡಮಗ್ಗೆ ಹೋಬಳಿ ಇಬ್ಬಡಿ ಗ್ರಾಮದ ಪುಟ್ಟರಾಜ ಹಾಗೂ ಸತೀಶ 2012 ರ ಮೇ ತಿಂಗಳಿನಲ್ಲಿ ತಾಲ್ಲೂಕಿನ ಕೊಣನೂರು ಪೋಲೀಸ್ ಠಾಣೆ ವ್ಯಾಪ್ತಿಯ ಕೊರಟಿಕೆರೆ ಗ್ರಾಮದ ಒಂಟಿ ಮನೆಯ ಬಾಗಿಲು ಒಡೆದು ಮನೆಯಲ್ಲಿದ್ದ ಮಹಿಳೆ ಮತ್ತು ಮಕ್ಕಳ ಮೇಲೆ ಹಲ್ಲೆ ನಡೆಸಿ ಚಿನ್ನದ ಒಡವೆ, ಹಣ ಬಟ್ಟೆ, ಮೊಬೈಲ್ ಗಳನ್ನು ದೋಚಿ ಪರಾರಿಯಾಗಿದ್ದರು. ಅಂದಿನ ವೃತ್ತ ನೀರೀಕ್ಷಕರಾದ ಕುಮಾರಸ್ವಾಮಿ ಹಾಗೂ ಎಸ್. ರಾಜು ತನಿಖೆ ನಡೆಸಿ ಆರೋಪಿಗಳನ್ನು ಬಂಧಿಸಿ ನ್ಯಾಯಾಲಯದಲ್ಲಿ ಪ್ರಕರಣ ದಾಖಲಿಸಿದ್ದರು.
ಪ್ರಕರಣದ ವಿಚಾರಣೆ ನಡೆಸಿದ 1ನೇ ಹೆಚ್ಚುವರಿ ನ್ಯಾಯಾಲಯದ ನ್ಯಾಯಾಧೀಶ ಎಂ.ರಘು ಆರೋಪಿಗಳಾದ ಪುಟ್ಟರಾಜು ಮತ್ತು ಸತೀಶ್ ಅವರಿಗೆ ವಿವಿಧ ಸೆಕ್ಷನ್ ಗಳ ಅಡಿಯಲ್ಲಿ 5 ವರ್ಷ 6ತಿಂಗಳ ಕನ ಕಾರಾಗೃಹವಾಸ ಮತ್ತು ರೂ 13 ಸಾವಿರ ದಂಡ ವಿದಿಸಿ ಆದೇಶ ನೀಡಿದ್ದಾರೆ.
ಆರೋಪಿಗಳಲ್ಲಿ ತಿಮ್ಮಯ್ಯ ಎಂಬಾತ ಮೃತಪಟ್ಟಿದ್ದು ಇನ್ನೊಬ್ಬ ಆರೋಪಿ ರಾಮಯ್ಯ ಕಾರಾಗೃಹದಲ್ಲಿದ್ದಾನೆ. ಉಳಿದ ಇಬ್ಬರು ಆರೋಪಿಗಳಿಗೆ ಶಿಕ್ಷೆ ಪ್ರಕಟಿಸಲಾಗಿದೆ. ಸರ್ಕಾರಿ ವಕೀಲ ಬಿ. ಬಿ. ಶಿವಪ್ಪ ಸರ್ಕಾರದ ಪರವಾದ ಮಂಡಿಸಿದ್ದರು.
The 1st Additional Court here has imposed stiff sentences and fines on the accused in a robbery case that took place fourteen years ago.










