ಚನ್ನರಾಯಪಟ್ಟಣ: ಸ್ವಾತಂತ್ರ್ಯ ಸಂಗ್ರಾಮದಲ್ಲಿ ನೆಹರು, ಗಾಂಧೀಜಿ, ಸುಬಾಷ್‌ಚಂದ್ರಬೋಸ್, ಶಾಸ್ತ್ರಿ ಹೀಗೆ ಅನೇಕರ ತ್ಯಾಗದ ಫಲವಾಗಿ ಸ್ವಾತಂತ್ರ್ಯ ಲಭಿಸಿದೆ ಎಂದು ತಾಲ್ಲೂಕು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಜೆ.ಎಂ. ರಾಮಚಂದ್ರು ತಿಳಿಸಿದರು.
ಪಟ್ಟಣದ ಬಿ. ಎಂ. ರಸ್ತೆಯಲ್ಲಿರುವ ರಾಷ್ಟ್ರೀಯ ಕಾಂಗ್ರೆಸ್ ಪಕ್ಷದ ಕಾರ್ಯಾಲಯದಲ್ಲಿ ಸ್ವಾತಂತ್ರ್ಯ ದಿನಾಚರಣೆಯನ್ನು ಕಾರ್ಯಕ್ರಮದಲ್ಲಿ ಧಜಾರೋಹಣ ನೆರವೇರಿಸಿ ಮಾತನಾಡಿ ನಮ್ಮ ಭಾರತ ದೇಶವನ್ನು ಸ್ವಾತಂತ್ರ್ಯಗೊಳಿಸಲಿ ಸಾವಿರಾರು ಜನರ ತ್ಯಾಗ, ಬಲಿದಾನದಿಂದ ಪಡೆದುಕೊಂಡಿದ್ದೇವೆ, ನವಭಾರತ ನಿರ್ಮಾಣಕ್ಕೆ ನಾವೆಲ್ಲೂ ಬೆಂಬಲಿಸಿ ಅಭಿವೃದ್ಧಿಯ ಕಡೆಗೆ ಹೆಚ್ಚು ಗಮನಕೊಡಬೇಕು, ಸ್ವಾತಂತ್ರ್ಯವಾದ ನಂತರ ಭಾರತ ತೀರ ಬಡರಾಷ್ಟ್ರವಾಗಿತ್ತು ತಿನ್ನಲು ಆಹಾರ ಕೂಡ ಇಲ್ಲದೆ ಬೇರೆ ದೇಶದಿಂದ ಆಹಾರವನ್ನು ರಫ್ತು ಮಾಡಿಸಿಕೊಳ್ಳುತ್ತಿದ್ದೆವು ಆದರೆ ಈಗ ಆ ಪರೀಸ್ಥಿತಿ ಇಲ್ಲ ನಾವೇ ಬಡ ರಾಷ್ಟ್ರಗಳಿಗೆ ಆಹಾರ ನೀಡಲುತ್ತಿದ್ದೇವೆ ಇದಲ್ಲವೇ ನಮ್ಮ ನವಭಾರತ ಎಂದರು.
ಇದೇ ಸಂದರ್ಭದಲ್ಲಿ ಮಾಜಿ ಶಾಸಕ ಸಿ. ಎಸ್. ಪುಟ್ಟೇಗೌಡ, ಪಿಎಲ್‌ಡಿ ಬ್ಯಾಂಕ್ ಮಾಜಿ ಅಧ್ಯಕ್ಷ ಎಂ.ಶಂಕರ್, ಮಾಜಿ ಜಿಲ್ಲಾ ಪಂಚಾಯಿತಿ ಸದಸ್ಯ ಮಂಜೇಗೌಡ, ಗ್ಯಾರಂಟಿ ಸಮಿತಿ ಅಧ್ಯಕ್ಷ ಪ್ರಕಾಶ್‌ಗೌಡ, ಯೂತ್ ಕಾಂಗ್ರೆಸ್ ಮುಖಂಡರಾದ ಯುವರಾಜ್, ಮಹೇಶ್‌ಕಬ್ಬಾಳು, ನಾಗೇಶ್, ಶಂಕರ್‌ಬರಗೂರು, ಜಬೀಉಲ್ಲಾಬೇಗ್, ಗುರುಮೂರ್ತಿ, ಪುರಸಭಾ ಸದಸ್ಯೆ ಸುಜಾತ ಮತ್ತಿತರಿದ್ದರು.










