ಚನ್ನರಾಯಪಟ್ಟಣ: ತಾಲ್ಲೂಕಿನ ಹಿರೀಸಾವೆ ಗ್ರಾಮದ ವಿಶ್ವಕರ್ಮ ಸಮಾಜದ ವತಿಯಿಂದ ಕಾಳಿಕಾಂಬ ದೇವಸ್ಥಾನದಲ್ಲಿ ಏರ್ಪಡಿಸಿದ್ದ ವಿಶ್ವಕರ್ಮ ಜನ್ಮದಿನಾಚರಣೆಯಲ್ಲಿ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಅಭಿನಂದಿಸಲಾಯಿತು.
2024–25ನೇ ಸಾಲಿನಲ್ಲಿ ಎಸ್ಎಸ್ಎಲ್ ಸಿ ಮತ್ತು ಪಿಯುಸಿಯಲ್ಲಿ ಉತ್ತಮ ಅಂಕಗಳಿಸಿರುವ ವಿದ್ಯಾರ್ಥಿಗಳಾದ ಎಮ್.ಲಕ್ಷ್ಮಿ, ಕೆ.ಪಿ. ಮನೋಜ್, ಎಚ್.ಪಿ. ಪ್ರೀತಿ, ಕೆ.ನಂದನ್ ಕುಮಾರ್, ಪಿ.ಕಿಶೋರ್, ಎಲ್.ಭ್ರಮ್ಮೇಶ್ ರವರುಗಳನ್ನು ಸಂಘದ ಅಧ್ಯಕ್ಷ ಸಿ.ಪಿ. ನಾಗೇಂದ್ರ ನೇತೃತ್ವದಲ್ಲಿ ಪ್ರತಿಭಾ ಪುರಸ್ಕಾರ ನೀಡಿ ಸನ್ಮಾನಿಸಲಾಯಿತು.
ಬೆಳಗ್ಗೆ ವಿಶ್ವಕರ್ಮರ ಪ್ರತಿಮೆ, ಕಾಳಿಕಾಂಬ ದೇವಿ, ಕಮಟೇಶ್ವರ ದೇವರುಗಳಿಗೆ ಅಭಿಷೇಕ ಹಾಗೂ ವಿಶೇಷ ಪೂಜೆಗಳನ್ನು ಸಲ್ಲಿಸಿದರು. ವಿಶ್ವಕರ್ಮ ಸಮಾಜದ ಮಹಿಳಾ ಘಟಕದ ಅಧ್ಯಕ್ಷೆ ಶೈಲಶ್ರೀ, ಸಂಘದ ಪದಾಧಿಕಾರಿಗಳಾದ ಗಣೇಶ್ ಚಾರ್, ಶ್ರೀದೇವರಾಜು, ಪರಮೇಶ್, ಎ.ಪಿ.ಬಸವರಾಜು, ಮತ್ತು ಎಲ್ಲ ಘಟಕದ ಪದಾಧಿಕಾರಿಗಳು ಕಾರ್ಯಕ್ರಮದ ನೇತೃತ್ವ ವಹಿಸಿದ್ದರು.
ಹಿರೀಸಾವೆ ಸೆಸ್ಕ್ ಶಾಖಾಧಿಕಾರಿ ವೆಂಕಟೇಶ್, ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಎಚ್.ಜೆ. ಮಹೇಶ್, ನಿರ್ದೇಶಕ ಬೋರೇಗೌಡ, ಜನಪ್ರತಿನಿಧಿಗಳಾದ ಎಚ್.ಕೆ. ವೆಂಕಟೇಶ್, ಕರವೇ ಮಹೇಶ್, ಲೋಕೇಶ್, ರೊಡ್ ಮಂಜುನಾಥ್, ಎನ್ಎಚ್ಆರ್ ಐಸಿ ರಾಶಿಗೌಡ, ಕರವೇ ಹೋಬಳಿ ಘಟಕದ ಅಧ್ಯಕ್ಷ ಶಿವರಾಜು, ಮತ್ತಿತರರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.










