ಹಾಸನ: ಒಕ್ಕಲಿಗ ಸಮುದಾಯ ರಕ್ಷಣೆ ಹಾಗೂ ಧರ್ಮ ಪ್ರಸಾರಕ್ಕೆ ಮಹಾಸಭಾ ಬದ್ಧ: ಸಿದ್ಧರಾಮ ಚೈತನ್ಯ ಸ್ವಾಮೀಜಿ

Sri Siddarama Chaitanya Swamiji, the head of the Kunigal Areshankar Mutt, said that the Vokkaliga Dharma Mahasabha will work towards protecting the Vokkaliga community and spreading the Vokkaliga religion across the state.

ಹಾಸನ: ಒಕ್ಕಲಿಗ ಸಮುದಾಯದ ರಕ್ಷಣೆ ಹಾಗೂ ಒಕ್ಕಲಿಗ ಧರ್ಮವನ್ನು ರಾಜ್ಯಾದ್ಯಂತ ಪಸರಿಸುವ ನಿಟ್ಟಿನಲ್ಲಿ ಒಕ್ಕಲಿಗ ಧರ್ಮ ಮಹಾಸಭಾ ಕೆಲಸ ಮಾಡಲಿದೆ ಎಂದು ಕುಣಿಗಲ್ ಅರೇಶಂಕರ್ ಮಠದ ಮಠಾಧೀಶರಾದ ಶ್ರೀ ಸಿದ್ಧರಾಮ ಚೈತನ್ಯ ಸ್ವಾಮೀಜಿ ಹೇಳಿದರು.

ನಗರದ ಹೊಸ ಹೌಸಿಂಗ್ ಬೋರ್ಡ್ ಕಾಲೋನಿಯಲ್ಲಿ ಇಂದು ಒಕ್ಕಲಿಗ ಧರ್ಮ ಮಹಾಸಭಾದ ಹಾಸನ ಜಿಲ್ಲಾ ಕಚೇರಿ ಉದ್ಘಾಟನೆ ಬಳಿಕ ಮಾತನಾಡಿದ ಅವರು, ಒಕ್ಕಲಿಗ ಧರ್ಮ ರಾಜ್ಯದಲ್ಲಿ ಭದ್ರವಾದ ತಳಹದಿ ಮೇಲೆ ಸ್ಥಾಪಿತವಾಗುತ್ತಿದೆ ಗಟ್ಟಿಯಾಗಿ ಸಂಘಟಿತ ವಾಗುತ್ತಿರುವ ಎಲ್ಲಾ ಸಮುದಾಯದ ಮುಖಂಡರಿಗೆ ಈ ಮೂಲಕ ಧನ್ಯವಾದ ತಿಳಿಸುವುದಾಗಿ ಹೇಳಿದರು.

ಒಕ್ಕಲಿಗ ಶಿವ ಯೋಗಿ ಸಿದ್ಧರಾಮ ಸ್ವಾಮಿಗಳ ಮಾರ್ಗದರ್ಶನದಲ್ಲಿ ಒಕ್ಕಲಿಗ ಧರ್ಮದ ಅನುಷ್ಠಾನವನ್ನು ಬಹಳ ಮುತುವರ್ಜಿ ವಹಿಸಿ ಮಾಡಲಾಗುತ್ತಿದೆ. ಒಕ್ಕಲಿಗ ಮುದ್ದಣ್ಣ, ಕುವೆಂಪು ಅವರ ಹಾದಿಯಲ್ಲಿ ಒಕ್ಕಲಿಗ ಧರ್ಮ ಮಹಾಸಭಾ ಇನ್ನಷ್ಟು ಕಟ್ಟಿಕೊಳ್ಳಲಿ ಎಂದು ಶುಭ ಹಾರೈಸಿದರು.

ಒಕ್ಕಲಿಗ ಸಮುದಾಯದ ಪೂಜ್ಯ ಗುರುಗಳು ಸಾಹಿತಿಗಳು ಹಿರಿಯ ಮುತ್ಸದ್ದಿಗಳ ತತ್ವ ಸಿದ್ಧಾಂತಗಳನ್ನು ಸಮಾಜಕ್ಕೆ ಪಸರಿಸುವ ಮೂಲಕ ಸಮಾಜದಲ್ಲಿ ಧರ್ಮ ಬಿತ್ತುವ ಕೆಲಸದಲ್ಲಿ ಹಾಸನ ಜಿಲ್ಲೆ ಮುಂಚೂಣಿಯಲ್ಲಿದೆ ಎಂದರು.

ಇಂದು ಒಕ್ಕಲಿಗ ಧರ್ಮ ಮಹಾಸಭಾ ದ ಹಾಸನ ಜಿಲ್ಲಾ ಕಚೇರಿ ತೆರೆಯಲಾಗಿದ್ದು ಮುಂದಿನ ದಿನಗಳಲ್ಲಿ ಎಲ್ಲಾ ತಾಲೂಕು ಘಟಕಗಳ ಸಮ್ಮುಖದಲ್ಲಿ ಹಾಸನದಲ್ಲಿ ಒಂದು ರಾಜ್ಯಮಟ್ಟದ ಸಮಾವೇಶ ಮಾಡುವ ಮೂಲಕ ಮಾದರಿಯಾಗೋಣ. ಇದಕ್ಕೆ ಎಲ್ಲರ ಸಹಕಾರ ಅಗತ್ಯ ಎಂದರು.

ಕಾರ್ಯಕ್ರಮದಲ್ಲಿ ಒಕ್ಕಲಿಗ ಧರ್ಮ ಮಹಾಸಭಾದ ಜಿಲ್ಲಾಧ್ಯಕ್ಷ ನಾರಿಹಳ್ಳಿ ರಮೇಶ್, ಮಹಿಳಾ ಘಟಕದ ಜಿಲ್ಲಾಧ್ಯಕ್ಷೆ ಭಾರತಿ, ಯುವ ಘಟಕದ ಜಿಲ್ಲಾಧ್ಯಕ್ಷ ವರುಣ್ ಗೌಡ ಸೇರಿದಂತೆ ಇತರರಿದ್ದರು.

Sri Siddarama Chaitanya Swamiji, the head of the Kunigal Areshankar Mutt, said that the Vokkaliga Dharma Mahasabha will work towards protecting the Vokkaliga community and spreading the Vokkaliga religion across the state.