ಬೇಲೂರು: ತಾಲೂಕು ಪತ್ರಕರ್ತರ ಸಂಘದ ಅಧ್ಯಕ್ಷರಾಗಿ ಬಿ.ಬಿ.ಶಿವರಾಜ್ ಆಯ್ಕೆ

ಬೇಲೂರು: ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಚುನಾವಣೆಯನ್ನು ಯಶಸ್ವಿಯಾಗಿ ನಡೆಸಲಾಗಿದ್ದು, ನೂತನ ಪದಾಧಿಕಾರಿಗಳು ಆಯ್ಕೆಯಾಗಿದ್ದಾರೆ.

ಅಧ್ಯಕ್ಷರಾಗಿ ಬಿ.ಬಿ.ಶಿವರಾಜು, ಎಂ.ಸಿ.ಕುಮಾರ್ ಹಾಗೂ ಆರ್.ವೆಂಕಟೇಶ್ ಆಯ್ಕೆಯಾಗಿದ್ದಾರೆ. ಪ್ರಧಾನ ಕಾರ್ಯದರ್ಶಿಯಾಗಿ ಬಿ.ಎಲ್.ಲಕ್ಷ್ಮಣ್, ಖಜಾಂಚಿಯಾಗಿ ಲೋಹಿತ್ ಬಿ.ಆರ್., ಕಾರ್ಯದರ್ಶಿಗಳಾಗಿ ಗಣೇಶ್ ಬಿ.ಎನ್. ಮತ್ತು ದಿನೇಶ್ ಬೆಳ್ಳಾವರ ಆಯ್ಕೆಯಾದರು.

ಕಾರ್ಯಕಾರಿ ಸಮಿತಿ ಸದಸ್ಯರಾಗಿ ಇಬ್ಬೀಡು ರಮೇಶ್, ರವಿಹೊಳ್ಳ, ಬಿ.ಎಸ್.ಆರಾಧ್ಯ, ಜಗದೀಶ್ ಬಿ.ಎಂ., ವಿಜಯಕುಮಾರ್, ಚಂದ್ರಶೇಖರ್ ಹಾಗೂ ತೇಜಸ್ ಆಯ್ಕೆಯಾಗಿದ್ದಾರೆ.

ಬೇಲೂರು ತಾಲೂಕು ಪತ್ರಕರ್ತರ ಸಂಘದ ಪದಾಧಿಕಾರಿಗಳಾಗಿ ಆಯ್ಕೆಯಾದ ಪತ್ರಕರ್ತರು ಬಸವೇಶ್ವರ ಪ್ರತಿಮೆಗೆ ಮಾಲಾಪಣೆ ಮಾಡಿದರು

ನೂತನವಾಗಿ ಆಯ್ಕೆಯಾದ ಎಲ್ಲಾ ಪದಾಧಿಕಾರಿಗಳಿಗೆ ಸಂಘದ ಸದಸ್ಯರು ಹಾಗೂ ಪತ್ರಕರ್ತ ವಲಯದಿಂದ ಹಾರ್ದಿಕ ಅಭಿನಂದನೆಗಳು ವ್ಯಕ್ತವಾಗಿವೆ.

ಚುನಾವಣೆಯನ್ನು ಕೆ.ಜಿ.ಸುರೇಶ್ ಹಾಗೂ ಶರಣ್ ಜಿ. ಚುನಾವಣಾಧಿಕಾರಿಗಳಾಗಿ ಯಶಸ್ವಿಯಾಗಿ ನಡೆಸಿಕೊಟ್ಟರು.