ಹೊಳೆನರಸೀಪುರ: ತಾಲೂಕು ಪತ್ರಕರ್ತರ ಸಂಘದ ಚುನಾವಣೆಯನ್ನು ಯಶಸ್ವಿಯಾಗಿ ನಡೆಸಲಾಗಿದ್ದು, ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಗಿದೆ.

ಚುನಾವಣೆಯಲ್ಲಿ ವೆಂಕಟೇಶ್. ಎಚ್.ಬಿ. ಅವರು ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ. ಉಪಾಧ್ಯಕ್ಷರಾಗಿ ವಸಂತಯ್ಯ. ಡಿ.ಕೆ., ಪ್ರಧಾನ ಕಾರ್ಯದರ್ಶಿಯಾಗಿ ರಾಮಕೃಷ್ಣ, ಖಜಾಂಚಿಯಾಗಿ ಚಂದ್ರಶೇಖರ್. ಎಲ್., ಹಾಗೂ ಕಾರ್ಯದರ್ಶಿಯಾಗಿ ಅಭಿಲಾಷ್. ಎಚ್.ಡಿ. ಆಯ್ಕೆಯಾಗಿದ್ದಾರೆ.
ಕಾರ್ಯಕಾರಿ ಸಮಿತಿ ಸದಸ್ಯರಾಗಿ ಭಾನುಮತಿ, ಚಂದ್ರು ಕೆ.ಎಸ್., ಧನಂಜಯ್, ವಿಶ್ವನಾಥ್. ಎಸ್., ಮತ್ತು ಸುದರ್ಶನ್. ಎಚ್.ಟಿ. ಅವರು ಆಯ್ಕೆಯಾಗಿದ್ದಾರೆ.
ಚುನಾವಣೆಯನ್ನು ಚುನಾವಣಾಧಿಕಾರಿಗಳಾದ ಹರೀಶ್. ಕೆ.ಎಂ. ಮತ್ತು ನಾಗರಾಜ್. ಎಚ್.ಎ. ಅವರ ನೇತೃತ್ವದಲ್ಲಿ ಸುಗಮವಾಗಿ ನಡೆಸಲಾಯಿತು.
ನೂತನವಾಗಿ ಆಯ್ಕೆಯಾದ ಎಲ್ಲಾ ಪದಾಧಿಕಾರಿಗಳಿಗೆ ಸಂಘದ ಸದಸ್ಯರು ಹಾಗೂ ಹಿರಿಯ ಪತ್ರಕರ್ತರು ಹಾರ್ದಿಕ ಅಭಿನಂದನೆಗಳನ್ನು ತಿಳಿಸಿದರು.










