10.6 C
Munich
Home News ಬೆಂಗಳೂರಿನಲ್ಲಿ ಯುವತಿ ಕೊಲೆ ಪ್ರಕರಣ: ಸಕಲೇಶಪುರದಲ್ಲಿ ಆರೋಪಿ ಶರತ್ ಅಲಿಯಾಸ್ ಡಿಜೆ ಬಂಧನ

ಬೆಂಗಳೂರಿನಲ್ಲಿ ಯುವತಿ ಕೊಲೆ ಪ್ರಕರಣ: ಸಕಲೇಶಪುರದಲ್ಲಿ ಆರೋಪಿ ಶರತ್ ಅಲಿಯಾಸ್ ಡಿಜೆ ಬಂಧನ

ಸಕಲೇಶಪುರ ಮೂಲದ ಶರತ್ ಅಲಿಯಾಸ್ ಡಿಜೆ ಅನುಷಾ ಕೊಲೆ ಪ್ರಕರಣದಲ್ಲಿ ಬಂಧನ
ಬೆಂಗಳೂರಿನಲ್ಲಿ ಯುವತಿ ಅನುಷಾ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧಿತನಾದ ಸಕಲೇಶಪುರ ಮೂಲದ ಶರತ್ ಅಲಿಯಾಸ್ ಡಿಜೆ.

ಬೆಂಗಳೂರಿನ ಶೇಷಾದ್ರಿಪುರಂನಲ್ಲಿ ಯುವತಿ ಅನುಷಾ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಕಲೇಶಪುರ ಮೂಲದ ಶರತ್ ಅಲಿಯಾಸ್ ಡಿಜೆಯನ್ನು ಪೊಲೀಸರು ಬಂಧಿಸಿದ್ದಾರೆ.

ಸಕಲೇಶಪುರ, ಜೂನ್ 16(www.kannadapost.com): ಬೆಂಗಳೂರಿನಲ್ಲಿ ಯುವತಿಯನ್ನು ಕೊಲೆ ಮಾಡಿದ ಆರೋಪದ ಮೇಲೆ ಸಕಲೇಶಪುರ ಮೂಲದ ಯುವಕನನ್ನು ಪೊಲೀಸರು ಬಂಧಿಸಿರುವ ಘಟನೆ ಬೆಳಕಿಗೆ ಬಂದಿದೆ.

ಸಕಲೇಶಪುರ ಪಟ್ಟಣದ ಅಗ್ರಹಾರ ಬಡಾವಣೆಯ ನಿವಾಸಿ ಶರತ್ ಅಲಿಯಾಸ್ ಡಿಜೆ ಎಂಬಾತ, ಸಕಲೇಶಪುರದ ಎನ್.ಡಿ. ಅನುಷಾ ಎಂಬ ಯುವತಿಯೊಂದಿಗೆ ಲಿವ್-ಇನ್ ರಿಲೇಶನ್‌ಶಿಪ್‌ನಲ್ಲಿ ಇದ್ದನೆಂದು ತಿಳಿದುಬಂದಿದೆ. ಈ ಸಂಬಂಧಕ್ಕಾಗಿ ಬೆಂಗಳೂರಿನ ಶೇಷಾದ್ರಿಪುರಂ ಪ್ರದೇಶದಲ್ಲಿ ಬಾಡಿಗೆ ಮನೆಯನ್ನು ಪಡೆದು ಇಬ್ಬರೂ ವಾಸಿಸುತ್ತಿದ್ದರು ಎನ್ನಲಾಗಿದೆ.

ಪೊಲೀಸರ ಮಾಹಿತಿ ಪ್ರಕಾರ, ಜೂನ್ 13ರ ರಾತ್ರಿ ಬೆಂಗಳೂರಿನ ಶೇಷಾದ್ರಿಪುರಂನ ಬಾಡಿಗೆ ಮನೆಯಲ್ಲಿ ಅನುಷಾಳನ್ನು ಶರತ್ ಕೊಲೆ ಮಾಡಿದ್ದಾನೆ ಎಂಬ ಆರೋಪ ಕೇಳಿಬಂದಿದೆ. ಘಟನೆ ಬಳಿಕ ಪೊಲೀಸರ ದಿಕ್ಕು ತಪ್ಪಿಸುವ ಉದ್ದೇಶದಿಂದ ಆರೋಪಿ ಸಕಲೇಶಪುರಕ್ಕೆ ಬಂದು ಯಾವುದೇ ಅನುಮಾನ ಮೂಡದಂತೆ ಓಡಾಡಿಕೊಂಡಿದ್ದ ಎನ್ನಲಾಗಿದೆ.

ಪ್ರಕರಣದ ಸುಳಿವು ಪತ್ತೆ ಹಚ್ಚಿದ ಬೆಂಗಳೂರಿನ ಶೇಷಾದ್ರಿಪುರಂ ಪೊಲೀಸ್ ಠಾಣೆಯ ಅಧಿಕಾರಿಗಳು, ಸಕಲೇಶಪುರ ನಗರ ಪೊಲೀಸ್ ಠಾಣೆಯ ಪೊಲೀಸ್ ಇನ್ಸ್‌ಪೆಕ್ಟರ್ ವಿ.ಸಿ. ವನರಾಜು ಹಾಗೂ ಸಿಬ್ಬಂದಿಗಳಾದ ಪೃಥ್ವಿ ಮತ್ತು ಮಧು ಅವರ ಸಹಕಾರದೊಂದಿಗೆ ಕಾರ್ಯಾಚರಣೆ ನಡೆಸಿದರು.

ತಡರಾತ್ರಿ ಕಾರ್ಯಾಚರಣೆಯಲ್ಲಿ ಆರೋಪಿಯನ್ನು ಬಂಧಿಸಿ ವಶಕ್ಕೆ ಪಡೆಯಲಾಗಿದೆ. ಬಳಿಕ ಹೆಚ್ಚಿನ ತನಿಖೆಗಾಗಿ ಶೇಷಾದ್ರಿಪುರಂ ಪೊಲೀಸರಿಗೆ ಒಪ್ಪಿಸಲಾಗಿದೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ಕೊಲೆಯ ನಿಖರ ಕಾರಣ ಹಾಗೂ ಇತರ ಮಾಹಿತಿ ಕುರಿತು ಪೊಲೀಸರು ತನಿಖೆ ಮುಂದುವರಿಸಿದ್ದಾರೆ.

error: Content is protected !!