ಹಾಸನ: ಮುಂದಿನ ಪೀಳಿಗೆ ಆರೋಗ್ಯವಾಗಿರಲು ಪರಿಸರದ ಅತ್ಯವಶ್ಯಕವಾಗಿದ್ದು, ಪರಿಸರ ಸಂರಕ್ಷಣೆಗೆ ಎಲ್ಲರೂ ಆದ್ಯತೆ ನೀಡಬೇಕು ಎಂದು ರೋಟರಿ ಜಿಲ್ಲಾ ಗವರ್ನರ್ ಕೆ. ಪಾಲಾಕ್ಷ ಹೇಳಿದರು.
ನಗರದ ವಿಜಯನಗರ ಟೈಮ್ಸ್ ಅಂತಾರಾಷ್ಟ್ರೀಯ ಶಾಲೆಯಲ್ಲಿ ರೋಟರಿ ಕ್ಲಬ್ ಆಫ್ ಹಾಸನ ರಾಯಲ್, ಬಟ್ಟೆ ಅಂಗಡಿ, ಅಕ್ಷರ ಅಕಾಡೆಮಿ, ಅಕ್ಷರ ಬುಕ್ ಹೌಸ್ ವತಿಯಿಂದ ಹಮಿಕೊಂಡಿದ್ದ 2025-26ನೇ ಸಾಲಿನ ಹತ್ತು ಸಾವಿರ ಸಸಿ ವಿತರಣೆ ಟೈಮ್ಸ್ ಹಸಿರ ಸಿರಿ ಸಸ್ಯೋತ್ಸವ ಉದ್ಘಾಟಿಸಿ ಮಾತನಾಡಿದರು.
ಭೂ ಮಂಡಲದೊಳಗೆ ಜೀವಿಸುವ ಪ್ರತಿಯೊಂದು ಜೀವಿಗೂ ಪರಿಸರದ ಅವಶ್ಯಕತೆ ಇದ್ದು, ಪರಿಸರವನ್ನು ಅತ್ಯಂತ ಕಾಳಜಿಯಿಂದ ನೋಡಿಕೊಳ್ಳಬೇಕಿದೆ ಎಂದರು.
ಸಂಸ್ಥೆಯ ಕಾರ್ಯದರ್ಶಿ ಬಿ.ಕೆ. ಗಂಗಾಧರ್ ಮಾತನಾಡಿ, ಸಸಿ ನೆಡುವುದು ಹಾಗೂ ಪೋಷಿಸುವುದು ಕೇವಲ ಸರ್ಕಾರ ಹಾಗೂ ಅರಣ್ಯ ಇಲಾಖೆಯ ಕೆಲಸ ಎಂದು ಭಾವಿಸದೆ ಪ್ರತಿಯೊಬ್ಬ ಜನಸಾಮಾನ್ಯರು ಪರಿಸರವನ್ನು ಉಳಿಸಿ ಬೆಳೆಸುವ ಕೆಲಸದಲ್ಲಿ ತೊಡಗಬೇಕು. ನಾವುಗಳು ಮಕ್ಕಳಿಗೆ ಚಿಕ್ಕ ವಯಸ್ಸಿನಿಂದಲೇ ಸಸಿ ಬೆಳೆಸುವುದರ ಜೊತೆಗೆ ಪರಿಸರದ ಪ್ರಾಮುಖ್ಯತೆಯ ಬಗ್ಗೆ ತಿಳಿಸಿ ಕೊಡಬೇಕಾಗಿದೆ ಎಂದರು. ಕಾರ್ಯಕ್ರಮದ ನಂತರ ಶಾಲೆಯ ವಿದ್ಯಾರ್ಥಿಗಳಿಗೆ ಹಾಗೂ ಪೋಷಕರಿಗೆ ಸಸಿಗಳನ್ನು ವಿತರಣೆ ಮಾಡಲಾಯಿತು
.ರೋಟರಿ ಜೋನ್ 9ರ ಸಹಾಯಕ ಗವರ್ನರ್ ಮಂಜುನಾಥ್, ವಲಯ ಸೇನಾನಿ ಮಮತ ಪಾಟೀಲ್, ರೋಟರಿ ಕ್ಲಬ್ ಆಫ್ ಹಾಸನ ರಾಯಲ್‌ನ ಕಾರ್ಯದರ್ಶಿ ಪಿ. ರವಿ ಕುಮಾರ್, ಖಜಾಂಚಿ ಎಚ್.ಕೆ.. ದಿಲೀಪ್ ಕುಮಾರ್, ಮಾಜಿ ಅಧ್ಯಕ್ಷ ಸಚಿನ್, ಮಾಜಿ ಕಾರ್ಯದರ್ಶಿ ಪುನೀತ್, ಸದಸ್ಯರಾದ ಎಸ್. ಯೋಗೇಶ್, ಡಾ. ಬಿ. ವಿಕ್ರಂ, ಡಾ. ಎಂ.ಡಿ. ನಿತ್ಯಾನಂದ, ಪ್ರಸಾದ್, ಗಿರೀಶ್, ಅನಿಲ್ ರೈ, ನವೀನ್, ಚಂದನ್ ಇತರರಿದ್ದರು.










