10.3 C
Munich
Home News ಹಾಸನದಲ್ಲಿ ನೆರವೇರಿದ ರೋಟರಿ ಪದಾಧಿಕಾರಿಗಳ ಪದಗ್ರಹಣ

ಹಾಸನದಲ್ಲಿ ನೆರವೇರಿದ ರೋಟರಿ ಪದಾಧಿಕಾರಿಗಳ ಪದಗ್ರಹಣ

ಹಾಸನ: ಸ್ವಸ್ಥ ಸಮಾಜ ಹಾಗೂ ಪ್ರತಿಯೊಬ್ಬರಲ್ಲೂ ಸ್ನೇಹ ಮನೋಭಾವ ಮೂಡಿಸುವ ಕಾರ್ಯದಲ್ಲಿ ರೋಟರಿ ಪಾತ್ರ ದೊಡ್ಡದು ಎಂದು ಜಿಲ್ಲಾ ರೋಟರಿ ಸಂಸ್ಥಾಪನ ಸಮಿತಿ ನಿರ್ದೇಶಕ ಹಾಗೂ ರೋಟರಿ ಮಾಜಿ ಜಲ್ಲಾ ಗವರ್ನರ್ ಡಿ.ಎಸ್. ರವಿ ಅಭಿಪ್ರಾಯಪಟ್ಟರು.

ನಗರದ ಖಾಸಗಿ ಸಮುದಾಯ ಭವನದಲ್ಲಿ ರೋಟರಿ ಕ್ಲಬ್ ಆಫ್ ಹಾಸನ ರಾಯಲ್ ವತಿಯಿಂದ ನಡೆದ ೨೦೨೫-೨೬ನೇ ಸಾಲಿನ ನೂತನ ಪದಾಧಿಕಾರಿಗಳ ಪದಗ್ರಹಣ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ರೋಟರಿ ಸಂಸ್ಥೆಯು ಒಂದು ಅಂತರಾಷ್ರ್ಟೀಯ ಸಂಸ್ಥೆಯಾಗಿದ್ದು, ಪ್ರತಿಯೊಬ್ಬರಲ್ಲೂ ಸ್ನೇಹ ಮನೋಭಾವನೆ ಮೂಡಿಸುವ ಕಾರ್ಯದಲ್ಲಿ ರೋಟರಿ ಸಂಸ್ಥೆ ತೊಡಗಿಕೊಂಡು ಬರುತ್ತಿದೆ. ಜೊತೆಗೆ ಇಡೀ ವಿಶ್ವದ ತಲೆ ನೋವಾಗಿದ್ದ ಪೋಲಿಯೋ ಕಾಯಿಲೆಯನ್ನು ನಿರ್ಮೂಲನೆ ಮಾಡುವಲ್ಲಿ ರೋಟರಿಯ ಪಾತ್ರ ಅತೀ ದೊಡ್ಡದು ಎಂದರು.

ರೋಟರಿ ಜೋನ್ ೯ರ ವಲಯ ಸೇನಾನಿ ಮಮತ ಪಾಟೀಲ್ ಮಾತನಾಡಿ, ರೋಟರಿ ಸಂಸ್ಥೆಯಲ್ಲಿ ಹಲವು ಕ್ಲಬ್‌ಗಳು ಇದ್ದು, ರೋಟರಿ ರಾಯಲ್ ಸಂಸ್ಥೆ ಯುವಕರನ್ನೇ ಹೆಚ್ಚು ಒಳಗೊಂಡಿರುವ ಸಂಸ್ಥೆಯಾಗಿದೆ. ಹಾಗಾಗಿ ಈ ಕ್ಲಬ್ ನ ಮೇಲೆ ನಿರೀಕ್ಷೆ ಹೆಚ್ಚಾಗಿದ್ದು, ಒಳ್ಳೆಯ ಕೆಲಸ ಮಾಡುವ ಮೂಲಕ ಸಮಾಜಕ್ಕೆ ಮಾದರಿಯಾಗಬೇಕು ಎಂದರು.

ಅಧಿಕಾರ ಸ್ವೀಕರಿಸಿ ಮಾತನಾಡಿದ ಟೈಮ್ಸ್ ಬಿ.ಕೆ. ಗಂಗಾಧರ್ ಮಾತನಾಡಿ, ಸಮಾಜ ನಮಗೆ ಒಳಿತ ಮಾಡಿದಾಗ ಪುನಃ ಸಮಾಜಕ್ಕೆ ನಾವೇನಾದರೂ ಕೊಡುಗೆ ನೀಡಬೇಕಾಗಿರುವುದು ಎಲ್ಲರ ಹೊಣೆ. ಈ ನಿಟ್ಟಿನಲ್ಲಿ ಒಂದು ಸಣ್ಣ ಸಾಮಾನ್ಯರ ಕುಟುಂಬದಿAದ ಬಂದು ಸಮಾಜದಲ್ಲಿ ಒಂದು ಸ್ಥಾನಮಾನ ಸಿಕ್ಕದ ಮೇಲೆ ಸಮಾಜಕ್ಕೆ ಏನನ್ನಾದರೂ ಸೇವೆ ಮಾಡಬೇಕು ಎಂಬ ನಿಟ್ಟಿನಲ್ಲಿ ಅಂತರಾಷ್ರ್ಟೀಯ ಸಂಘಟನೆಯಾಗಿರುವ ರೋಟರಿ ಸಂಸ್ಥೆಯ ಮೂಲಕ ಒಂದಿಷ್ಟು ಕೆಲಸ ಮಾಡುವ ಹಂಬಲ ಇಟ್ಟುಕೊಳ್ಳಲಾಗಿದೆ ಎಂದು ಹೇಳಿದರು.

ಅಧಿಕಾರ ಹಸ್ತಾಂತರ:

ಇದೇ ವೇಳೆ ಕಾರ್ಯಕ್ರಮದಲ್ಲಿ ಈ ಹಿಂದೆ ೨೦೨೪-೨೫ನೇ ಸಾಲಿಗೆ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದ ಯು.ವಿ. ಸಚ್ಚಿನ್ ಅವರು ೨೦೨೫-೨೬ನೇ ಸಾಲಿನ ನೂತನ ಅಧ್ಯಕ್ಷರಾಗಿ ಆಯ್ಕೆಯಾಗಿದ್ದ ಟೈಮ್ಸ್ ಗಂಗಾಧರ್ ಬಿ.ಕೆ. ಅವರಿಗೆ ಅಧಿಕಾರ ಹಸ್ತಾಂತರ ಮಾಡಿದರು. ಇದೇ ವೇಳೆ ನೂತನ ಕಾರ್ಯದರ್ಶಿಯಾಗಿ ರವಿ ಕುಮಾರ್ ಪಿ. ಖಜಾಂಚಿಯಾಗಿ ದಿಲೀಪ್ ಕುಮಾರ್ ಎಚ್.ಕೆ. ಅವರು ಅಧಿಕಾರ ಸ್ವೀಕಾರ ಮಾಡಿದರು.

ಕಾರ್ಯಕ್ರಮದಲ್ಲಿ ಸಾಹಿತ್ಯ ಕ್ಷೇತ್ರದಲ್ಲಿ ಸಾಧನೆ ಮಾಡಿ ರಾಜ್ಯ ಮಟ್ಟದ ಕಾವ್ಯಶ್ರೀ ಪ್ರಶಸ್ತಿ ವಿಜೇತೆ ಸ್ಫೂರ್ತಿ ಎಸ್.ಆರ್. ಅವರನ್ನು ಸನ್ಮಾನಿಸಲಾಯಿತು.

.

error: Content is protected !!