9 C
Munich
Home News ಹಾಸನ: ಸುಸ್ಥಿರ ಅಭಿವೃದ್ಧಿಯಲ್ಲಿ ಭಾರತ ೯೯ನೇ ಸ್ಥಾನ – ವಿದ್ಯಾರ್ಥಿಗಳು ಆರ್ಥಿಕತೆಗೆ ಸಹಕಾರಿಯಾಗಬೇಕು

ಹಾಸನ: ಸುಸ್ಥಿರ ಅಭಿವೃದ್ಧಿಯಲ್ಲಿ ಭಾರತ ೯೯ನೇ ಸ್ಥಾನ – ವಿದ್ಯಾರ್ಥಿಗಳು ಆರ್ಥಿಕತೆಗೆ ಸಹಕಾರಿಯಾಗಬೇಕು

ಹಾಸನ: ಸುಸ್ಥಿರ ಅಭಿವೃದ್ಧಿಗಾಗಿ ೧೩ ಗುರಿಗಳನ್ನು ಅಳವಡಿಕೊಳ್ಳಲಾಗಿದ್ದು, ನಮ್ಮ ದೇಶ ಸುಸ್ಥಿರ ಅಭಿವೃದ್ಧಿಯಲ್ಲಿ ೯೯ನೇ ಸ್ಥಾನ ಪಡೆದಿದೆ ಎಂದು ನಿವೃತ್ತ ಸಹ ಪ್ರಾಧ್ಯಾಪಕಿ ಜೆ. ದೇವಕುಮಾರಿ ಅಭಿಪ್ರಾಯಪಟ್ಟರು.

ನಗರದ ಆರ್.ಸಿ. ರಸ್ತೆಯ ಗಂಧದಕೋಠಿ ಆವರಣದಲ್ಲಿರುವ ಮಹಿಳಾ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಅರ್ಥಶಾಸ್ತ್ರ ವಿಭಾಗದ ವತಿಯಿಂದ ಈಚೆಗೆ ಹಮ್ಮಿಕೊಂಡಿದ್ದ ಸಮಕಾಲೀನ ಭಾರತೀಯ ಆರ್ಥಿಕತೆ-ಪ್ರಸ್ತುತ ಸಮಸ್ಯೆಗಳು ಮತ್ತು ಸವಾಲುಗಳು ಎಂಬ ವಿಷಯದ ಕುರಿತ ವಿಶೇಷ ಉಪನ್ಯಾಸ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಭಾರತದ ಆರ್ಥಿಕತೆಯ ಹಿನ್ನೆಲೆಯನ್ನು ತಿಳಿದುಕೊಂಡಗ ಭಾರತ ತುಂಬಾ ಹಿಂದೆ ಉಳಿದಿತ್ತು ಎಂದು ತಿಳಿಸಿದರು.

ಬ್ರಿಟಿಷರ ಅವಧಿಯಲ್ಲಿ ಜಿಡಿಪಿ ಕುಸಿದು ಹೋಗಿತ್ತು ಇದಕ್ಕೆ ಕಾರಣ ಕೃಷಿ ಇಲಾಖೆ ಹಿಂದೆ ಉಳಿದಿತ್ತು ನೀರಾವರಿ ಸಮಸ್ಯೆ ಇತ್ತು. ನೀತಿ ಆಯೋಗವನ್ನು ರಚನೆ ಮಾಡಿತು ಸುಸ್ಥಿರ ಅಭಿವೃದ್ದಿಯನ್ನು ವಿಶ್ವಸಂಸ್ಥೆ ಅಳವಡಿಸಿಕೊಂಡಿತ್ತು ವಿಶ್ವ ಸಂಸ್ಥೆಯ ಪ್ರಕಾರ ಯಾವುದೆ ದೇಶ ಅಭಿವೃದ್ದಿ ಪೂರಕವಾಗಿರ ಬೇಕು.

ನಾವು ಅಭಿವೃದ್ದಿ ಸಾಧಿಸಬೇಕು ಎಂದು ತಿಳಿಸಿದರು. ಸಂಪನ್ಮೂಲಗಳನ್ನು ಮೀತವಾಗಿ ಬಳಸುವುದರೊಂದಿಗೆ ನಮ್ಮ ಮುಂದಿನ ಪಿಳಿಗೆಗೆ ಸುಭದ್ರ ಆರ್ಥಿಕತೆಯನ್ನು ಕಟ್ಟಿಕೊಡಬೇಕು. ನಮ್ಮ ದೇಶದ ಯುವ ಸಮುದಾಯ ದೇಶದ ಆರ್ಥಿಕತೆಯ ಬಗ್ಗೆ ತಿಳಿದುಕೊಂಡು ದೇಶದ ಪ್ರಗತಿಗೆ ಸಹಕಾರಿಯಾಗಬೇಕು ಎಂದು ಹೇಳಿದರು.

ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಂಶುಪಾಲ ಡಿ.ಕೆ. ಮಂಜಯ್ಯ ಮಾತನಾಡಿ, ವಿದ್ಯಾರ್ಥಿಗಳು ಅರ್ಥ ಶಾಸ್ತçವನ್ನು ಸರಳವೆಂದು ಭಾವಿಸಿ ಅರ್ಥೈಸಿಕೊಳ್ಳಲು ಪ್ರಯತ್ನಿಸಬೇಕು, ಕಲಿಯಬೇಕು, ಪ್ರೋತ್ಸಾಹಿಸಬೇಕು. ಅರ್ಥಶಾಸ್ತ್ರ ವಿಷಯದಲ್ಲಿ ಉದ್ಯೋಗವಕಾಶಗಳು ವ್ಯಾಪಕವಾಗಿದ್ದು, ಅವಕಾಶಗಳನ್ನು ಬಳಕೆ ಮಾಡಿ ಕೊಳ್ಳಬೇಕಾದಲ್ಲಿ, ಕಠಿಣ ಪ್ರಯತ್ನ, ವಿನಯ-ವಿನಮೃತೆ, ಶಿಸ್ತು ಎಲ್ಲವೂ ಅವಶ್ಯಕವಾಗಿರುತ್ತದೆ.

ಮಾನವರ ಜೀವನದಲ್ಲಿ ಅರ್ಥಶಾಸ್ತ್ರವು ಮುಖ್ಯ ಪಾತ್ರವನ್ನು ವಹಿಸಿದೆ, ಒಂದು ಉತ್ತಮ ಬದುಕು ಸಾಗಿಸಲು ಅರ್ಥಶಾಸ್ತ್ರವು ತುಂಬ ಮುಖ್ಯವಾಗಿರುತ್ತದೆ. ಅರ್ಥಶಾಸ್ತ್ರ ವಿಭಾಗದ ವಿಧ್ಯಾರ್ಥಿಗಳು ಅರ್ಥಶಾಸ್ತ್ರದಲ್ಲಿ ಹೆಚ್ಚು ಸಾಧನೆ ಮಾಡಬೇಕು ಎಂದು ತಿಳಿಸಿದರು.

ಅರ್ಥಶಾಸ್ತ್ರ ವಿಭಾಗದ ಮುಖ್ಯಸ್ಥೆ ಹೇಮಾವತಿ ಎಂ.ವಿ., ಐ.ಕ್ಯೂ.ಎ.ಸಿ. ಸಂಚಾಲಕ ಮೋಹನ್ ಕುಮರ್ ಜಿ.ಆರ್., ಸಹ ಸಂಚಾಲಕಿ ರಮ್ಯ ಡಿ.ಜೆ. ಅಧ್ಯಾಪಕಿ ಡಾ. ಸುನೀತ ಹಾಗೂ ಇತರರು ಹಾಜರಿದ್ದರು.

error: Content is protected !!