ಚಿಕ್ಕಮಗಳೂರು :ಜಿಲ್ಲೆಯ ಸಖರಾಯಪಟ್ಟಣದಲ್ಲಿ ಕಾಂಗ್ರೆಸ್ ಮುಖಂಡ ಗಣೇಶ್‌ಗೌಡ ಹತ್ಯೆ ಖಂಡಿಸಿ ತಪ್ಪಿತಸ್ಥರ ಮೇಲೆ ಕಠಿಣ ಕ್ರಮಕ್ಕೆ ಆಗ್ರಹಿಸಿ ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ಘಟಕದಿಂದ ನಗರದ ಹೇಮಾವತಿ ಪ್ರತಿಮೆ ಬಳಿ ಇದು ಪ್ರತಿಭಟನೆ ನಡೆಸಲಾಯಿತು.
ಈ ವೇಳೆ ಜಿಲ್ಲಾ ಮಾಧ್ಯಮ ಉಸ್ತುವಾರಿ ಫೈರೋಜ್ ಪಾಷ, ವಿಧಾನಸಭಾ ಕ್ಷೇತ್ರ ಅಧ್ಯಕ್ಷ ಶಜಿಲ್ ಅಹಮದ್, ಜಿಲ್ಲಾ ಉಪಾಧ್ಯಕ್ಷ ಸೈಯ್ಯದ್ ಫರಿದ್, ಜಿಲ್ಲಾ ಸಮಿತಿ ಸದಸ್ಯರಾದ ಕಾಜಿಮ್, ಅಮೀರ್ ಜಾನ್, ಫೈರೋಜ್, ಸೈಯ್ಯದ್ ನದಿಮ್, ಸಕಲೇಶಪುರ ಅಧ್ಯಕ್ಷ ವಾಜೀದ್, ಯಾಸಿನ್, ಸೈಯ್ಯದ್ ಅನ್ಸರ್, ಭೀಮ್ ಆರ್ಮಿಯ ಪ್ರದೀಪ್, ನಿಡುಗರಹಳ್ಳಿ ಸಿದ್ದಪ್ಪ, ತನ್ವಿರ್, ಗುಲಾಬ್ ಸಲೀಮ್, ಮುಸವ್ವಿರ್, ಸಮಿ ಉಲ್ಲಾ, ಇತರರು ಉಪಸ್ಥಿತರಿದ್ದರು










