11 C
Munich
Home News ಹಾಸನ: ಸುತ್ತೂರು ಜಾತ್ರಾ ಪ್ರಚಾರ ರಥಕ್ಕೆ ಭಕ್ತರಿಂದ ಭವ್ಯ ಸ್ವಾಗತ

ಹಾಸನ: ಸುತ್ತೂರು ಜಾತ್ರಾ ಪ್ರಚಾರ ರಥಕ್ಕೆ ಭಕ್ತರಿಂದ ಭವ್ಯ ಸ್ವಾಗತ

The promotional chariot, which is being paraded as part of the Suttur Jatra Mahotsav, which will be held from January 15-20, arrived in the city today and was welcomed by the All India Veerashaiva Lingayat Mahasabha and received with prayers.

ಹಾಸನ:  ಜ15-20ರ ವರೆಗೂ ನಡೆಯುವ ಸುತ್ತೂರು ಜಾತ್ರಾ ಮಹೋತ್ಸವ ಅಂಗವಾಗಿ ಸಂಚರಿಸುತ್ತಿರುವ ಪ್ರಚಾರದ ರಥ ಇಂದು ನಗರಕ್ಕೆ ಆಗಮಿಸಿದಾಗ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾದಿಂದ ಸ್ವಾಗತಿಸಿ ಪೂಜೆ ಸಲ್ಲಿಸುವ ಮೂಲಕ ಬರಮಾಡಿಕೊಂಡರು.

ಮೊದಲು ತಣ್ಣೀರುಹಳ್ಳ ಮಠ, ಶ್ರೀ ಬಸವೇಶ್ವವರ ಕಲ್ಯಾಣ ಮಂಟಪ ಹಾಗೂ ಶ್ರೀ ಜವೇನಹಳ್ಳಿ ಮಠಕ್ಕೆ ಸುತ್ತೂರು ಜಾತ್ರಾ ಮಹೋತ್ಸವದ ರಥ ಬಂದಾಗ ಆಡಳಿತ ಮಂಡಳಿಯವರು ಹಾಗೂ ಕಾಲೇಜಿನ ವಿದ್ಯಾರ್ಥಿಗಳು ಹಾಗೂ ಮಠದ ಭಕ್ತರು ಪೂಜೆ ಸಲ್ಲಿಸಿ ಸ್ವಾಗತಿಸಿದರು.

ಸುತ್ತೂರು ಜಾತ್ರಾ ಮಹೋತ್ಸವ ಅಂಗವಾಗಿ ರಾಜ್ಯದ ಹಲವು ಜಿಲ್ಲೆಯಲ್ಲಿ ಪ್ರಚಾರ ರಥಯಾತ್ರೆ ಸಂಚರಿಸಿ ಜಾತ್ರೊತ್ಸವ ಹಾಗೂ ವಿವಿಧ ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳ ಬಗ್ಗೆ ತಿಳಿಸಲಾಗುತ್ತಿದೆ.

ಈ ವೇಳೆ ಲಿಂಗಾಯತ ವೀರಶೈವ ಸಮಾಜದ ಜಿಲ್ಲಾಧ್ಯಕ್ಷ ಬಿ.ಪಿ. ಐಸಾಮಿಗೌಡ, ಉಪಾಧ್ಯಕ್ಷ ಬಿ.ಎಂ. ಭುವನಾಕ್ಷ ಹಾಗೂ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ತಾಲೂಕು ಅಧ್ಯಕ್ಷ ಕಟ್ಟಾಯ ಶಿವಕುಮಾರ್, ಕಿರಣ್ ಕುಮಾರ್ ಹೊಸಮನಿ, ತಣ್ಣೀರು ಹಳ್ಳ ಮಠದ ಮ್ಯಾನೇಜರ್ ಶಂಕರ್ ಜಗದೀಶ್, ಬಾಳ ನಾಗೇಶ್, ಶೋಭನ್ ಬಾಬು, ಯು.ಎಸ್. ಬಸವರಾಜ್, ಸೋಮಶೇಖರ್, ತಾಲ್ಲೂಕು ಮಹಿಳಾ ಘಟಕದ ಅಧ್ಯಕ್ಷೆ ಮಮತಾ ಪಾಟೀಲ್, ಪಾಲಾಕ್ಷ, ಧನಲಕ್ಷ್ಮಿ, ಇಂದ್ರಮ್ಮ, ಸಾವಿತ್ರಮ್ಮ, ಇಂಜಿನಿಯರ್ ಮಂಜುನಾಥ್, ಶಿವಪ್ಪ, ಲಿಂಗರಾಜು, ರೇಣುಕಾ ಇದ್ದರು.

The promotional chariot, which is being paraded as part of the Suttur Jatra Mahotsav, which will be held from January 15-20, arrived in the city today and was welcomed by the All India Veerashaiva Lingayat Mahasabha and received with prayers.

error: Content is protected !!