ಹಳೇಬೀಡು: ಸರ್ಕಾರಿ ಶಾಲೆಗೆ ಸ್ಟೀಲ್ ತಟ್ಟೆ, ಬಾಟಲಿ ಕೊಡುಗೆ ನೀಡಿದ ಉದ್ಯಮಿ  

ಹಳೇಬೀಡು: ಇಲ್ಲಿಯ ಪ್ರಸಿದ್ದ ಉದ್ಯಮಿ ಜೀಪ್ ಚಂದ್ರು ಅವರು ಸೋಮವಾರ ತಮ್ಮ ಹುಟ್ಟಿದ ಹಬ್ಬವನ್ನು ಅರ್ಥ ಪೂರ್ಣವಾಗಿ ಆಚರಿಸಿದರು. ಬೆಣ್ಣೆ ಗುಡ್ಡದ ಬಳಿ ಸರ್ಕಾರಿ ಶಾಲೆಯ 450 ಮಕ್ಕಳಿಗೆ ಸ್ಟೈನ್ ಲೆಸ್ ಸ್ಟೀಲ್ ಬಾಟಲಿ ವಿತರಿಸಿದರು.

ಹುಟ್ಟಿದ ಹಬ್ಬ ಆಚರಣೆಗಾಗಿ ಅನಗತ್ಯ ಹಣ ವೆಚ್ಚ ಮಾಡಿದರೆ, ಅದರಿಂದ ಯಾವುದೆ ಪ್ರಯೋಜನವಿಲ್ಲ. ಸರ್ಕಾರಿ ಶಾಲೆಯ ಮಕ್ಕಳಿಗೆ ಧಾನ ನೀಡಿದರೆ, ಗ್ರಾಮಿಣ ಭಾಗದ ಮಕ್ಕಳ ಶೈಕ್ಷಣಿಕ ಪ್ರಗತಿಗೆ ಅನುಕೂಲವಾಗುತ್ತದೆ.  ಈ ನಿಟ್ಟಿನಲ್ಲಿ ಸರ್ಕಾರಿ ಶಾಲೆಯ ಮಕ್ಕಳಿಗೆ ಪ್ರಸಕ್ತ ವರ್ಷ ವಾಟರ್ ಬಾಟಲಿ ವಿವರಿಸಿದ್ದೇವೆ ಎಂದರು.

ಕೃಷಿ ಪತ್ತಿನ ಸಹಕಾರ ಸಂಘದ ಮಾಜಿ ಅಧ್ಯಕ್ಷ ಬಿ.ಎಂ.ಮಲ್ಲಿಕಾರ್ಜನ ಮಾತನಾಡಿ, ಸರ್ಕಾರಿ ಶಾಲೆಯ ಮಕ್ಕಳ ಅನುಕೂಲಕ್ಕಾಗಿ ಜೀಪ್ ಚಂದ್ರಣ್ಣ ರವರು ಕುಡಿಯುವ ನೀರಿನ ಬಾಟಲಿ ಕೊಟ್ಟಿರುವುದು, ಉತ್ತಮ ಬೆಳವಣಿಗೆ. ಹಣವಂತರು ಹುಟ್ಟಿದ ಹಬ್ಬ, ವಿವಾಹ ವಾರ್ಷಿಕೋತ್ಸವ ಮೊದಲಾದ ಸಂದರ್ಭದಲ್ಲಿ ಸರ್ಕಾರಿ ಶಾಲೆಯ ಮಕ್ಕಳಿಗೆ ಶೈಕ್ಷಣಿಕ ಹಾಗೂ ಕ್ರೀಡಾ ಪರಿಕರಗಳನ್ನು ವಿತರಿಸುವುದನ್ನು ರೂಢಿಸಿಕೊಳ್ಳಬೇಕು ಎಂದರು..
ಮುಖಂಡರಾದ ಭೈರೇಶ್, ಲಿಂಗರಾಜು ಇದ್ದರು.