ಹಾಸನ: ಹೃದಯಾಘಾತದಿಂದ ಜನ ಸಾಯ್ತಿದ್ದಾರೆ. ಸರ್ಕಾರ ಕೋಮಾದಲ್ಲಿದೆ: ವಿಪಕ್ಷ ನಾಯಕ ಆರ್.ಅಶೋಕ್ ವಾಗ್ದಾಳಿ

Opposition leader R. Ashoka has expressed deep concern over the series of heart attack-related deaths and has lashed out at the government.

ಹಾಸನ, ಜುಲೈ 7, 2025: ಜಿಲ್ಲೆಯನ ಸರಣಿ ಹೃದಯಾಘಾತ ಸಾವು ಪ್ರಕರಣಗಳ ಬಗ್ಗೆ ವಿಪಕ್ಷ ನಾಯಕ ಆರ್. ಅಶೋಕ್ ತೀವ್ರ ಕಳವಳ ವ್ಯಕ್ತಪಡಿಸಿ, ಸರ್ಕಾರದ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ.

ಆಲೂರು ತಾಲೂಕು ಧರ್ಮಪುರಿಯಲ್ಲಿ ಅಶೋಕ್ ಅವರು ಸುದ್ದಿಗಾರರೊಂದಿಗೆ ಮಾತನಾಡಿ, “ಹಾಸನದಲ್ಲಿ ಪದೇ ಪದೇ ಹೃದಯಾಘಾತದಿಂದ ಸಾವುಗಳು ಸಂಭವಿಸುತ್ತಿವೆ. ಇದಕ್ಕೆ ಕೋವಿಡ್ ಲಸಿಕೆ ಕಾರಣ ಎಂದು ಮುಖ್ಯಮಂತ್ರಿಗಳು ಹೇಳಿಕೆ ನೀಡಿರುವುದು ನಗೆಪಾಟಲಿಗೆ ಒಳಗಾಗಿದೆ. ದೆಹಲಿಯ ಏಮ್ಸ್ ಮತ್ತು ಜಯದೇವ ಆಸ್ಪತ್ರೆಯ ರಿಪೋರ್ಟ್‌ಗಳನ್ನು ಮುಚ್ಚಿಹಾಕಲಾಗಿದೆ. ಕೋವಿಡ್ ಲಸಿಕೆ ಎಲ್ಲೆಡೆ ನೀಡಲಾಗಿದ್ದರೂ, ಕೇವಲ ಹಾಸನದಲ್ಲಿ ಮಾತ್ರ ಈ ಸಾವುಗಳು ಏಕೆ?” ಎಂದು ಪ್ರಶ್ನಿಸಿದರು.

“ಇದಕ್ಕೆ ಬೇರೆಯೇ ಕಾರಣವಿರಬೇಕು. ಸರ್ಕಾರ ಈ ಕಾರಣವನ್ನು ಕಂಡುಹಿಡಿಯಬೇಕು. ಜಿಲ್ಲಾ ಉಸ್ತುವಾರಿ ಸಚಿವರು ಹಾಸನಕ್ಕೆ ಭೇಟಿ ನೀಡದೆ ದೂರವೇ ಇದ್ದಾರೆ. ಹಿರಿಯ ಮಂತ್ರಿಗಳು ಮತ್ತು ಅಧಿಕಾರಿಗಳು ಬಂದರೆ ಪರಿಹಾರ ಸಿಗಬಹುದು. ಜನರು ಸಾಯುತ್ತಿದ್ದಾರೆ, ಸರ್ಕಾರ ಕೋಮಾ ಸ್ಥಿತಿಯಲ್ಲಿದೆ,” ಎಂದು ಟೀಕಿಸಿದರು.