ಹಾಸನ: ಪ್ರಸಿದ್ಧ ಸಾಹಿತಿ ಡಾ. ಎಂ.ಎಸ್. ಶೇಖರ್ ಅವರ ಅತ್ತೆ ವೆಂಕಟಮ್ಮ ನಿಧನ

Mrs. Venkatamma (85), mother-in-law of Dr. M.S. Shekhar, Dean of the Mysore University Art Society and renowned writer, passed away at 11.30 am on Monday at Sanjeevini Cooperative Hospital.

ಹಾಸನ: ಮೈಸೂರು ವಿವಿ ಕಲಾನಿಖಾಯದ ಡೀನ್ ಹಾಗೂ ಪ್ರಸಿದ್ಧ ಸಾಹಿತಿ ಡಾ||ಎಂ.ಎಸ್.ಶೇಖರ್ ಅವರ ಅತ್ತೆ ಶ್ರೀಮತಿ ವೆಂಕಟಮ್ಮ (85) ಅವರು ಸೋಮವಾರ ಬೆಳಗ್ಗೆ 11.30ಕ್ಕೆ ಸಂಜೀವಿನಿ ಸಹಕಾರಿ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ.

ಅವರು ಸಂಜೀವಿನಿ ಸಹಕಾರಿ ಆಸ್ಪತ್ರೆಯ ನಿರ್ದೇಶಕರಾಗಿದ್ದ ಹಾಗೂ ಶ್ರೀ ರಂಗನಾಥ ಪ್ರೌಢಶಾಲೆ, ಬಾಳುಪೇಟೆ ಸಂಸ್ಥಾಪಕರಾಗಿದ್ದ ದಿವಂಗತ ಎಚ್.ಟಿ. ಹನುಮಯ್ಯ ಅವರ ಧರ್ಮಪತ್ನಿ. ಸಂಜೀವಿನಿ ಸಹಕಾರಿ ಆಸ್ಪತ್ರೆಯ ನಿರ್ದೇಶಕರು ಹಾಗೂ ಆಲೂರು ತಾಲೂಕಿನ ಕಾಂಗ್ರೆಸ್ ಎಸ್.ಸಿ. ಮೋರ್ಚಾ ಅಧ್ಯಕ್ಷರಾದ ಹೆಚ್. ಸುರೇಶ್ ಅವರ ತಾಯಿ. ಮೃತ ವೆಂಕಟಮ್ಮ ಅವರು ಹೃದಯವಂತ ದಾನಿಯಾಗಿದ್ದು, ಸಂಜೀವಿನಿ ಸಹಕಾರಿ ಆಸ್ಪತ್ರೆಯ ಮಾಜಿ ಉಪಾಧ್ಯಕ್ಷರಾಗಿಯೂ, ಶ್ರೀ ರಂಗನಾಥ ಪ್ರೌಢಶಾಲೆ, ಬಾಳುಪೇಟೆ ಸಂಸ್ಥಾಪಕರಾಗಿಯೂ ಸೇವೆ ಸಲ್ಲಿಸಿದ್ದರು.

ಅವರು ಮಕ್ಕಳು, ಮೊಮ್ಮಕ್ಕಳು, ಅಳಿಯಂದಿರು, ಸೊಸೆಯಂದಿರು ಹಾಗೂ ಅಪಾರ ಬಂಧುಬಳಗವನ್ನು ಅಗಲಿದ್ದಾರೆ.

ಮೃತರ ಅಂತಿಮ ಸಂಸ್ಕಾರವು ಮಂಗಳವಾರ (10-02-2026) ಬೆಳಗ್ಗೆ 11 ಗಂಟೆಗೆ, ಅವರ ಕಾಫಿತೋಟದ ಮನೆ, ಹೆಧರುಗ್ಗ, ಬೆಳ್ಳಿಗೆಯಲ್ಲಿ ನಡೆಯಲಿದೆ ಎಂದು ಕುಟುಂಬದವರು ತಿಳಿಸಿದ್ದಾರೆ.

Mrs. Venkatamma (85), mother-in-law of Dr. M.S. Shekhar, Dean of the Mysore University Art Society and renowned writer, passed away at 11.30 am on Monday at Sanjeevini Cooperative Hospital.