ನುಗ್ಗೇಹಳ್ಳಿ : ಹೋಬಳಿ ಕೇಂದ್ರದ ಶ್ರೀ ಪಂಚಲಿಂಗೇಶ್ವರ ಧರ್ಮಸ್ಥಳ ಪಾದಯಾತ್ರೆಗಳ ಸೇವಾ ಸಮಿತಿ ವತಿಯಿಂದ ಮಹಾಶಿವರಾತ್ರಿಯ ಪ್ರಯುಕ್ತ ಶ್ರೀ ಕ್ಷೇತ್ರ ಧರ್ಮಸ್ಥಳಕ್ಕೆ 14ನೇ ವರ್ಷದ ಪವಿತ್ರ ಪಾದಯಾತ್ರೆ ಕೈಗೊಂಡಿದ್ದಾರೆ.
ಪ್ರತಿ ವರ್ಷದಂತೆ ಈ ವರ್ಷವೂ ಪಂಚಲಿಂಗೇಶ್ವರ ಧರ್ಮಸ್ಥಳ ಪಾದಯಾತ್ರೆಗಳ ಸೇವಾ ಸಮಿತಿ ವತಿಯಿಂದ ಮಹಾಶಿವರಾತ್ರಿಯ ಪ್ರಯುಕ್ತ 14ನೇ ವರ್ಷದ ಪವಿತ್ರ ಪಾದಯಾತ್ರೆಯನ್ನು ಗ್ರಾಮದ ಪುರಾಣ ಪ್ರಸಿದ್ಧ ಶ್ರೀ ಕಲ್ಯಾಣಿ ಆಂಜನೇಯ ಸ್ವಾಮಿ ಹಾಗೂ ಶ್ರೀ ಸದಾಶಿವ ಸ್ವಾಮಿ ಮತ್ತು ಸಂಕೋಲೆ ಬಸವಣ್ಣ ದೇವಾಲಯದಲ್ಲಿ ಸೋಮವಾರ ಬೆಳಗಿನ ಜಾವ ವಿಶೇಷ ಪೂಜೆ ಸಲ್ಲಿಸುವ ಮೂಲಕ ಸುಮಾರು 150ಕ್ಕೂ ಹೆಚ್ಚು ಜನರು ಪಾದಯಾತ್ರೆ ಕೈಗೊಂಡರು.
ಪಾದಯಾತ್ರೆಗೆ ಭಕ್ತಾದಿಗಳಲ್ಲಿ ಹೆಚ್ಚಿನ ಉತ್ಸಾಹ :
ಕಳೆದ 14 ವರ್ಷಗಳಿಂದ ಹೋಬಳಿ ಕೇಂದ್ರದ ನಾನಾ ಗ್ರಾಮಗಳ ಜನರು ಶ್ರೀ ಕ್ಷೇತ್ರ ಧರ್ಮಸ್ಥಳಕ್ಕೆ ಮಹಾಶಿವರಾತ್ರಿಯ ಪ್ರಯುಕ್ತ ಪಾದಯಾತ್ರೆ ಕೈಗೊಳ್ಳುತ್ತಾ ಬರುತ್ತಿದ್ದಾರೆ ಬಿಸಿಲನ್ನು ಲೆಕ್ಕಿಸದೆ ಪಾದಯಾತ್ರೆಯಲ್ಲಿ ಹೆಚ್ಚು ಲವಲವಿಕೆಯಿಂದ ಶ್ರೀ ಮಂಜುನಾಥ ಸ್ವಾಮಿಯ ಪಠಣದೊಂದಿಗೆ ಹೆಚ್ಚಿನ ಉತ್ಸಾಹ ದೊಂದಿಗೆ ಪಾದಯಾತ್ರೆ ಕೈಗೊಂಡಿದ್ದಾರೆ.
ಫೆಬ್ರವರಿ 9ರ ಸೋಮವಾರದಿಂದ 14ನೇ ಶನಿವಾರದವರೆಗೆ ಪಾದಯಾತ್ರೆ ಶನಿವಾರ ಬೆಳಗಿನ ಜಾವ ನೇತ್ರಾವತಿ ನದಿಯಲ್ಲಿ ಸ್ನಾನ ನೆರವೇರಿಸಿ ಶ್ರೀ ಮಂಜುನಾಥ ಸ್ವಾಮಿ ದೇವರ ದರ್ಶನ ಪಡೆಯಲಿದ್ದಾರೆ.
ಶ್ರೀ ಪಂಚಲಿಂಗೇಶ್ವರ ಧರ್ಮಸ್ಥಳ ಪಾದಯಾತ್ರೆಗಳ ಸೇವಾ ಸಮಿತಿ ಅಧ್ಯಕ್ಷ ಹೋಟೆಲ್ ರಾಜಣ್ಣ ಮಾತನಾಡಿ, ಹೋಬಳಿ ಕೇಂದ್ರದಿಂದ ಕಳೆದ 14 ವರ್ಷಗಳಿಂದ ಮಹಾಶಿವರಾತ್ರಿಯ ಪ್ರಯುಕ್ತ ಪಾದಯಾತ್ರೆ ಕೈಗೊಳ್ಳಲಾಗುತ್ತಿದೆ ಪಾದಯಾತ್ರೆಯಲ್ಲಿ ಪಾಲ್ಗೊಳ್ಳುತ್ತಿರುವವರು ಸುರಕ್ಷತೆಗೆ ಹಾಗೂ ಸ್ವಚ್ಛತೆಗೆ ಹೆಚ್ಚಿನ ಆದ್ಯತೆ ನೀಡಬೇಕು ಸಮಿತಿ ತಿಳಿಸಿರುವ ಮಾರ್ಗ ಸೂಚನೆಯಂತೆ ಪಾದಯಾತ್ರೆ ಕೈಗೊಳ್ಳಬೇಕು ಪ್ರತಿದಿನ ಸಂಜೆ ಶ್ರೀ ಮಂಜುನಾಥ ಸ್ವಾಮಿ ಭಜನೆ ಕಾರ್ಯಕ್ರಮ ಸೇರಿದಂತೆ ದೇವರಿಗೆ ವಿಶೇಷ ಪೂಜೆ ಮಹಾಮಂಗಳಾರತಿ ನೆರವೇರಲಿದೆ.
ಶ್ರೀ ಕಲ್ಯಾಣಿ ಆಂಜನೇಯ ಸ್ವಾಮಿ ಅರ್ಚಕ ರವಿಶಾಚಾರ್ ಮಾತನಾಡಿ, ಭಕ್ತಿ ಭಾವದೊಂದಿಗೆ ಮಹಾಶಿವರಾತ್ರಿಯ ಪ್ರಯುಕ್ತ ಭಕ್ತರು ಪಾದಯಾತ್ರೆಯಲ್ಲಿ ಪಾಲ್ಗೊಂಡಿದ್ದಾರೆ ಪಾದಯಾತ್ರೆಯಿಂದ ಉತ್ತಮ ಆರೋಗ್ಯದ ಜೊತೆಗೆ ಧಾರ್ಮಿಕ ಭಾವನೆ ಹೆಚ್ಚಾಗುವುದರ ಜೊತೆಗೆ ಮನಸ್ಸಿಗೆ ಶಾಂತಿಯು ಲಭಿಸಲಿದೆ ಎಂದರು.
ಪ್ರತಿವರ್ಷದಂತೆ ಈ ವರ್ಷವೂ ಹೋಬಳಿ ಕೇಂದ್ರೀಯ ಉದ್ಯಮಿ ಎನ್‌ಬಿ ವಿನಯ್ ಪಾದಯಾತ್ರೆಗಳ ಊಟದ ವ್ಯವಸ್ಥೆಗಾಗಿ ವಾಹನದ ವ್ಯವಸ್ಥೆ ಮತ್ತು ಕಳೆದ 14 ವರ್ಷಗಳಿಂದ ಪಾದಯಾತ್ರೆಯಲ್ಲಿ ಪಾಲ್ಗೊಳ್ಳುತ್ತಿರುವ ಭಕ್ತರಿಗೆ ಹೆಚ್ಚಿನ ಸಹಕಾರ ನೀಡುತ್ತಿರುವ ರಾಷ್ಟ್ರೀಯ ಹೆದ್ದಾರಿ ಕಾರೇ ಕೆರೆ ಗೇಟ್ ನ ರೇಷ್ಮಾ ಶೇಖರ್ ದಂಪತಿಗಳನ್ನು ಸನ್ಮಾನಿಸಲಾಯಿತು.
ಈ ಸಂದರ್ಭದಲ್ಲಿ ಸಮಿತಿಯ ಗೌರವಾಧ್ಯಕ್ಷ ದೊಡ್ಡೇಗೌಡ, ಉಪಾಧ್ಯಕ್ಷ ಮುದ್ದನಹಳ್ಳಿ ರಾಜಣ್ಣ, ಕಾರ್ಯದರ್ಶಿ ಎನ್ ಎಸ್ ಗಿರೀಶ್, ಖಜಾಂಚಿ ವಿಮಲ್ ಸೇಠು, ಸದಸ್ಯರಾದ ವಿರೂಪಾಕ್ಷ, ಗಣೇಶ್, ಕಂಬೇಗೌಡ, ಗುಂಡ (ಪುರಿ). ಎನ್ ಕೆ ಲೋಕೇಶ, ರವಿ ಆರ್ಟ್ಸ್, ನಾರಾಯಣ್ ಗೌಡ, ಹೊನ್ನೇಶ್, ವಿಜಯಲಕ್ಷ್ಮಿ ಜಗದೀಶ್, ಒಂಟಿ ಮಾವಿನಹಳ್ಳಿ ಮಂಜಣ್ಣ, ಭಟ್ರು ಸಂತೇ ಶಿವರ ಸಿದ್ದಲಿಂಗ ಸ್ವಾಮಿ, ಮಹೇಶ್ ( ಶ್ರೀನಿವಾಸ್), ಮುದ್ದನಹಳ್ಳಿ ಯತೀಶ್, ಕುಳ್ಳೇಗೌಡ, ಅನುಪಮಾ, ರಾಧಾ ರಮೇಶ್, ಸುಜಾತ ಕಾಂತರಾಜ್, ಭಾಗ್ಯಮ್ಮ ಬಸವರಾಜ್, ಕುಮಾರಿ ಲೋಕೇಶ್, ಭಾಗ್ಯಮ್ಮ ಆನಂದ್, ರವಿ ಮಂಜ ಮರಿ, ಹಾಗೂ ಪಾದಯಾತ್ರಿಗಳು ಹಾಜರಿದ್ದರು.
The Sri Panchalingeshwara Dharmasthala Padayatra Service Committee of Nuggehalli Hobli Kendra has undertaken the 14th annual holy padayatra to Sri Kshetra Dharmasthala on the occasion of Mahashivratri.










