ಚನ್ನರಾಯಪಟ್ಟಣ: ಯಾವುದೇ ಸಂಘ ಸಂಸ್ಥೆಗಳಿರಲಿ ಪಾರದರ್ಶಕ ವ್ಯವಹಾರ ಹೊಂದಿದ್ದಲ್ಲಿ ಪ್ರಗತಿ ಕಾಣಲು ಸಾಧ್ಯ ಎಂದು ಶಾಸಕ ಸಿ.ಎನ್.ಬಾಲಕೃಷ್ಣ ಹೇಳಿದರು.
ತಾಲೂಕಿನ ಮತಿಘಟ್ಟ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಸ್ಥಾನಕ್ಕೆ ಅವಿರೋಧವಾಗಿ ಆಯ್ಕೆಯಾದ ಸಬ್ಬನಹಳ್ಳಿ, ಗಂಗಾಧರ್ ಅವರನ್ನು ಬುಧವಾರ ಅಭಿನಂದಿಸಿ ಮಾತನಾಡಿ, ವ್ಯವಹಾರದಲ್ಲಿ ನಂಬಿಕೆ ಹಾಗೂ ವಿಶ್ವಾಸವು ಪ್ರಮುಖ ಪಾತ್ರ ವಹಿಸಲಿದೆ ಎಂದರು.
ಕೃಷಿ ಪತ್ತಿನ ಸಹಕಾರ ಸಂಘಗಳ ಮೂಲಕ ತಾಲೂಕಿನ ಬಹುತೇಕ ರೈತರಿಗೆ ಶೂನ್ಯ ಬಡ್ಡಿ ದರದಲ್ಲಿ ಸಾಲ ಸೌಲಭ್ಯ ಕಲ್ಪಿಸಲಾಗಿದೆ. ಅಲ್ಲದೆ ಸ್ವಸಹಾಯ ಸಂಘಗಳಿಗೂ ಕಡಿಮೆ ಬಡ್ಡಿ ದರದಲ್ಲಿ ಸಾಲ ಒದಗಿಸಲಾಗಿದೆ ಎಂದು ತಿಳಿಸಿದರು.
ಕೇವಲ ೧೦ ಗುಂಟೆ ಕೃಷಿ ಜಮೀನು ಹೊಂದಿರುವ ರೈತರಿಗೂ ಸಹ ಸಾಲ ನೀಡುವ ವ್ಯವಸ್ಥೆ ಮಾಡಲಾಗಿದೆ. ಬಹುತೇಕ ಸಂಘಗಳ ಮೂಲಕ ಪಹಣಿ ವಿತರಣೆಗೂ ಅವಕಾಶ ಕಲ್ಪಿಸಲಾಗಿದೆ ಎಂದು ಮಾಹಿತಿ ನೀಡಿದರು.
ಇನ್ನು ಸಂಕಷ್ಟದಲ್ಲಿದ್ದ ರೈತರಿಗೆ ಹೈನುಗಾರಿಕೆ ವರವಾಗಿ ಪರಿಣಮಿಸಿದೆ. ಇಂದು ತಾಲೂಕಿನ ಪ್ರತಿ ಕುಟುಂಬಗಳು ಹೈನುಗಾರಿಕೆಯಲ್ಲಿ ತೊಡಗುವ ಮೂಲಕ ತಮ್ಮ ಬದುಕನ್ನು ರ‍್ಥಿಕವಾಗಿ ಸದೃಢ ಗೊಳಿಸಿಕೊಂಡಿರುವುದು ವಿಶೇಷ ಸಂಗತಿ ಎಂದರು.
ಅಧ್ಯಕ್ಷ ಸ್ಥಾನಕ್ಕೆ ಅವಿರೋಧವಾಗಿ ಆಯ್ಕೆಯಾದ ಸಬ್ಬನಹಳ್ಳಿ, ಗಂಗಾಧರ್ ಅವರನ್ನು ಶಾಸಕರು ಹಾಗೂ ಸಂಘದ ವತಿಯಿಂದ ಅಭಿನಂದಿಸಲಾಯಿತು. ಮಾಜಿ ಅಧ್ಯಕ್ಷರಾದ ಎ.ಜಿ.ಪ್ರಭಾಕರ್, ಶ್ರೀಕಂಠೇಗೌಡ, ಗಿರೀಶ್, ಕಾಂತರಾಜ್, ಸುನೀಲ್, ಗ್ರಾಮ ಪಂಚಾಯಿತಿ ಸದಸ್ಯ ಯಧುರಾಜ್ ಸಹಕಾರ ಇಲಾಖೆ ಅಧಿಕಾರಿ ಮಧು, ನರ‍್ದೇಶಕರು, ಕರ‍್ಯನರ‍್ವಾಹಕ ಅಧಿಕಾರಿ ಮಧು ಹಾಗೂ ಇನ್ನಿತರರು ಇದ್ದರು










